ಶಿಲಾಶಾಸನಗಳಲ್ಲಿ ವೀರಭದ್ರ
ಶಿವಮೊಗ್ಗ ಜಿಲ್ಲೆಯ ಶಾಸನಗಳ ಪೈಕಿ " ಕ್ರಿ.ಶ. ೧೩೭೭ರ ಅರಗದ ವೀರಭದ್ರ
ದೇಗುಲ ಶಾಸನದಲ್ಲಿ (ತೀ.ಹ ೧೬) ರಾಣಿವಾಸ ಮಂಜಾದೇವಿ ಅರಗದ ವೀರಭದ್ರದೇವರಿಗೆ.....'
ದೇಗುಲ ನಿರ್ಮಾಣ ಮಾಡಿಸಿದ ಬಗ್ಗೆ ಹೇಳಿದೆ. ಜೊತೆಗೆ ಹಾಗೆ, ಮಾಡಿ
'ಸ್ವರ್ಗವ ಸೂರುಗೊಂಡಳು' ಎಂದೂ ಹೇಳಿದೆ. ಈ ಮಾತು, ವೀರಭದ್ರಗುಡಿ ನಿರ್ಮಿಸಿ
ಪಡೆದ ಪುಣ್ಯದ ಅಂಶವೆಂಬಂತೆ ಮಂಡಿತವಾಗಿದೆ ಎನ್ನಬೇಕು.
ಕ್ರಿ.ಶ. ೧೪೦೪ ನೀತಗೆರೆ ಶಾಸನದಲ್ಲಿ ವೀರಭದ್ರ ದೇಗುಲದ ಭಿತ್ತಿ ಶಾಸನವು
(ಚನ್ನಗಿರಿ ೨೮೭ ಈಗ ದಾವಣಗೆರೆ ಜಿಲ್ಲೆ) 'ರುದ್ರನ ಸುತ ವೀರಭದ್ರ' ಎಂದಿದೆ.
ದಕ್ಷನೊಂದಿಗೆ ವೀರಭದ್ರ ಕಾಳಗದ ಚಿತ್ರಣವನ್ನು ನೀಡಿದೆ.
ಇದು ಆಗಮಗಳ ವಿಷಯವನ್ನು ೧೫ನೇ ಶತಮಾನದಲ್ಲಿಯೂ ಪ್ರತಿಪಾದಿಸಿದಂತೆ ಆಗಿದೆ.
ಕೃಪೆ: ಮಹಾ ವೀರಭದ್ರ, ಡಾll ಎಂ.ಜಿ.ನಾಗರಾಜ್
ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ