ನಂಬಿದವರ ನಿಜದೈವ ಶ್ರೀವೀರಭದ್ರ
ಭಕ್ತರ ಆರಾಧ್ಯ ದೈವ ಶ್ರೀ ವೀರಭದ್ರನು ಕಲ್ಲಿನಂತೆ ತನುವಾದರೂ
ಹೂವಿನಂತ ಮನಸ್ಸಿನವನು.
ನಂಬಿದವರ ನಿಜ ದೈವವಾಗಿ ಅನಾದಿಕಾಲದಿಂದಲೂ ಇಂದಿನ ವರೆಗೂ
ವೀರಭದ್ರನ ಅನೇಕ ಲೀಲೆ ಪವಾಡಗಳನ್ನು ಇಂದಿಗೂ ಸಹ ನಾವು ಕಾಣಬಹುದಾಗಿದೆ.
ವಡಪುಗಳಲ್ಲಿ "ವೀರಭದ್ರ ನಿನ್ನ ಪವಾಡ ಅಂದಿಗುಂಟು ಇಂದಿಗಿಲ್ಲ ಎಂಬ ಶತದ್ರೋಹಿಗಳಿಗೆ ನೀನೇ ಗಂಡ"
ಎಂಬ ನಾಣ್ಣುಡಿಯಂತೆ ವೀರಭದ್ರನನ್ನು ಮನಸಾರೆ ಭಕ್ತಿಯಿಂದ ಭಜಿಸಿ ಶ್ರೀ ವೀರಭದ್ರನಿಗೆ
ಸ್ವತಃ ತಮ್ಮ ಕೈಯಿಂದ ಪ್ರಸಾದವನ್ನು ಉಣಿಸಿದ ಪ್ರಸಂಗವು ಈ ಶಿವಶರಣರ ಚರಿತ್ರೆಗಳಲ್ಲಿ
ನಾವು ಇಂದಿಗೂ ಸಹ ಕಾಣಬಹುದಾಗಿದೆ.
17ನೇ ಶತಮಾನದ ಶಿವಶರಣ ತಿಂಥಣಿ ಮೌನೇಶ್ವರರು ರಾಯಚೋಟಿ ಶ್ರೀವೀರಭದ್ರಸ್ವಾಮಿಗೆ
ಮೀಸಲು ತುಪ್ಪವನ್ನು ಉಣಿಸಿದರು.
ಇದೇ ರೀತಿಯಲ್ಲಿ ಕರ್ನೂಲ್ ಜಿಲ್ಲೆಯ ಆಸ್ಪರಿ ಮಂಡಲದ ಕೈರುಪ್ಪಲ ಶ್ರೀ ವೀರಭದ್ರೇಶ್ವರ ಸ್ವಾಮಿಗೆ
ಪೆದ್ದಹೋತೂರು ಶಿವಶರಣ ಶ್ರೀಉಚ್ಚವೀರಪ್ಪ ತಾತನವರು ಅನ್ನ ಪ್ರಸಾದವನ್ನು ಉಣಿಸಿದ್ದನ್ನು
ಈ ಚಿತ್ರಪಟಗಳಲ್ಲಿ ಕಾಣಬಹುದು.
ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ
09-030322