ಸಪ್ತದಶಃ ಪರಿಚ್ಛೇದಃ
ಪ್ರಸಾದಿಸ್ಥಲಾಂತರ್ಗತ
ನವವಿಧಲಿಂಗ ಸ್ಥಲ ಪ್ರಸಂಗಃ
ಅಥ ಪ್ರಸಾದಿಸ್ಥಲಮ್
ಹೇ ರೇಣುಕ ಗಣೇಶ್ವರನೇ, ಮಾಹೇಶ್ವರಸ್ಥಲದಲ್ಲಿ ಯಾವ ಯಾವ ಸ್ಥಲ ಭೇದಗಳಿರುವವೋ ಅವುಗಳು ನಿಮ್ಮಿಂದ ಹೇಳಲ್ಪಟ್ಟವು. ಇನ್ನು ಪ್ರಸಾದಿಸ್ಥಲವನ್ನು ಆಶ್ರಯಿಸಿದ ಸ್ಥಲಭೇದಗಳನ್ನು ಎನಗೆ ಹೇಳುವಂತಹವನಾಗು.
|| ಅಗಸ್ತ್ಯ ಉವಾಚ ||
ಸ್ಥಲಾನಿ ತಾನಿ ಚೋಕ್ತಾನಿ
ಯಾನಿ ಮಾಹೇಶ್ವರಸ್ಥಲೇ |
ವದಸ್ವ ಸ್ಥಲಭೇದಂ ಮೇ
ಪ್ರಸಾದಿಸ್ಥಲ ಸಂಶ್ರಿತಮ್ || 17-1
ಹೇ ಮುನೀಶ್ವರನೇ, ಈ ಪ್ರಸಾದಿಸ್ಥಲದಲ್ಲಿ ಒಂಭತ್ತು ಸ್ಥಲ ಭೇದಗಳು ಹೇಳಲ್ಪಟ್ಟಿವೆ. ಅವುಗಳಲ್ಲಿ ಮೊದಲನೆಯದು ಕಾಯಾನುಗ್ರಹಸ್ಥಲ. ಅನಂತರ ಇಂದ್ರಿಯಾನುಗ್ರಹಸ್ಥಲ ಆಮೇಲೆ ಪ್ರಾಣಾನುಗ್ರಹಸ್ಥಲ.
ಅದಾದ ಮೇಲೆ ಕಾಯಾರ್ಪಿತಸ್ಥಲ. ನಂತರ ಕರಣಾರ್ಪಿತಸ್ಥಲ, ಅದಾದ ಮೇಲೆ ಭಾವಾರ್ಪಿತಸ್ಥಲ, ತರುವಾಯ ಶಿಷ್ಯಸ್ಥಲ,.
ಅದಾದ ಮೇಲೆ ಶುಶ್ರೂಷಾಸ್ಥಲ ಮತ್ತು ಕೊನೆಯದಾದ ಸೇವ್ಯ ಸ್ಥಲ. ಇನ್ನು ಕ್ರಮವಾಗಿ ಇವುಗಳ ಲಕ್ಷಣಗಳನ್ನು ಕೇಳು
|| ಶ್ರೀ ರೇಣುಕ ಉವಾಚ ||
#ಸ್ಥಲಭೇದಾ ನವ ಪ್ರೋಕ್ತಾಃ
ಪ್ರಸಾದಿಸ್ಥಲ ಸಂಶ್ರಿತಾಃ |
ಕಾಯಾನುಗ್ರಹಣಂ ಪೂರ್ವಮ್
ಇಂದ್ರಿಯಾನುಗ್ರಹಂ ತತಃ || 17-2
ಈ (ಜ್ಞಾನಾಚಾರ ಸಂಪನ್ನನಾದ) ಸ್ವಕಾಯಯೋಗಿಯು ಈ ಲೋಕದಲ್ಲಿ ತನ್ನ ಕಾಯವನ್ನು (ದೇಹವನ್ನು) ತೋರಿಸುತ್ತಾ ಜನರಿಗೆ ಅನುಗ್ರಹ ಮಾಡುತ್ತಾನೆ. ಆದ್ದರಿಂದ ಈ ಯೋಗಿಗೆ ‘ಕಾಯಾನುಗ್ರಾಹಕನು’ ಎಂಬುದಾಗಿ ಹೇಳುತ್ತಾರೆ (ತನ್ನ ಕಾಯದ ದರ್ಶನ ಮಾತ್ರದಿಂದಲೇ ಜೀವರನ್ನು ಅನುಗ್ರಹಿಸುತ್ತಾನೆ. ಅಂತೆಯೇ ಇವನು ಕಾಯಾನುಗ್ರಾಹಕನಾಗಿದ್ದಾನೆ).
ಪ್ರಾಣಾನುಗ್ರಹಣಂ ಪಶ್ಚಾತ್
ತತಃ ಕಾಯಾರ್ಪಿತಂ ಮತಮ್|
ಕರಣಾರ್ಪಿತ ಮಾಖ್ಯಾತಮ್
ತತೋ ಭಾವಾರ್ಪಿತಂ ಮತಮ್ || 17-3
ನಿಷ್ಕಲನಾದ ಶಿವನು ಹೇಗೆ ಲೀಲಾವಿಗ್ರಹಗಳಲ್ಲಿ ಪ್ರವೇಶಿಸಿ ಜೀವಿಗಳನ್ನು ಅನುಗ್ರಹಿಸುವನೋ ಹಾಗೇ ಈ ಯೋಗಿಯು ಶರೀರದಲ್ಲಿದ್ದುಕೊಂಡು (ತನ್ನ ದಿವ್ಯದೇಹದಲ್ಲಿದ್ದುಕೊಂಡು) ಸರ್ವರನ್ನು ಅನುಗ್ರಹಿಸುತ್ತಾನೆ.
#ಶಿಷ್ಯಸ್ಥಲಂ ತತಃ ಪ್ರೋಕ್ತಮ್
ಶುಶ್ರೂಷಾ ಸ್ಥಲಮೇವ ಚ |
ತತಃ ಸೇವ್ಯಸ್ಥಲಂ ಚೈಷಾಮ್
ಕ್ರಮಶಃ ಶ್ರುಣು ಲಕ್ಷಣಮ್ || 17-4
ಶಿವನು ತನ್ನ ಲೀಲಾವಿಗ್ರಹಗಳಲ್ಲಿ ಇರುವಂತಹವನಾಗಿ ಹೇಗೆ ಆ ವಿಗ್ರಹಗಳ ಸಂಗರಹಿತನಾಗಿರುತ್ತಾನೆಯೋ ಅದರಂತೆ ಶರೀರದಲ್ಲಿರುವ ಯೋಗಿಯೂ ಸಹ ಯಾವಾಗಲೂ ನಿಸ್ಸಂಗನಾಗಿರುತ್ತಾನೆ.
ಇತಿ ಪ್ರಸಾದಿಸ್ಥಲಮ್
---------------------
ಅಥ ಕಾಯಾನುಗ್ರಹಸ್ಥಲಮ್
ಅನುಗೃಹ್ಣಾತಿ ಯಲ್ಲೋಕಾನ್
ಸ್ವಕಾಯಂ ದರ್ಶಯನ್ನಸೌ |
ತಸ್ಮಾದೇಷ ಸಮಾಖ್ಯಾತಃ
ಕಾಯಾನುಗ್ರಹ ನಾಮಕಃ || 17-5
ಈ (ಜ್ಞಾನಾಚಾರ ಸಂಪನ್ನನಾದ) ಸ್ವಕಾಯಯೋಗಿಯು ಈ ಲೋಕದಲ್ಲಿ ತನ್ನ ಕಾಯವನ್ನು (ದೇಹವನ್ನು) ತೋರಿಸುತ್ತಾ ಜನರಿಗೆ ಅನುಗ್ರಹ ಮಾಡುತ್ತಾನೆ. ಆದ್ದರಿಂದ ಈ ಯೋಗಿಗೆ ‘ಕಾಯಾನುಗ್ರಾಹಕನು’ ಎಂಬುದಾಗಿ ಹೇಳುತ್ತಾರೆ (ತನ್ನ ಕಾಯದ ದರ್ಶನ ಮಾತ್ರದಿಂದಲೇ ಜೀವರನ್ನು ಅನುಗ್ರಹಿಸುತ್ತಾನೆ. ಅಂತೆಯೇ ಇವನು ಕಾಯಾನುಗ್ರಾಹಕನಾಗಿದ್ದಾನೆ).
#ಯಥಾ ಶಿವೋನುಗೃಹ್ಣಾತಿ
ಮೂರ್ತಿಮಾವಿಶ್ಯ ದೇಹಿನಃ |
ತಥಾ ಯೋಗೀ ಶರೀರಸ್ಥಃ
ಸರ್ವಾನುಗ್ರಾಹಕೋ ಭವೇತ್ || 17-6
ನಿಷ್ಕಲನಾದ ಶಿವನು ಹೇಗೆ ಲೀಲಾವಿಗ್ರಹಗಳಲ್ಲಿ ಪ್ರವೇಶಿಸಿ ಜೀವಿಗಳನ್ನು ಅನುಗ್ರಹಿಸುವನೋ ಹಾಗೇ ಈ ಯೋಗಿಯು ಶರೀರದಲ್ಲಿದ್ದುಕೊಂಡು (ತನ್ನ ದಿವ್ಯದೇಹದಲ್ಲಿದ್ದುಕೊಂಡು) ಸರ್ವರನ್ನು ಅನುಗ್ರಹಿಸುತ್ತಾನೆ.
ಶಿವಃ ಶರೀರಯೋಗೇಪಿ
ಯಥಾ ಸಂಗ ವಿವರ್ಜಿತಃ |
ತಥಾ ಯೋಗೀ ಶರೀರಸ್ಥೋ
ನಿಃಸಂಗೋ ವರ್ತತೇ ಸದಾ || 17-7
ಶಿವನು ತನ್ನ ಲೀಲಾವಿಗ್ರಹಗಳಲ್ಲಿ ಇರುವಂತಹವನಾಗಿ ಹೇಗೆ ಆ ವಿಗ್ರಹಗಳ ಸಂಗರಹಿತನಾಗಿರುತ್ತಾನೆಯೋ ಅದರಂತೆ ಶರೀರದಲ್ಲಿರುವ ಯೋಗಿಯೂ ಸಹ ಯಾವಾಗಲೂ ನಿಸ್ಸಂಗನಾಗಿರುತ್ತಾನೆ.
#ಶಿವಭಾವನಯಾ ಯುಕ್ತಃ
ಸ್ಥಿರಯಾ ನಿರ್ವಿಕಲ್ಪಯಾ |
ಶಿವೋ ಭವತಿ ನಿರ್ಧೂತ-
ಮಾಯಾವೇಶ ಪರಿಪ್ಲವಃ || 17-8
ನಿರ್ವಿಕಲ್ಪವಾದ (ಭೇದಬುದ್ಧಿಯಿಲ್ಲದ) ಸ್ಥಿರವಾದ ಶಿವಭಾವನೆಯಿಂದ ಕೂಡಿಕೊಂಡ ಯೋಗೀಶ್ವರನು ಮಾಯಾವೇಶದಿಂದಾಗುವ ಭಾವನೆೆಗಳನ್ನು ಕೊಡಹಿಕೊಂಡವನಾಗಿ ಶಿವನೇ ತಾನಾಗಿರುತ್ತಾನೆ.
ಚಿತ್ತವೃತ್ತಿಷು ಲೀನಾಸು
ಶಿವೇ ಚಿತ್ಸುಖಸಾಗರೇ |
ಅವಿದ್ಯಾಕಲ್ಪಿತಂ ವಸ್ತು
ನಾನ್ಯತ್ ಪಶ್ಯತಿ ಸಂಯಮೀ || 17-9
ಈ ಯೋಗೀಶ್ವರನ ಚಿತ್ತವೃತ್ತಿಗಳು (ಮನೋವರ್ತನೆಗಳು) ಚಿದಾನಂದ ಸಾಗರನಾದ ಶಿವನಲ್ಲಿಯೇ ಲೀನವಾಗಿರುವುದರಿಂದ ಈ ಸಂಯಮಿಯು ಅವಿದ್ಯಾಕಲ್ಪಿತವಾದ ಯಾವ ವಸ್ತುವನ್ನೂ ನೋಡುವುದಿಲ್ಲ.
#ನೇದಂ ರಜತಮಿತ್ಯುಕ್ತೇ
ಯಥಾ ಶುಕ್ತಿಃ ಪ್ರಕಾಶತೇ |
ನೇದಂ ಜಗದಿತಿ ಜ್ಞಾತೇ
ಶಿವತತ್ತ್ವಂ ಪ್ರಕಾಶತೇ || 17-10
ಶುಕ್ತಿಯಲ್ಲಿ (ಕಪ್ಪೆಚಿಪ್ಪಿನಲ್ಲಿ) ಬೆಳ್ಳಿ ತೋರುತ್ತಿರುವಾಗ ಇದು ಬೆಳ್ಳಿಯಲ್ಲ ಎಂಬುದಾಗಿ ಯಥಾರ್ಥ ಜ್ಞಾನವಾದರೂ ಹೇಗೆ ಶುಕ್ತಿಯೇ ಪ್ರಕಾಶಿಸುವುದೋ ಅದರಂತೆ ಇದು ಜಗತ್ತಲ್ಲ ಎಂಬ ತಿಳುವಳಿಕೆಯುಂಟಾಗಲು ಆಗ ಶಿವತತ್ತ್ವವೇ ಪ್ರಕಾಶಿಸುತ್ತದೆ.
ಯಥಾ ಸ್ವಪ್ನಕೃತಂ ವಸ್ತು
ಪ್ರಬೋಧೇನೈವ ಶಾಮ್ಯತಿ |
ತಥಾ ಶಿವಸ್ಯ ವಿಜ್ಞಾನೇ
ಸಂಸಾರಂ ನೈವ ಪಶ್ಯತಿ || 17-11
ಸ್ವಪ್ನದಲ್ಲಿ ತೋರುವ ವಸ್ತುಗಳು ಎಚ್ಚರಿಕೆಯಾದ ಮೇಲೆ ಹೇಗೆ ಅಳಿದು ಹೋಗುವವೋ, ಅದರಂತೆ ಶಿವಜ್ಞಾನವಾಗಲು ಯೋಗಿಯು ಸಂಸಾರವನ್ನು ನೋಡುವುದಿಲ್ಲ.
#ಅಜ್ಞಾನಮೇವ ಸರ್ವೆಷಾಮ್
ಸಂಸಾರಭ್ರಮಕಾರಣಮ್ |
ತನ್ನಿವೃತ್ತೌ ಕಥಂ ಭೂಯಃ
ಸಂಸಾರಭ್ರಮ ದರ್ಶನಮ್ || 17-12
ಎಲ್ಲರ ಸಂಸಾರ ಭ್ರಾಂತಿಗೆ ಕಾರಣವಾದದ್ದು ಅಜ್ಞಾನವೇ ಆಗಿರುತ್ತದೆ. ಆ ಅಜ್ಞಾನವು ನಿವೃತ್ತಿಯಾಗಲು ಮತ್ತು ಸಂಸಾರ ಭ್ರಾಂತಿಯ ದರ್ಶನವು ಹೇಗೆ ಆದೀತು?
ಗಲಿತಾಹಂಕೃತಿ ಗ್ರಂಥಿಃ
ಕ್ರೀಡಾಕಲ್ಪಿತ ವಿಗ್ರಹಃ |
ಜೀವನ್ಮುಕ್ತಶ್ಚರೇದ್ ಯೋಗೀ
ದೇಹಿವನ್ನಿರುಪಾಧಿಕಃ || 17-13
ಮೂಲ ಅಹಂಕಾರ ಗ್ರಂಥಿಯನ್ನು ನಿವಾರಿಸಿಕೊಂಡ, ವಿನೋದಕ್ಕಾಗಿ ಧರಿಸಿದ ಶರೀರವುಳ್ಳವನಾದ, ಉಪಾಧಿರಹಿತನಾದ ಈ ಯೋಗಿಯು, ಜೀವನ್ಮುಕ್ತನಾಗಿ ದೇಹಿಯಂತೆ (ಸಾಮಾನ್ಯ ಜೀವಿಯಂತೆ) ಚರಿಸುವನು.
ಇತಿ ಕಾಯಾನುಗ್ರಹಸ್ಥಲಮ್
----------------------------------
ಅಥ ಇಂದ್ರಿಯಾನುಗ್ರಹಸ್ಥಲಮ್
ದರ್ಶನಾತ್ ಪರಕಾಯಸ್ಯ
ಕರಣಾನಾಂ ವಿವೇಕತಃ |
ಇಂದ್ರಿಯಾನುಗ್ರಹಃ ಪ್ರೋಕ್ತಃ
ಸರ್ವೆಷಾಂ ತತ್ತ್ವವೇದಿಭಿಃ || 17-14
(ಕಾಯಾನುಗ್ರಹಿಯಾದ) ಪರಯೋಗಿಯ ದರ್ಶನದಿಂದ ಮತ್ತು ಅವನಲ್ಲಿರುವ ಇಂದ್ರಿಯಗಳ ವಿವೇಕದಿಂದ ಎಲ್ಲರಲ್ಲಿ ಉಂಟಾಗುವ ಕರಣಗಳ ವಿವೇಕವೇ ಇಂದ್ರಿಯಾನುಗ್ರಹವೆಂದು ಶಿವತತ್ತ್ವಜ್ಞಾನಿಗಳು ಹೇಳುತ್ತಾರೆ.
#ಇಂದ್ರಿಯಾಣಾಂ ಸಮಸ್ತಾನಾಮ್
ಸ್ವಾರ್ಥೆಷು ಸತಿ ಸಂಗಮೇ |
ರಾಗೋ ವಾ ಜಾಯತೇ ದ್ವೇಷಃ
ತೌ ಯೋಗೀ ಪರಿವರ್ಜಯೇತ್|17-15
ಎಲ್ಲಾ ಇಂದ್ರಿಯಗಳು (ಪಂಚಜ್ಞಾನೇಂದ್ರಿಯ, ಪಂಚಕರ್ಮೆಂದ್ರಿಯಗಳು, ಇಂದ್ರಿಯ ವ್ಯಾಪಾರವನ್ನು ಪಂಚಸೂತ್ರಗಳಿಂದ ಹೇಳಲಾಗಿದೆ) ತಮ್ಮ ತಮ್ಮ ವಿಷಯಗಳೊಂದಿಗೆ ಸಂಬಂಧವಾಗಲು ಮನಸ್ಸಿನಲ್ಲಿ ರಾಗವೇ ಆಗಲಿ ಅಥವಾ ದ್ವೇಷವೇ ಆಗಲಿ ಉತ್ಪನ್ನವಾಗುತ್ತದೆ. ಆದರೆ ಯೋಗಿಯಾದವನು ಅವೆರಡನ್ನೂ ಪರಿತ್ಯಜಿಸುವವನಾಗಬೇಕು.
ಇಂದ್ರಿಯಾಣಾಂ ಬಹಿರ್ವೃತ್ತಿಃ
ಪ್ರಪಂಚಸ್ಯ ಪ್ರಕಾಶಿನೀ |
ಅಂತಃ ಶಿವೇ ಸಮಾವೇಶೋ
ನಿಷ್ಪ್ರಪಂಚಸ್ಯ ಕಾರಣಮ್ || 17-16
ಇಂದ್ರಿಯಗಳ ಬಹಿರ್ಮುಖ ಪ್ರವೃತ್ತಿಯಿಂದ ಪ್ರಪಂಚವು ಪ್ರಕಾಶಿಸುವುದು. ಅದೇ ಇಂದ್ರಿಯಗಳು ಅಂತರ್ಮುಖಗೊಂಡು ಶಿವನಲ್ಲಿ ಐಕ್ಯಗೊಳ್ಳಲು ಅದು ನಿಷ್ಪ್ರಪಂಚಕ್ಕೆ ಕಾರಣವಾಗುವುದು (ಅಂದರೆ ಪ್ರಪಂಚವು ಪ್ರಕಾಶಿಸುವುದಿಲ್ಲ).
#ಕ್ಷಣಮಂತಃ ಶಿವಂ ಪಶ್ಯನ್
ಕೇವಲೇನೈವ ಚೇತಸಾ |
ಬಾಹ್ಯಾರ್ಥಾನಾಮ್ ಅನುಭವಮ್
ಕ್ಷಣಂ ಕುರ್ವನ್ ದೃಗಾದಿಭಿಃ || 17-17
ಆ ಶಿವಯೋಗಿಯು ಅಂರ್ತಮುಖನಾಗಿ ಕೇವಲ ಚಿತ್ತದಿಂದ ತನ್ನೊಳಗೆ ಕ್ಷಣಕಾಲ ಶಿವನನ್ನು ನೋಡುತ್ತಾ, ಕೆಲವು ಕಾಲ ಚಕ್ಷುರಾದಿ ಬಾಹ್ಯೇಂದ್ರಿಯಗಳಿಂದ ಶಬ್ದಾದಿ ವಿಷಯಗಳನ್ನು ಅನುಭವಿಸುತ್ತಾ,
ಸರ್ವೆಂದ್ರಿಯ ನಿರೂಢೋಪಿ
ಸರ್ವೆಂದ್ರಿಯ ವಿಹೀನವಾನ್ |
ಶಿವಾಹಿತ ಮನಾ ಯೋಗೀ
ಶಿವಂ ಪಶ್ಯತಿ ನಾಪರಮ್ || 17-18
ಹೀಗೆ ಸರ್ವೆಂದ್ರಿಯಗಳೊಂದಿಗೆ ಕೂಡಿಕೊಂಡಿದ್ದರೂ ಸರ್ವೆಂದ್ರಿಯಗಳಿಲ್ಲದವನಾಗಿ ಶಿವನಲ್ಲಿ ಆಸಕ್ತವಾದ ಮನಸ್ಸುಳ್ಳ ಆ ಯೋಗಿಯು ಶಿವನನ್ನೇ ಕಾಣುತ್ತಾನೆಯೇ ಹೊರತು ಮತ್ತಾವುದನ್ನೂ ಕಾಣುವುದಿಲ್ಲ.
#ನ ಜರಾ ಮರಣಂ ನಾಸ್ತಿ
ನ ಪಿಪಾಸಾ ನ ಚ ಕ್ಷುಧಾ |
ಶಿವಾಹಿತೇಂದ್ರಿಯ ಸ್ಯಾಸ್ಯ
ನಿರ್ಮಾನಸ್ಯ ಮಹಾತ್ಮನಃ || 17-19
ಶಿವನಲ್ಲಿಯೇ ಸಕಲೇಂದ್ರಿಯ ವ್ಯಾಪಾರಗಳನ್ನು ಅಡಗಿಸಿಕೊಂಡ ನಿರ್ಮಾನಿಯಾದ (ದೇಹಾದಿಗಳ ಅಭಿಮಾನ ರಹಿತನಾದ), ಮಹಾತ್ಮನಾದ ಈ ಇಂದ್ರಿಯಾನುಗ್ರಹಸ್ಥಲದ ಯೋಗಿಗೆ (ದೇಹಧರ್ಮಗಳಾದ) ಮುಪ್ಪು, ಸಾವುಗಳಾಗಲಿ, ಪ್ರಾಣಧರ್ಮಗಳಾದ ಹಸಿವೆ, ನೀರಡಿಕೆಗಳಾಗಲಿ ಇರುವುದಿಲ್ಲ.
ಮನೋ ಯತ್ರ ಪ್ರವರ್ತೆತ
ತತ್ರ ಸರ್ವೆಂದ್ರಿಯ ಸ್ಥಿತಿಃ |
ಶಿವೇ ಮನಸಿ ಸಂಲ್ಲೀನೇ
ಕ್ವ ಚೇಂದ್ರಿಯ ವಿಚಾರಣಾ || 17-20
ಮನಸ್ಸು ಎಲ್ಲಿ ವ್ಯವಹರಿಸುವುದೋ ಅಲ್ಲಿಯೇ ಎಲ್ಲ ಇಂದ್ರಿಯಗಳು ವ್ಯವಹರಿಸುವುವು. ಆ ಮನಸ್ಸು ಶಿವನಲ್ಲಿಯೇ ಲೀನವಾದರೆ ಇಂದ್ರಿಯಗಳು ಬೇರೆ ಕಡೆಯಲ್ಲಿ ಹೇಗೆತಾನೆ ಚರಿಸುವುವು?
#ಯದ್ಯತ್ ಪಶ್ಯನ್ ದೃಶಾ ಯೋಗೀ
ಮನಸಾ ಚಿಂತಯತ್ಯಪಿ |
ತತ್ತತ್ ಸರ್ವಂ ಶಿವಾಕಾರಮ್
ಸಂವಿದ್ರೂಪಂ ಪ್ರಕಾಶತೇ || 17-21
ಯೋಗಿಯು ತನ್ನ ಕಣ್ಣಿನಿಂದ ಯಾವುದನ್ನು ನೋಡುವನೋ ಮತ್ತು ಮನಸ್ಸಿನಿಂದ ಯಾವುದನ್ನು ಚಿಂತಿಸುವನೋ, ಅದೆಲ್ಲವೂ ಅವನಿಗೆ ಅರಿವಿನ ಸ್ವರೂಪದ ಶಿವಸ್ವರೂಪವಾಗಿ ಪ್ರಕಾಶಿಸುತ್ತಿರುತ್ತದೆ.
ಕರಣೈಃ ಸಹಿತಂ ಪ್ರಾಣಮ್
ಮನಸ್ಯಾಧಾಯ ಸಂಯಮೀ |
ಯೋಜಯೇತ್ ಸ ಶಿವಃ ಸಾಕ್ಷಾತ್
ಯತ್ರ ನಾಸ್ತಿ ಜಗದ್ಭ್ರಮಃ || 17-22
ನೇತ್ರಾದಿ ಕರಣಗಳಿಂದ ಕೂಡಿದ ಪ್ರಾಣವಾಯುವನ್ನು ಮನಸ್ಸಿನಲ್ಲಿ ಇರಿಸಿ, ಸಂಯಮಿಯಾದ ಆ ಯೋಗಿಯು ಆ ಮನಸ್ಸನ್ನು ಯಾವ ಶಿವನಲ್ಲಿ ಯೋಜಿಸುವನೋ ಅವನು ಸಾಕ್ಷಾತ್ ಶಿವನೇ ಆಗಿದ್ದಾನೆ. ಅವನಿಗೆ ಜಗತ್ತಿನ ಭ್ರಮೆಯು ಇರುವುದಿಲ್ಲ.
#ಸರ್ವೆಂದ್ರಿಯ ಪ್ರವೃತ್ತ್ಯಾ ಚ
ಬಹಿರಂತಃ ಶಿವಂ ಯಜನ್ |
ಸ್ವಚ್ಛಂದಚಾರೀ ಸರ್ವತ್ರ
ಸುಖೀ ಭವತಿ ಸಂಯಮೀ || 17-23
ಸಂಯಮಿಯು (ಇಂದ್ರಿಯಾನುಗ್ರಹಸ್ಥಲದ ಯೋಗಿಯು) ತನ್ನ ಸರ್ವೇಂದ್ರಿಯಗಳ ಪ್ರವೃತ್ತಿಯಿಂದ (ಅಂತರಿಂದ್ರಿಯ ಬಹಿರಿಂದ್ರಿಯ ವ್ಯಾಪಾರದಿಂದ) ಒಳಹೊರಗೂ ಶಿವನನ್ನು (ಪ್ರಾಣಲಿಂಗವನ್ನು) ಪೂಜಿಸುತ್ತಾ ಸ್ವತಂತ್ರವಾಗಿ ಎಲ್ಲೆಡೆ ಸಂಚರಿಸುತ್ತಾನೆ.
ಇತಿ ಇಂದ್ರಿಯಾನುಗ್ರಹಸ್ಥಲಂ
-----------------------------------
ಅಥ ಪ್ರಾಣಾನುಗ್ರಹಸ್ಥಲಮ್
ಶಿವಸ್ಯ ಪರಕಾಯಸ್ಯ
ಯತ್ ತಾತ್ಪರ್ಯಾವ ಲೋಕನಮ್ |
ತತ್ಪ್ರಾಣಾನುಗ್ರಹಃ ಪ್ರೋಕ್ತಃ
ಸರ್ವೆಷಾಂ ತತ್ತ್ವದರ್ಶಿಭಿಃ || 17-24
ಪರಕಾಯನಾದ (ಪರಬ್ರಹ್ಮವೇ ದೇಹವಾಗುಳ್ಳ), ಶಿವಸ್ವರೂಪನಾದ ಯೋಗಿಯ ಯಾವ ತಾತ್ಪರ್ಯಾವಲೋಕನವಿದೆಯೋ (ಜಗತ್ತೆಲ್ಲವನ್ನು ಶಿವನೆಂದು ನೋಡುವ ಯಾವ ನಿರ್ಣಯವಿದೆಯೋ) ಅದುವೇ ಜಗತ್ತಿನ ಎಲ್ಲ ಜೀವಿಗಳಿಗೆ ತತ್ತ್ವದರ್ಶಿಗಳಿಂದ (ಶಿವಾದ್ವೈತ ತತ್ತ್ವಜ್ಞಾನಿಗಳಿಂದ)ಪ್ರಾಣಾನುಗ್ರಹವೆಂದು ಹೇಳಲ್ಪಡುತ್ತದೆ (ತನ್ನ ಪ್ರಾಣವನ್ನು ಪರಮಾತ್ಮನಲ್ಲೇ ಲಯಗೊಳಿಸಿ ಆ ಪರಶಿವನ ತತ್ತ್ವವನ್ನೇ ನೋಡುತ್ತಿರುವ ಆ ಸ್ಥಿತಿಯು, ಜಗತ್ತಿನ ಜನರಿಗೆ ಪ್ರಾಣಾನುಗ್ರಹವಾಗಿ ಪರಿವರ್ತಿಸುವುದು).
#ಪ್ರಾಣೋ ಯಸ್ಯ ಲಯಂ ಯಾತಿ
ಶಿವೇ ಪರಮಕಾರಣೇ |
ಕುತಸ್ತಸ್ಯೇಂದ್ರಿಯ ಸ್ಫೂರ್ತಿಃ
ಕುತಃ ಸಂಸಾರದರ್ಶನಮ್ || 17-25
ಪರಮ ಕಾರಣನಾದ, ಎಲ್ಲ ಕಾರಣಗಳಿಗೂ ಕಾರಣನಾದ ಪರಶಿವನಲ್ಲಿ ಯಾವ ಯೋಗಿಯ ಪ್ರಾಣವಾಯುವು ಲಯವನ್ನು ಹೊಂದು ವುದೋ ಅಂತಹ ಪ್ರಾಣಾನುಗ್ರಾಹಕನಾದ ಯೋಗಿಗೆ ಇಂದ್ರಿಯಗಳ ಸ್ಫೂರ್ತಿಯಾಗಲಿ ಅಥವಾ ಸಂಸಾರದರ್ಶನವೇಆಗಲಿ ಎಲ್ಲಿರುವುದು
ಕರಣೇಷು ನಿವೃತ್ತೇಷು
ಸ್ವಾರ್ಥಸಂಗಾತ್ ಪ್ರಯತ್ನತಃ |
ತೈಃ ಸಮಂ ಪ್ರಾಣಮಾರೋಪ್ಯ
ಸ್ವಾಂತೇ ಶಾಂತಮತಿಃ ಸ್ವಯಮ್17-26
ಕರಣಗಳು (ಅಂತರಿಂದ್ರಿಯ ಬಹಿರಿಂದ್ರಿಯಗಳು) ಸ್ವಾರ್ಥಸಂಗದಿಂದ (ತಮ್ಮ ತಮ್ಮ ವಿಷಯಗಳ ಸಂಗದಿಂದ) ಪ್ರಯತ್ನಪೂರ್ವಕವಾಗಿ ನಿವೃತ್ತಿಗೊಳಿಸಿ, ಆ ಇಂದ್ರಿಯಗಳೊಡನೆ ಪ್ರಾಣವನ್ನು ಸಂಯೋಜಿಸಿ ನಿಶ್ಚಲಗೊಳಿಸಿ ಯೋಗಿಯು ತನ್ನಂತರಂಗದಲ್ಲಿ ತಾನೇ ಶಾಂತಮನಸ್ಕನಾಗುತ್ತಾನೆ (ರಾಗ ದ್ವೇಷಗಳಿಲ್ಲದವನಾಗುತ್ತಾನೆ).
#ಶಾಂತತ್ವಾತ್ ಪ್ರಾಣವೃತ್ತೀನಾಮ್
ಮನಃಶಾಮ್ ಯತಿ ವೃತ್ತಿಭಿಃ |
ತಚ್ಛಾಂತೌ ಯೋಗಿನಾಂ ಕಿಂಚಿತ್
ಶಿವಾದನ್ಯನ್ನ ದೃಶ್ಯತೇ || 17-27
ಪ್ರಾಣವೃತ್ತಿಗಳು (ರೇಚಕ ಪೂರಕವಾದ ಪ್ರಾಣವೃತ್ತಿಗಳು) ಶಾಂತವಾದಾಗ (ಕೇವಲ ಕುಂಭಕ ಸ್ಥಿತಿಯಲ್ಲಿದ್ದಾಗ) ಮನಸ್ಸು ತನ್ನ ಸಂಕಲ್ಪ ವಿಕಲ್ಪ ರೂಪವಾದ ವ್ಯವಹಾರಗಳನ್ನು ಬಿಟ್ಟು ಶಾಂತವಾಗುತ್ತದೆ. ಹೀಗೆ ಆ ಮನಸ್ಸು ಶಾಂತವಾಗಲು ಯೋಗಿಯು ಶಿವನ ಹೊರತಾಗಿ ಬೇರೆ ಯಾವುದನ್ನೂ ಸ್ವಲ್ಪವೂ ನೋಡುವುದಿಲ್ಲ.
ಪ್ರಾಣ ಏವ ಮನುಷ್ಯಾಣಾಮ್
ದೇಹಧಾರಣ ಕಾರಣಮ್ |
ತದಾಧಾರಃ ಶಿವಃ ಪ್ರೋಕ್ತಃ
ಸರ್ವಕಾರಣ ಕಾರಣಮ್ || 17-28
ಮನುಷ್ಯರ ದೇಹಧಾರಣಕ್ಕೆ ಪ್ರಾಣವೇ ಕಾರಣವಾಗಿರುತ್ತದೆ. ಸರ್ವಕಾರಣಗಳಿಗೂ ಕಾರಣನಾದ ಶಿವನು ಆ ಪ್ರಾಣಕ್ಕೆ ಆಧಾರವಾಗಿರುವನೆಂದು ಹೇಳಲಾಗಿದೆ.
#ನಿರಾಧಾರಃ ಶಿವಃ ಸಾಕ್ಷಾತ್
ಪ್ರಾಣಸ್ತೇನ ಪ್ರತಿಷ್ಠಿತಃ |
ತದಾಧಾರಾ ತನುರ್ಜ್ಞೆಯಾ:
ಜೀವೋ ಯೇನೈವ ಚೇಷ್ಟತೇ || 17-29
ಶಿವನು ಸಾಕ್ಷಾತ್ ನಿರಾಧಾರನಾಗಿದ್ದು ಅವನಿಂದಲೇ ಪ್ರಾಣವು ಪ್ರತಿಷ್ಠಿತಗೊಂಡಿದೆ. ಶರೀರವು ಆ ಪ್ರಾಣದ ಆಧಾರದಲ್ಲಿರುತ್ತದೆ ಮತ್ತು ಜೀವಾತ್ಮನು ಆ ಪ್ರಾಣಶಕ್ತಿಯಿಂದಲೇ ವ್ಯವಹರಿಸುತ್ತಿರುತ್ತಾನೆ.
ಶಿವೇ ಪ್ರಾಣೋ ವಿಲೀನೋಪಿ
ಯೋಗಿನೋ ಯೋಗಮಾರ್ಗತಃ |
ಸ್ವಶಕ್ತಿ ವಾಸನಾಯೋಗಾದ್
ಧಾರಯತ್ಯೇವ ವಿಗ್ರಹಮ್ || 17-30
ಯೋಗಿಗಳು ಯೋಗ ಮಾರ್ಗದಿಂದ (ಕುಂಭಕ ರೂಪವಾದ ಯೋಗಮಾರ್ಗದಿಂದ) ಶಿವನಲ್ಲಿ ತಮ್ಮ ಪ್ರಾಣವನ್ನು ವಿಲೀನಗೊಳಿಸಿ ಕೊಂಡರೂ ಸಹ ‘ಸ್ವಶಕ್ತಿವಾಸನಾ’ ಯೋಗದಿಂದ (ತನ್ನದೇ ಆದ ಅವಿದ್ಯಾಶಕ್ತಿಯಲ್ಲಿರುವ ವಿಕ್ಷೇಪ ಸಂಸ್ಕಾರಗಳ ಬಲದಿಂದ) ತನ್ನ ದೇಹವನ್ನು ಧರಿಸಿಕೊಂಡು ಇರುತ್ತಾರೆ.
#ಸ ಚಾಭ್ಯಾಸವಶಾದ್ ಭೂಯಃ
ಸರ್ವತತ್ತ್ವಾತಿವರ್ತಿನಿ |
ನಿಷ್ಕಲಂಕೇ ನಿರಾಕಾರೇ
ನಿರಸ್ತಾಶೇಷವಿಕ್ಲವೇ || 17-31
ಚಿದ್ವಿಲಾಸಪರಿಸ್ಫೂರ್ತಿ
ಪರಿಪೂರ್ಣಸುಖಾಹ್ವಯೇ |
ಶಿವೇ ವಿಲೀನಃ ಸರ್ವಾತ್ಮಾ
ಯೋಗೀ ಚಲತಿ ನ ಕ್ವಚಿತ್ || 17-32
ಸರ್ವತತ್ತ್ವಗಳನ್ನು ಮೀರಿ ಇರುವ (ಭೂಮ್ಯಾದಿ-ಶಿವಾಂತಗಳಾದ 36 ತತ್ತ್ವಗಳನ್ನು ಮೀರಿ ಇರುವ), ನಿಷ್ಕಲಂಕನಾದ (ದೋಷರಹಿತನಾದ), ನಿರಾಕಾರನಾದ (ಪ್ರಾಕೃತಿಕ ಆಕಾರರಹಿತನಾದ), ಯಾವ ಬಾಧೆಗಳೂ ಇಲ್ಲದ ಚಿದ್ವಿಲಾಸ ಪರಿಸ್ಫೂರ್ತಿಯಿಂದ (ಅರಿವಿನ ವಿಲಾಸದ ಆಧಿಕ್ಯದಿಂದ) ಪರಿಪೂರ್ಣನೂ, ಸುಖಸ್ವರೂಪನೂ, ಅದ್ವಿತೀಯನೂ ಆದ ಶಿವನಲ್ಲಿ ಆ ಪ್ರಾಣವಾಯುವನ್ನು ಪುನಃ ಪುನಃ ಅಭ್ಯಾಸದಿಂದ ವಿಲೀನಗೊಳಿಸಿಕೊಂಡ ಸರ್ವಾತ್ಮನಾದ ಯೋಗಿಯು ಎಲ್ಲಿಯೂ ಚಲಿಸದೆ ನಿಶ್ಚಲನಾಗಿರುತ್ತಾನೆ.
#ಪ್ರಧ್ವಸ್ತವಾಸನಾಸಂಗಾತ್
ಪ್ರಾಣವೃತ್ತಿಪರಿಕ್ಷಯಾತ್ |
ಶಿವೈಕೀಭೂತಸರ್ವಾತ್ಮಾ
ಸ್ಥಾಣುವದ್ ಭಾತಿ ಸಂಯಮೀ || 17-33
ಪ್ರಾಣವೃತ್ತಿಗಳು ಕ್ಷಯಗೊಳ್ಳಲು (ಪ್ರಾಕೃತ ಮತ್ತು ವೈಕೃತ ರೂಪವಾದ ಪ್ರಾಣವಾಯುವಿನ ಗತಿಯು ನಿಲ್ಲಲಾಗಿ) ವಿಷಯ ವಾಸನೆಗಳನ್ನು ನಾಶ ಮಾಡಿಕೊಂಡು ಶಿವನೊಂದಿಗೆ ಐಕ್ಯತೆಯನ್ನು ಪಡೆದ ಸರ್ವಾತ್ಮನಾದ ಆ ಸಂಯಮಿ (ಒಂದೇ ವಿಷಯದಲ್ಲಿ ಧಾರಣ, ಧ್ಯಾನ, ಸಮಾಧಿಗಳನ್ನು ಪಡೆದುಕೊಂಡವನಾದ ಪತಂಜಲಿ, ಯೋಗಸೂತ್ರ 3-4)ಯಾದ ಯೋಗಿಯು ಸ್ಥಾಣುವಿನಂತೆ ನಿಶ್ಚಲನಾಗಿರುತ್ತಾನೆ.
ಇತಿ ಪ್ರಾಣಾನುಗ್ರಹಸ್ಥಲಂ
------------------------
ಅಥ ಕಾಯಾರ್ಪಿತಸ್ಥಲಮ್
ಶಿವಸ್ಯ ಪರರೂಪಸ್ಯ
ಸರ್ವಾನುಗ್ರಾಹಿಣೋರ್ಚನೇ |
ತ್ಯಾಗೋ ದೇಹಾಭಿಮಾನಸ್ಯ
ಕಾಯಾರ್ಪಿತಮುದಾಹೃತಮ್ || 17-34
ಸರ್ವರನ್ನು ಅನುಗ್ರಹಿಸುವ ಪರಬ್ರಹ್ಮ ರೂಪನಾದ, ಪ್ರಾಣಾನುಗ್ರಹ ಸಂಪನ್ನನಾದ ಯೋಗಿಯು ಶಿವಲಿಂಗದ ಅರ್ಚನೆಯಲ್ಲಿ ತನ್ನ ದೇಹಾಭಿಮಾನದ ತ್ಯಾಗವನ್ನು ಮಾಡುವುದೇ ಕಾಯಾರ್ಪಿತವೆಂದು ಹೇಳಲಾಗಿದೆ.
#ಯದಾ ಯೋಗೀ ನಿಜಂ ದೇಹಮ್
ಶಿವಾಯ ವಿನಿವೇದಯೇತ್ |
ತದಾ ಭವತಿ ತದ್ರೂಪಮ್
ಶಿವರೂಪಂ ನ ಸಂಶಯಃ || 17-35
ಕಾಯಾರ್ಪಣಸ್ಥಲದ ಯೋಗಿಯು ನಿಜದೇಹವನ್ನು ಯಾವಾಗ ಶಿವನಿಗೆ ವಿನಿವೇದಿಸುವನೋ (ಅರ್ಪಿಸುವನೋ) ಆಗ ಅವನ ದೇಹವು ಶಿವರೂಪವೇ ಆಗುತ್ತದೆ. ಇದರಲ್ಲಿ ಸಂಶಯವಿಲ್ಲ.
ಇಂದ್ರಿಯಪ್ರೀತಿಹೇತೂನಿ
ವಿಷಯಾಸಂಗಜಾನಿ ಚ |
ಸುಖಾನಿ ಸುಖಚಿದ್ರೂಪೇ
ಶಿವಯೋಗೀ ನಿವೇದಯೇತ್|| 17-36
ಶಿವಯೋಗಿಯು ತನ್ನ ಇಂದ್ರಿಯಗಳ ಪ್ರೀತಿಗೆ ಕಾರಣಗಳಾದ ವಿಷಯಸಂಗಗಳಿಂದ ಉತ್ಪನ್ನಗಳಾದ ಸುಖಗಳನ್ನೂ ಸಹ ಸುಖಸ್ವರೂಪನೂ, ಚಿದ್ರೂಪನೂ ಆದ ಶಿವನಿಗೆ ನಿವೇದಿಸಬೇಕು (ಸಮರ್ಪಿಸಬೇಕು).
#ದರ್ಶನಾತ್ ಸ್ಪ್ಪರ್ಶನಾದ್ ಭುಕ್ತೇಃ
ಶ್ರವಣಾದ್ ಘ್ರಾಣನಾದಪಿ |
ವಿಷಯೇಭ್ಯೋ ಯದುತ್ಪನ್ನಮ್
ಶಿವೇ ತತ್ಸುಖಮರ್ಪಯೇತ್ || 17-37
ಕಣ್ಣಿನಿಂದ ನೋಡುವುದರಿಂದ, ಚರ್ಮದಿಂದ ಸ್ಪರ್ಶಿಸುವುದರಿಂದ, ನಾಲಿಗೆಯಿಂದ ಆಸ್ವಾದಿಸುವುದರಿಂದ, ಕಿವಿಯಿಂದ ಕೇಳುವುದರಿಂದ, ಮೂಗಿನಿಂದ ಮೂಸಿಸುವುದರಿಂದ, ಇದೂ ಅಲ್ಲದೆ ಉಳಿದ ಯಾವುದೇ ವಿಷಯಗಳಿಂದ ಉತ್ಪನ್ನವಾದ ಯಾವ ಸುಖವಿದೆಯೋ ಅದನ್ನು ಶಿವನಿಗೆ ಸಮರ್ಪಿಸಬೇಕು.
ದೇಹದ್ವಾರೇಣ ಯದ್ಯತ್ ಸ್ಯಾತ್
ಸುಖಂ ಪ್ರಾಸಂಗಮಾತ್ಮನಃ |
ತತ್ತನ್ನಿವೇದಯನ್ ಶಂಭೋಃ
ಯೋಗೀ ಭವತಿ ನಿರ್ಮಲಃ || 17-38
ದೇಹದ್ವಾರಗಳಿಂದ, ದಶೇಂದ್ರಿಯಗಳಿಂದ ಯಾವ ಯಾವ ಸುಖ ಪ್ರಸಂಗಗಳು ತನಗೆ ಒದಗುವುದೋ ಅದೆಲ್ಲವನ್ನೂ ಯೋಗಿಯಾದವನು ಶಂಭುವಿಗೆ ನಿವೇದಿಸಿ ನಿರ್ಮಲನಾಗುತ್ತಾನೆ (ನಿರ್ಲಿಪ್ತನಾಗುತ್ತಾನೆ).
ಇತಿ ಕಾಯಾರ್ಪಿತಸ್ಥಲಂ
------------------------
ಅಥ ಕರಣಾರ್ಪಿತಸ್ಥಲಮ್
ಆಸಂಜನಂ ಸಮಸ್ತಾನಾಮ್
ಕರಣಾನಾಂ ಪರಾತ್ಪರೇ |
ಶಿವೇ ಯತ್ ತದಿದಂ ಪ್ರೋಕ್ತಮ್
ಕರಣಾರ್ಪಿತಮಾಗಮೇ || 17-39
ಪರಾತ್ಪರನಾದ ಪರಶಿವನಲ್ಲಿ ತನ್ನ ಸಮಸ್ತಕರಣಗಳ (ಅಂತಃಕರಣ, ಬಹಿಃಕರಣಗಳ) ಸಮರ್ಪಣೆಯು ಯಾವುದಿದೆಯೋ ಅದುವೇ ಶಿವಾಗಮ ಶಾಸ್ತ್ರಗಳಲ್ಲಿ ‘ಕರಣಾರ್ಪಿತ’ವೆಂದು ಹೇಳಲ್ಪಟ್ಟಿದೆ.
#ಯದ್ಯತ್ಕರಣಮಾಲಂಬ್ಯ
ಭುಂಕ್ತೇ ವಿಷಯಜಂ ಸುಖಮ್ |
ತತ್ತಚ್ಛಿವೇ ಸಮರ್ಪೆ್ಯಷ
ಕರಣಾರ್ಪಕ ಉಚ್ಯತೇ || 17-40
ಅಹಂಕಾರವೆಂಬ ಮದದಿಂದ ಕೊಬ್ಬಿದ ಅಂತಃಕರಣವೆಂಬ ಮದಗಜವನ್ನು ಯಾರು ಶಿವಲಿಂಗವೆಂಬ ಕಂಭಕ್ಕೆ ಕಟ್ಟಿ ಹಾಕುವನೋ ಅವನೇ ಸಕಲ ಸಿದ್ಧಿಗಳನ್ನು ಪಡೆದ ಧೀರನೆಂಬುದಾಗಿ ಕರೆಯಲ್ಪಡುತ್ತಾನೆ.
ಅಹಂಕಾರ ಮದೋದ್ರಿಕ್ತಮ್
ಅಂತಃಕರಣವಾರಣಮ್ |
ಬಧ್ನೀಯಾದ್ ಯಃ ಶಿವಾಲಾನೇ
ಸ ಧೀರಃ ಸರ್ವಸಿದ್ಧಿಮಾನ್ || 17-41
ಸಮಸ್ತ ಇಂದ್ರಿಯಗಳಿಗೆ ಮನವೇ ಮುಖ್ಯವಾದುದೆಂದು ಹೇಳಲ್ಪಡುತ್ತದೆ. ಆದ್ದರಿಂದ ಆ ಮನಸ್ಸೇ ಶಿವನ ವಶವಾಗಲು, ಅದರ ಅನುಯಾಯಿಗಳಾದ ಉಳಿದ ಇಂದ್ರಿಯಗಳಿಂದ ಆಗುವುದೇನು?
#ಇಂದ್ರಿಯಾಣಾಂ ಸಮಸ್ತಾನಾಮ್
ಮನಃ ಪ್ರಥಮಮುಚ್ಯತೇ |
ವಶೀಕೃತೇ ಶಿವೇ ತಸ್ಮಿನ್
ಕಿಮನ್ಯೈಸ್ತದ್ವ ಶಾನುಗೈಃ || 17-42
ಇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳುವುದೇ ಬಂಧನ ನಿವೃತ್ತಿಯೆಂಬುದಾಗಿ ಹೇಳಲ್ಪಟ್ಟಿದೆ. ಆದ್ದರಿಂದ ಆ ಎಲ್ಲ ಇಂದ್ರಿಯಗಳು ಶಿವಲಿಂಗದಲ್ಲಿ ಲಯಗೊಳ್ಳಲು ಸಂಸಾರಸಾಗರದಲ್ಲಿ ಹೇಗೆ ಮುಳುಗಲು ಸಾಧ್ಯ?
ಇಂದ್ರಿಯಾಣಾಂ ವಶೀಕಾರೋ
ನಿವೃತ್ತಿ ರಿತಿ ಗೀಯತೇ |
ಲಕ್ಷೀಕೃತೇ ಶಿವೇ ತೇಷಾಮ್
ಕುತಃ ಸಂಸಾರಗಾಹನಮ್ || 17-43
ಇಂದ್ರಿಯಗಳ ವಶೀಕರಣವು ಸಂಸಾರವೆಂಬ ವಿಷವೃಕ್ಷಗಳ ಅಡವಿಯನ್ನು ಕಡಿಯುವ ಕೊಡಲಿಯಾಗಿರುತ್ತದೆ. ಆ ಇಂದ್ರಿಯಗಳ ವಶೀಕರಣದಿಂದಲೇ ಎಲ್ಲ ಜೀವಿಗಳಿಗೆ ಉಪಶಾಂತಿಯು (ನಿರಪೇಕ್ಷತ್ವ ಭಾವವು) ಉಂಟಾಗುವುದು.
#ಸಂಸಾರ ವಿಷಕಾಂತಾರ-
ಸಮುಚ್ಛೇದ ಕುಠಾರಿಕಾ |
ಉಪಶಾಂತಿರ್ಭವೇತ್ ಪುಂಸಾಮ್
ಇಂದ್ರಿಯಾಣಾಂ ವಶೀಕೃತೌ || 17-44
ಇಂದ್ರಿಯಗಳ ವಶೀಕರಣವು ಸಂಸಾರವೆಂಬ ವಿಷವೃಕ್ಷಗಳ ಅಡವಿಯನ್ನು ಕಡಿಯುವ ಕೊಡಲಿಯಾಗಿರುತ್ತದೆ. ಆ ಇಂದ್ರಿಯಗಳ ವಶೀಕರಣದಿಂದಲೇ ಎಲ್ಲ ಜೀವಿಗಳಿಗೆ ಉಪಶಾಂತಿಯು (ನಿರಪೇಕ್ಷತ್ವ ಭಾವವು) ಉಂಟಾಗುವುದು.
ಇಂದ್ರಿಯೈರೇವ ಜಾಯಂತೇ
ಪಾಪಾನಿ ಸುಕೃತಾನಿ ಚ |
ತೇಷಾಂ ಸಮರ್ಪಣಾದೀಶೇ
ಕುತಃ ಕರ್ಮನಿಬಂಧನಮ್ || 17-45
ಇಂದ್ರಿಯಗಳಿಂದಲೇ ಪಾಪಗಳು ಮತ್ತು ಪುಣ್ಯಗಳು ಉಂಟಾಗುತ್ತವೆ. ಆ ಇಂದ್ರಿಯಗಳನ್ನೇ ಈಶನಲ್ಲಿ ಸಮರ್ಪಿಸುವುದರಿಂದ ಕರ್ಮಬಂಧನವು ಹೇಗೆ ಉಂಟಾದೀತು?
#ಪ್ರಕಾಶಮಾನೇ ಚಿದ್ವಹ್ನೌ
ಬಹಿರಂತರ್ಜಗನ್ಮಯೇ |
ಸಮಪ್ರ್ಯ ವಿಷಯಾನ್ ಸರ್ವಾನ್
ಮುಕ್ತವಜ್ಜಾಯತೇ ಜನಃ || 17-46
ಜಗನ್ಮಯವಾದ ಚಿದಗ್ನಿಯು ಒಳಹೊರಗೂ ಪ್ರಕಾಶಿಸುತ್ತಿರಲು ಅದರಲ್ಲಿ ತನ್ನ ಎಲ್ಲ ವಿಷಯಗಳೆಂಬ ಹವಿಸ್ಸುಗಳನ್ನು ಸಮರ್ಪಿಸಿದ ಜನರು ಮುಕ್ತರೇ ಆಗುತ್ತಾರೆ.
ಚಿತ್ತದ್ರವ್ಯಂ ಸಮಾದಾಯ
ಜಗಜ್ಜಾತಂ ಮಹಾಹವಿಃ |
ಚಿದ್ವಹ್ನೌ ಜುಹ್ವತಾಮಂತಃ
ಕುತಃ ಸಂಸಾರವಿಪ್ಲವಃ || 17-47
ಜಗದ್ ಸಮೂಹವೆಂಬ ಮಹಾಹವಿಸ್ಸನ್ನು ಮತ್ತು ಚಿತ್ತದ್ರವ್ಯವನ್ನು ತೆಗೆದುಕೊಂಡು ತನ್ನ ಹೃದಯಕಮಲದಲ್ಲಿರುವ ಚಿದಗ್ನಿಯಲ್ಲಿ ಹೋಮ ಮಾಡುತ್ತಿರುವ ಈ ಕರಣಾರ್ಪಕ ಯೋಗಿಗೆ ಸಂಸಾರ ವಿಪ್ಲವವು (ಸಂಸಾರ ಬಾಧೆಯು) ಎಲ್ಲಿರುವುದು?
ಆತ್ಮಜ್ಯೋತಿಷಿ ಚಿದ್ರೂಪೇ
ಪ್ರಾಣವಾಯುನಿಬೋಧಿತೇ |
ಜುಹ್ವನ್ ಸಮಸ್ತವಿಷಯಾನ್
ತನ್ಮಯೋ ಭವತಿ ಧ್ರುವಮ್ || 17-48
ಪ್ರಾಣವಾಯುವಿನಿಂದ ಪ್ರಜ್ವಲಗೊಳಿಸಿದ ಚಿದ್ರೂಪವಾದ ತನ್ನ ಆತ್ಮಜ್ಯೋತಿಯಲ್ಲಿ ಸಕಲ ವಿಷಯಗಳೆಂಬ ಹವಿಸ್ಸುಗಳನ್ನು ಹೋಮ ಮಾಡಿರುವ ಆ ಯೋಗಿಯು ನಿಶ್ಚಯವಾಗಿ ಶಿವಸ್ವರೂಪನೇ ಆಗಿರುತ್ತಾನೆ.
ಇಂದ್ರಿಯಾಣಿ ಸಮಸ್ತಾನಿ
ಶರೀರಂ ಭೋಗಸಾಧನಮ್ |
ಶಿವಪೂಜಾಂಗಭಾವೇನ
ಭಾವಯನ್ ಮುಕ್ತಿಮಾಪ್ನುಯಾತ್ ||49
ಸಮಸ್ತ ಇಂದ್ರಿಯಗಳನ್ನು ಮತ್ತು ಭೋಗ ಸಾಧನವಾದ ಶರೀರವನ್ನು ಶಿವಪೂಜೆಯ ಅಂಗಗಳೆಂದು ಭಾವಿಸುವ ಈ ಕರಣಾರ್ಪಕಯೋಗಿಯು ಮುಕ್ತಿಯನ್ನು ಪಡೆಯುತ್ತಾನೆ.
ಇತಿ ಕರಣಾರ್ಪಿತಸ್ಥಲಂ
-----------------------------
ಅಥ ಭಾವಾರ್ಪಿತಸ್ಥಲಮ್
ಶಿವೇ ನಿಶ್ಚಲ ಭಾವೇನ
ಭಾವಾನಾಂ ಯತ್ಸಮರ್ಪಣಮ್ |
ಭಾವಾರ್ಪಿತಮಿದಂ ಪ್ರೋಕ್ತಮ್
ಶಿವಸದ್ಭಾವ ವೇದಿಭಿಃ || 17-50
ಶಿವಲಿಂಗದಲ್ಲಿ ನಿಶ್ಚಲವಾದ ಭಾವದಿಂದ ತನ್ನ ಮನೋಭಾವನೆಗಳನ್ನು ಅರ್ಪಿಸುವುದೇ ಭಾವಾರ್ಪಿತವೆಂದು ಶಿವಸದ್ಭಾವವನ್ನು ಬಲ್ಲವರು ಹೇಳುತ್ತಾರೆ (ಭಾವವೆಂದರೆ ಮನೋವೃತ್ತಿಯೆಂದರ್ಥ).
#ಚಿತ್ತಸ್ಥ ಸಕಲಾರ್ಥಾನಾಮ್
ಮನನಂ ಯತ್ತು ಮಾನಸೇ |
ತದರ್ಪಣಂ ಶಿವೇ ಸಾಕ್ಷಾತ್
ಮಾನಸೋ ಭಾವ ಉಚ್ಯತೇ || 17-51
ತನ್ನ ಚಿತ್ತದಲ್ಲಿರುವ ಎಲ್ಲ ಪದಾರ್ಥಗಳ ಯಾವ ಮನನವಿದೆಯೋ (ಅನುಭವರೂಪವಾದ ಚಿಂತನೆ ಇದೆಯೋ) ಅದನ್ನು ಸಾಕ್ಷಾತ್ ಅರ್ಪಿಸುವುದೇ ಭಾವಾರ್ಪಿತವಾಗಿದೆ.
ಭಾವ ಏವ ಹಿ ಜಂತೂನಾಮ್
ಕಾರಣಂ ಬಂಧಮೋಕ್ಷಯೋಃ |
ಭಾವಶುದ್ಧೌ ಭವೇನ್ಮುಕ್ತಿಃ
ವಿಪರೀತೇ ತು ಸಂಸೃತಿಃ || 17-52
ಜೀವಿಗಳ ಬಂಧ ಮೋಕ್ಷಗಳಿಗೆ ಭಾವವೇ ಕಾರಣವಾಗಿರುತ್ತದೆ. ಭಾವವು ಶುದ್ಧವಾಗಿದ್ದರೆ ಮುಕ್ತಿಯುಂಟಾಗುವುದು. ಅದಕ್ಕೆ ವಿಪರೀತವಾಗಿ ಭಾವವು ಅಶುದ್ಧವಾಗಿದ್ದರೆ (ಅಹಂಕಾರ, ಮಮಕಾರಗಳಿಂದ ಕೂಡಿದ್ದರೆ) ಸಂಸಾರ ಪ್ರಾಪ್ತಿಯಾಗುವುದು.
#ಭಾವಸ್ಯ ಶುದ್ಧಿರಾಖ್ಯಾತಾ
ಶಿವೋಹಮಿತಿ ಯೋಜನಾ |
ವಿಪರೀತ ಸಮಾಯೋಗೇ
ಕುತೋ ದುಃಖ ನಿ ವರ್ತನಮ್ || 17-53
ಯಾವ ಭಾವದಲ್ಲಿ‘ಶಿವೋಹಂ’(ಶಿವನೇ ನಾನು)ಎಂಬುದರ ಸಂಯೋಜನೆ ಇರುತ್ತದೆಯೋ ಅದುವೇ ಶುದ್ಧಭಾವವೆಂದು ಹೇಳಲ್ಪಡುತ್ತದೆ. ಇದರ ವಿಪರೀತದ (ನಾನು ಶಿವನಲ್ಲ ಎಂಬುದರ)ಸಮಾಯೋಗವಿದ್ದರೆ, ದುಃಖನಿವಾರಣೆಯು ಹೇಗೆ ಆಗುವುದು?(ಶಿವೋಹಂ ಭಾವನೆಯಿಂದಲೇ ಭಾವ ಶುದ್ಧಿಯು.)
ಭೋಕ್ತಾ ಭೋಗ್ಯಂ ಭೋಜಯಿತಾ
ಸರ್ವಮೇತ ಚ್ಚರಾ ಚರಮ್ |
ಭಾವಯನ್ ಶಿವರೂಪೇಣ
ಶಿವೋ ಭವತಿ ವಸ್ತುತಃ || 17-54
ಭೋಕ್ತೃವಾದ ಜೀವನು, ಭೋಗ್ಯವಾದ ವಸ್ತುವು ಮತ್ತು ಭೋಗವನ್ನು ಕೊಡುವ ಶಿವನು ಅದರಂತೆ ಚರಾಚರವಾದ ವಿಶ್ವವು, ಇವೆಲ್ಲವನ್ನು ಶಿವರೂಪವಾಗಿ ಭಾವಿಸುವವನು ನಿಜವಾಗಿಯೂ ಶಿವನೇ ಆಗುತ್ತಾನೆ (ಎಲ್ಲದರಲ್ಲಿ ಶಕ್ತಿವಿಶಿಷ್ಟ ಅಖಂಡ ಚೈತನ್ಯವನ್ನೇ ಭಾವಿಸಬೇಕು).
#ಮಿಥ್ಯೇತಿ ಭಾವಯನ್ ವಿಶ್ವಮ್
ವಿಶ್ವಾತೀತಂ ಶಿವಂ ಸ್ಮರನ್ |
ಸತ್ತಾನಂದ ಚಿದಾಕಾರಮ್
ಕಥಂ ಬದ್ಧುಮಿಹಾರ್ಹತಿ || 17-55
ಸಮಸ್ತ ವಿಶ್ವವನ್ನು ಮಿಥ್ಯೆ ಎಂಬುದಾಗಿ ಭಾವಿಸುತ್ತಿದ್ದ ಮತ್ತು ವಿಶ್ವಾತೀತನಾದ ಶಿವನನ್ನು ಸಚ್ಚಿದಾನಂದ ಸ್ವರೂಪನನ್ನಾಗಿ ಸ್ಮರಿಸುವ ಈ ಭಾವಾರ್ಪಿತ ಸ್ಥಲದ ಯೋಗಿಯು, ಮಲಮಾಯಾದಿ ಪಾಶಗಳಿಂದ ಹೇಗೆ ತಾನೇ ಬಂಧಿಸಲು ಯೋಗ್ಯನಾದನು?
ಸರ್ವಂ ಕರ್ಮಾರ್ಚನಂ ಶಂಭೋಃ
ವಚನಂ ತಸ್ಯ ಕೀರ್ತನಮ್ |
ಇತಿ ಭಾವಯತೋ ನಿತ್ಯಮ್
ಕಥಂ ಸ್ಯಾತ್ ಕರ್ಮಬಂಧನಮ್ |17-56
ತಾನು ಮಾಡುವ ಸರ್ವಕರ್ಮಗಳನ್ನು ಶಂಭುವಿನ ಅರ್ಚನೆಯೆಂತಲೂ, ತಾನು ಆಡುವ ಮಾತುಗಳನ್ನೆಲ್ಲಾ ಶಿವಕೀರ್ತನೆಯೆಂತಲೂ ಈ ರೀತಿಯಾಗಿ ನಿತ್ಯವೂ ಭಾವಿಸುವ ಈ ಯೋಗಿಗೆ ಕರ್ಮಬಂಧನವು ಹೇಗೆ ತಾನೇ ಉಂಟಾದೀತು?
#ಸರ್ವೆಂದ್ರಿಯಗತಂ ಸೌಖ್ಯಮ್
ದುಃಖಂ ವಾ ಕರ್ಮಸಂಭವಮ್ |
ಶಿವಾರ್ಥಂ ಭಾವಯನ್ ಯೋಗೀ
ಜೀವನ್ಮುಕ್ತೋ ಭವಿಷ್ಯತಿ || 17-57
ತನ್ನ ಸರ್ವ ಇಂದ್ರಿಯಗಳ ಮುಖಾಂತರವಾಗಿ ದೊರೆಯುವ ಕರ್ಮಜನ್ಯವಾದ ಸುಖದುಃಖಗಳನ್ನು ಶಿವಾರ್ಥವಾಗಿ ಭಾವಿಸುವ ಯೋಗಿಯು ಜೀವನ್ಮುಕ್ತನಾಗುತ್ತಾನೆ.
ಇತಿ ಭಾವಾರ್ಪಿತಸ್ಥಲಂ
--------------------------------------------------
ಅಥ ಶಿಷ್ಯಸ್ಥಲಮ್
ಶಾಸನೀಯೋ ಭವೇದ್ಯಸ್ತು
ಪರಕಾಯೇನ ಸರ್ವದಾ |
ತತ್ಪ್ರಸಾದಾತ್ತು ಮೋಕ್ಷಾರ್ಥಿ
ಸ ಶಿಷ್ಯ ಇತಿ ಕೀರ್ತಿತಃ || 17-58
ಪರಕಾಯದ (ಪರಬ್ರಹ್ಮ ದೇಹಿಯಾದ ಭಾವಾರ್ಪಿತ ಸ್ಥಲದ) ಯೋಗಿಯಿಂದ ಯಾವಾತನು ಯಾವಾಗಲೂ ಶಾಸನೀಯನಾಗಿರುತ್ತಾನೆಯೋ (ಶಿಕ್ಷಿಸಲು ಅರ್ಹನಾಗಿರುತ್ತಾನೆಯೋ) ಅಲ್ಲದೆ ಆ ಯೋಗಿಯ ಪ್ರಸಾದದಿಂದಲೇ ಮೋಕ್ಷವನ್ನು ಅಪೇಕ್ಷಿಸುತ್ತಾನೆಯೋ ಅವನು ಶಿಷ್ಯನೆಂದು ಕರೆಯಲ್ಪಡುತ್ತಾನೆ.
#ಭಾವೋ ಯಸ್ಯ ಸ್ಥಿರೋ ನಿತ್ಯಮ್
ಮನೋವಾಕ್ಕಾಯಕರ್ಮಭಿಃ |
ಗುರೌ ನಿಜೇ ಗುಣೋದಾರೇ
ಸ ಶಿಷ್ಯ ಇತಿ ಗೀಯತೇ || 17-59
ಗುಣೋದಾರನಾದ (ಜ್ಞಾನ ವೈರಾಗ್ಯಾದಿ ಗುಣಗಳಿಂದ ಶ್ರೇಷ್ಠನಾದ) ನಿಜ ಗುರುವಿನಲ್ಲಿ (ತನ್ನ ಗುರುವಿನಲ್ಲಿ) ಮನಸ್ಸು, ವಾಕ್ಕು ಹಾಗೂ ಕರ್ಮಗಳೆಂಬ ತ್ರಿಕರಣಗಳಿಂದ ಕೂಡಿದ ಯಾರ ಭಾವವು ನಿತ್ಯವೂ ಸಿದ್ಧವಾಗಿರುವುದೋ ಅವನೇ ಶಿಷ್ಯನೆಂದು ಹೇಳಲ್ಪಡುತ್ತಾನೆ.
ಶಾಂತೋ ದಾಂತಸ್ತಪಶ್ಶೀಲಃ
ಸತ್ಯವಾಕ್ಸಮದರ್ಶನಃ |
ಗುರೌ ಶಿವೇ ಸಮಾನಸ್ಥಃ
ಸ ಶಿಷ್ಯಾಣಾಮಿಹೋತ್ತಮಃ || 17-60
ಶಾಂತನು (ಅಂತರಿಂದ್ರಿಯ ನಿಗ್ರಹ ಸಂಪನ್ನನು), ದಾಂತನು (ಬಹಿರಿಂದ್ರಿಯ ನಿಗ್ರಹ ಸಂಪನ್ನನು), ತಪಶ್ಯೀಲನು (ಯಮ ನಿಯಮಾದಿ ಅಷ್ಟಾಂಗ ಯೋಗ ಸಂಪನ್ನನು), ಸತ್ಯ ನುಡಿಯುವವನು, ಸಮದರ್ಶಿಯು, ಗುರು ಮತ್ತು ಶಿವರೀರ್ವರಲ್ಲಿ ಸಮಾನವಾದ ಬುದ್ಧಿಯುಳ್ಳವನೂ ಆದ ಯಾವ ಶಿಷ್ಯನಿರುವನೋ ಅವನು ಶಿಷ್ಯರಲ್ಲಿ ಉತ್ತಮನೆನಿಸಿಕೊಳ್ಳುವನು.
#ಗುರುಮೇವ ಶಿವಂ ಪಶ್ಯೇತ್
ಶಿವಮೇವ ಗುರುಂ ತಥಾ |
ನೈತಯೋರಂತರಂ ಕಿಂಚಿತ್
ವಿಜಾನೀಯಾದ್ವಿಚಕ್ಷಣಃ || 17-61
ವಿಚಕ್ಷಣನಾದ ಶಿಷ್ಯನು ಗುರುವನ್ನೇ ಶಿವನನ್ನಾಗಿಯೂ, ಅದರಂತೆ ಶಿವನನ್ನೇ ಗುರುವನ್ನಾಗಿಯೂ ನೋಡಬೇಕು. ಅವರೀರ್ವರಲ್ಲಿ ಕಿಂಚಿತ್ತೂ ಭೇದಬುದ್ಧಿಯನ್ನು ಮಾಡಕೂಡದು.
ಶಿವಾಚಾರೇ ಶಿವಧ್ಯಾನೇ
ಶಿವಜ್ಞಾನೇ ಚ ನಿರ್ಮಲೇ |
ಗುರೋರಾದೇಶಮಾತ್ರೇಣ
ಪರಾಂ ನಿಷ್ಠಾಮವಾಪ್ನುಯಾತ್ || 17-62
ಆ ಶಿಷ್ಯನು ಶಿವಾಚಾರದಲ್ಲಿ, ಶಿವಧ್ಯಾನದಲ್ಲಿ, ನಿರ್ಮಲವಾದ ಶಿವಜ್ಞಾನದ ವಿಷಯದಲ್ಲಿ ಗುರುವಿನ ಆದೇಶದಂತೆ ಪರಮನಿಷ್ಠೆ (ವಿಶ್ವಾಸವನ್ನು)ಯನ್ನು ಹೊಂದಬೇಕು.
#ಬ್ರಹ್ಮಾಂಡಬುದ್ಬುದೋದ್ಭೂತಮ್
ಮಾಯಾಸಿಂಧುಂ ಮಹತ್ತರಮ್ |
ಗುರೋಃ ಕವಲಯತ್ಯಾಶು
ಕಟಾಕ್ಷವಡವಾನಲಃ || 17-63
ಈ ಗುರುವಿನ ಕರುಣಾಕಟಾಕ್ಷವೆಂಬ ವಡವಾಗ್ನಿಯು ಅನೇಕ ಬ್ರಹ್ಮಾಂಡ ರೂಪಗಳಾದ ಗುಳ್ಳೆಗಳನ್ನು ತನ್ನಲ್ಲಿ ಹುಟ್ಟುತ್ತಿರುವ ಮಹತ್ತರವಾದ ಮಾಯೆಯೆಂಬ ಸಮುದ್ರವನ್ನು ಶೀಘ್ರದಲ್ಲಿ ಹೀರಿಬಿಡುವುದು.
ಗುರೋಃ ಕಟಾಕ್ಷವೇಧೇನ
ಶಿವೋ ಭವತಿ ಮಾನವಃ |
ರಸವೇಧಾದ್ ಯಥಾ ಲೋಹೋ
ಹೇಮತಾಂ ಪ್ರತಿಪದ್ಯತೇ || 17-64
ರಸವೇಧದಿಂದ (ಸಿದ್ಧರಸವು ವ್ಯಾಪಿಸಿಕೊಳ್ಳುವುದರಿಂದ) ಕಬ್ಬಿಣವು ಹೇಗೆ ಚಿನ್ನವಾಗುವುದೋ ಹಾಗೆ ಗುರುವಿನ ಕಟಾಕ್ಷವೇಧದಿಂದ ಮಾನವನು ಶಿವನಾಗುತ್ತಾನೆ.
#ನ ಲಂಘಯೇದ್ ಗುರೋರಾಜ್ಞಾಮ್
ಜ್ಞಾನಮೇವ ಪ್ರಕಾಶಯನ್ |
ಶಿವಾಸಕ್ತೇನ ಮನಸಾ
ಸರ್ವಸಿದ್ಧಿಮವಾಪ್ನುಯಾತ್ || 17-65
ಆದ್ದರಿಂದ ಅಂಥ ಶ್ರೇಷ್ಠ(ನಾದ) ಗುರುವಿನ ಆಜ್ಞೆಯನ್ನು ಮೀರಕೂಡದು ಮತ್ತು ಶಿವನಲ್ಲಿ ಆಸಕ್ತವಾದ ಮನಸ್ಸಿನಿಂದ ಜ್ಞಾನವನ್ನೇ ಪ್ರಕಾಶಿಸುವವನಾಗಿ ಸಕಲ ಸಿದ್ಧಿಗಳನ್ನು ಪಡೆಯುವನು.
ಶಿವಾದನ್ಯಜ್ಜಗನ್ಮಿಥ್ಯಾ
ಶಿವಃ ಸಂವಿತ್ಸ್ವರೂಪಕಃ |
ಶಿವಸ್ತ್ವಮಿತಿ ನಿರ್ದಿಷ್ಟೋ
ಗುರುಣಾ ಮುಕ್ತ ಏವ ಸಃ || 17-66
ಜಗತ್ತು ಶಿವನಿಗಿಂತಲೂ ಭಿನ್ನವಾದುದು ಎಂದು ತಿಳಿಯುವುದು ಮಿಥ್ಯೆ. ಶಿವನು ಸಂವಿತ್ಸ್ವರೂಪನು (ಅರಿವಿನ ಸ್ವರೂಪವಾಗುಳ್ಳಾತನು) ಆ ಶಿವನೇ ನೀನಿರುವೆ ಎಂದು ಶ್ರೀ ಗುರುವಿನಿಂದ ಉಪದೇಶಿಸಲ್ಪಟ್ಟ ಆ ಶಿಷ್ಯನು ಮುಕ್ತನೇ ಆಗುತ್ತಾನೆ.
#ಗುರೋರ್ಲದ್ಭಾವ ಮಹಾಜ್ಞಾನಮ್
ಸಂಸಾರಾಮಯಭೇಷಜಮ್ |
ಮೋದತೇ ಯಃ ಸುಖೀ ಶಾಂತಃ
ಸ ಜೀವನ್ಮುಕ್ತ ಏವ ಹಿ || 17-67
ಇತಿ ಶಿಷ್ಯಸ್ಥಲಂ
-----------------------------
ಅಥ ಶುಶ್ರೂಷುಸ್ಥಲಮ್
ಬೋಧ್ಯಮಾನಃ ಸ ಗುರುಣಾ
ಪರಕಾಯೇನ ಸರ್ವದಾ |
ತಚ್ಛುಶ್ರೂಷಾರತಃ ಶಿಷ್ಯಃ
ಶುಶ್ರೂಷುರಿತಿ ಕೀತ್ರ್ಯತೇ || 17-68
ಪರಕಾಯನಾದ (ಪರಬ್ರಹ್ಮ ದೇಹಿಯಾದ) ಶ್ರೀ ಗುರುವಿನಿಂದ ಯಾವಾಗಲೂ ಉಪದೇಶಿಸಲ್ಪಡುತ್ತಿರುವ ಆ ಶಿಷ್ಯನು, ಆ ಗುರುವಿನಿಂದ ಬೋಧಿಸಲ್ಪಡುವ ತತ್ತ್ವಾರ್ಥಗಳನ್ನು ಕೇಳಬೇಕೆನ್ನುವ ಉತ್ಕಟವಾದ ಬಯಕೆ ಯುಳ್ಳವನೇ ಶುಷ್ರೂಷುವೆಂದು ಹೇಳಲ್ಪಡುತ್ತಾನೆ.
#ಕಿಂ ಸತ್ಯಂ ಕಿಂ ನು ವಾಸತ್ಯಮ್
ಕ ಆತ್ಮಾ ಕಃ ಪರಃ ಶಿವಃ |
ಇತಿ ಶ್ರವಣಸಂಸಕ್ತೋ
ಗುರೋಃ ಶಿಷ್ಯೋ ವಿಶಿಷ್ಯತೇ || 17-69
ಬೋಧಗುರುವೇ ಸತ್ಯವಾದ ವಸ್ತುವಾವುದು? ಅಸತ್ಯವಾದ ವಸ್ತುವಾವುದು? ಆತ್ಮನಾರು? ಪರಶಿವನಾರು? ಈ ರೀತಿಯಾಗಿ ಶ್ರೀಗುರುವಿನಿಂದ ಉತ್ತರವನ್ನು ಕೇಳುವುದರಲ್ಲಿ ಆಸಕ್ತಿಯುಳ್ಳ ಶಿಷ್ಯನೇ ವಿಶಿಷ್ಟನಾಗಿರುತ್ತಾನೆ.
ಶ್ರುತ್ವಾ ಶ್ರುತ್ವಾ ಗುರೋರ್ವಾಕ್ಯಮ್
ಶಿವಸಾಕ್ಷಾತ್ಕ್ರಿಯಾವಹಮ್ |
ಉಪಶಾಮ್ಯತಿ ಯಃ ಸ್ವಾಂತೇ
ಸ ಮುಕ್ತಿಪದಮಾಪ್ನುಯಾತ್ || 17-70
ಶಿವಸಾಕ್ಷಾತ್ಕಾರವನ್ನು ಮಾಡಿಕೊಡುವ ಶ್ರೀ ಗುರುವಿನ ವಾಕ್ಯವನ್ನು ಮೇಲಿಂದ ಮೇಲೆ ಕೇಳಿ, ಯಾವನು ತನ್ನೊಳಗೆ ಶಾಂತಚಿತ್ತನಾಗುವನೋ (ಸಮಾಧಾನವನ್ನು ಹೊಂದುವನೋ) ಅವನೇ ಮುಕ್ತಿಪದವನ್ನು ಹೊಂದುವನು.
#ನ ಬುದ್ಧ್ಯತಿ ಗುರೋರ್ವಾಕ್ಯಮ್
ವಿನಾ ಶಿಷ್ಯಸ್ಯ ಮಾನಸಮ್ |
ತೇಜೋ ವಿನಾ ಸಹಸ್ರಾಂಶೋಃ
ಕಥಂ ಸ್ಫುರತಿ ಪಂಕಜಮ್ || 17-71
ಶ್ರೀ ಗುರುವಿನ ಉಪದೇಶ ವಾಕ್ಯವನ್ನು ಕೇಳಿದ ಹೊರತಾಗಿ ಶಿಷ್ಯನ ಮನಸ್ಸಿಗೆ ಬೋಧೆಯುಂಟಾಗುವುದಿಲ್ಲ (ಹೃದಯಕಮಲವು ಅರಳುವುದಿಲ್ಲ) ಸಹಸ್ರಾಂಶುವಿನ (ಸೂರ್ಯನ) ಪ್ರಕಾಶವಿಲ್ಲದೆ ಕಮಲವು ಹೇಗೆ ತಾನೇ ಅರಳಬಲ್ಲುದು?
ಸೂರ್ಯಸ್ಯೋದಯಮಾತ್ರೇಣ
ಸೂರ್ಯಕಾಂತಃ ಪ್ರಕಾಶತೇ |
ಗುರೋರಾಲೋಕಮಾತ್ರೇಣ
ಶಿಷ್ಯೋ ಬೋಧೇನ ಭಾಸತೇ || 17-72
ಸೂರ್ಯನು ಉದಯವಾದ ಮೇಲೆ ಸೂರ್ಯಕಾಂತಮಣಿಯು ಹೇಗೆ ಪ್ರಕಾಶಿಸುವುದೋ ಅದರಂತೆ ಶ್ರೀ ಗುರುವಿನ ನೋಟ ಮಾತ್ರದಿಂದ ಶಿಷ್ಯನು ಜ್ಞಾನದಿಂದ ಪ್ರಕಾಶಿಸುತ್ತಾನೆ.
#ಅದ್ವೈತ ಪರಮಾನಂದ-
ಪ್ರಬೋಧೈಕ ಪ್ರಕಾಶಕಮ್ |
ಉಪಾಯಂ ಶ್ರುಣುಯಾಚ್ಛಿಷ್ಯಃ
ಸದ್ಗುರುಂ ಪ್ರಾಪ್ಯ ಸಾಂಜಲಿಃ || 17-73
ಶಿಷ್ಯನಾದವನು ಸದ್ಗುರುವಿನ ಬಳಿಗೆ ಹೋಗಿ ತನ್ನ ಎರಡು ಕೈಗಳನ್ನು ಜೋಡಿಸಿ, ಅದ್ವೈತ ರೂಪವಾದ ಪರಮಾನಂದದ ಬೋಧೆಯೊಂದನ್ನೇ
ತಿಳಿಸಿಕೊಡುವ ಉಪಾಯವನ್ನು ಶ್ರವಣ ಮಾಡಬೇಕು.
ಕಿಂ ತತ್ತ್ವಂ ಪರಮಂ ಜ್ಞೇಯಮ್
ಕೇನ ಸರ್ವೆ ಪ್ರತಿಷ್ಠಿತಾಃ |
ಕಸ್ಯ ಸಾಕ್ಷಾತ್ಕ್ರಿಯಾ ಮುಕ್ತಿಃ
ಕಥಯೇತಿ ಸಮಾಸತಃ || 17-74
(ಭೋ ಗುರುವೇ) ತಿಳಿದುಕೊಳ್ಳಲೇಬೇಕಾದ ಪರಮತತ್ತ್ವವು ಯಾವುದು,
ಯಾರಿಂದ ಈ ಎಲ್ಲಾ ತತ್ತ್ವಗಳು ಪ್ರತಿಷ್ಠಿತವಾಗಿವೆ, ಯಾರನ್ನು ಸಾಕ್ಷಾತ್ಕರಿಸಿಕೊಳ್ಳುವುದರಿಂದ
ಮುಕ್ತಿಯಾಗುವುದು? ಇವೆಲ್ಲದರ ಬಗ್ಗೆ ಸಂಕ್ಷೇಪವಾಗಿ (ಸಾರ ರೂಪವಾಗಿ ನೀವು)
ನನಗೆ ಹೇಳಬೇಕು.
#ಇತಿ ಪ್ರಶ್ನೇ ಕೃತೇ ಪೂರ್ವಮ್
ಶಿಷ್ಯೇಣ ನಿಯತಾತ್ಮನಾ |
ಬ್ರೂಯಾತ್ ತತ್ತ್ವಂ ಗುರುಸ್ತಸ್ಮೈ
ಯೇನ ಸ್ಯಾತ್ ಸಂಸೃತೇರ್ಲಯಃ || 17-75
ನಿಯತಾತ್ಮನಾದ (ಏಕಾಗ್ರಚಿತ್ತನಾದ) ಶಿಷ್ಯನಿಂದ ಈ ಪೂರ್ವದಲ್ಲಿ
ಹೇಳಿದಂತೆ ಪ್ರಶ್ನೆಗಳು ಮಾಡಲ್ಪಡಲು ಶ್ರೀ ಗುರುವು ಅವನಿಗೆ ಸಂಸಾರವನ್ನು
ನೀಗಿಸುವ ತತ್ತ್ವವನ್ನು ಉಪದೇಶಿಸಬೇಕು.
ಶಿವ ಏವ ಪರಂ ತತ್ತ್ವಮ್
ಚಿದಾನಂದಸದಾಕೃತಿಃ |
ಸ ಯಥಾರ್ಥಸ್ತದನ್ಯಸ್ಯ
ಜಗತೋ ನಾಸ್ತಿ ನಿತ್ಯತಾ || 17-76
ಸಚ್ಚಿದಾನಂದ ರೂಪನಾದ ಶಿವನೊಬ್ಬನೇ ಪರಮತತ್ತ್ವನು.
ಅವನೊಬ್ಬನೇ ಯಥಾರ್ಥನು (ನಿತ್ಯನು). ಅವನಿಗಿಂತಲೂ
ಭಿನ್ನವಾದ ಜಗತ್ತಿಗೆ ನಿತ್ಯತ್ವವೂ ಇರುವುದಿಲ್ಲ.
#ಅಯಥಾರ್ಥಪ್ರಪಂಚೋಯಮ್
ಪ್ರತಿತಿಷ್ಠತಿ ಶಂಕರೇ |
ಸದಾತ್ಮನಿ ಯಥಾ ಶುಕ್ತೌ
ರಜತತ್ವಂ ವ್ಯವಸ್ಥಿತಮ್ || 17-77
ಶುಕ್ತಿಯಲ್ಲಿ ರಜತತ್ವವು ಹೇಗೆ ವ್ಯವಸ್ಥಿತವಾಗಿರುವುದೋ (ತೋರುವುದೋ),
ಅದರಂತೆ ಅಯಥಾರ್ಥವಾದ (ಅನಿತ್ಯವಾದ) ಈ ಪ್ರಪಂಚವು ನಿತ್ಯರೂಪನಾದ
ಶಂಕರನಲ್ಲಿ ಪ್ರತಿಷ್ಠಿತವಾಗಿರುವುದು (ತೋರುತ್ತಿರುವುದು).
ಶಿವೋಹಮಿತಿ ಭಾವೇನ
ಶಿವೇ ಸಾಕ್ಷಾತ್ಕೃತೇ ಸ್ಥಿರಮ್ |
ಮುಕ್ತೋ ಭವತಿ ಸಂಸಾರಾತ್
ಮೋಹಗ್ರಂಥೇರ್ವಿಭೇದತಃ ||17-78
ಶಿವೋಹಂ (ಶಿವನೇ ನಾನು) ಎಂಬ ಭಾವದಿಂದ ದೃಢವಾದ ಶಿವಸಾಕ್ಷಾತ್ಕಾರ
ವಾದರೋ ಮೋಹಗ್ರಂಥಿಯ ಬೋಧನದ ಮೂಲಕ ಸಾಧಕನು
ಸಂಸಾರದಿಂದ ಮುಕ್ತನಾಗುತ್ತಾನೆ.
#ಶಿವಂ ಭಾವಯ ಚಾತ್ಮಾನಮ್
ಶಿವಾದನ್ಯಂ ನ ಚಿಂತಯ |
ಏವಂ ಸ್ಥಿರೇ ಶಿವಾದ್ವೈತೇ
ಜೀವನ್ಮುಕ್ತೋ ಭವಿಷ್ಯಸಿ || 17-79
ಭೋ ಶಿಷ್ಯನೇ, ನೀನು ನಿನ್ನನ್ನು ಶಿವನನ್ನಾಗಿಯೇ ಭಾವಿಸು.
ಶಿವನಿಗಿಂತಲೂ ಭಿನ್ನವಾದದ್ದನ್ನು ಚಿಂತಿಸಬೇಡ.
(ಈ ರೀತಿಯಾಗಿ ಮಾಡುವುದರಿಂದ) ನಿನಗೆ ಶಿವಾದ್ವೈತ ಜ್ಞಾನವು
ಸ್ಥಿರಗೊಳ್ಳಲು, ನೀನು ಜೀವನ್ಮುಕ್ತನೇ ಆಗುವೆ.
ಏವಂ ಪ್ರಚೋದಿತಃ ಶಿಷ್ಯೋ
ಗುರುಣಾ ಗುಣಶಾಲಿನಾ |
ಶಿವಮೇವ ಜಗತ್ ಪಶ್ಯನ್
ಜೀವನ್ಮುಕ್ತೋಭಿಜಾಯತೇ || 17-80
ಗುಣಶಾಲಿಯಾದ (ಜ್ಞಾನ ವೈರಾಗ್ಯಾದಿ ಗುಣಸಂಪನ್ನನಾದ) ಶ್ರೀಗುರುವಿನಿಂದ
ಈ ರೀತಿಯಾಗಿ ಚೆನ್ನಾಗಿ ಬೋಧಿಸಲ್ಪಟ್ಟ ಶಿಷ್ಯನು, ಈ ಜಗತ್ತೆಲ್ಲವನ್ನು
ಶಿವಾತ್ಮಕವೆಂದೇ ನೋಡುತ್ತಾ ಜೀವನ್ಮುಕ್ತನೇ ಆಗುತ್ತಾನೆ.
ಇತಿ ಶುಶ್ರೂಷುಸ್ಥಲಂ
--------------------------------
ಅಥ ಸೇವ್ಯಸ್ಥಲಮ್
ಗುರುವಾಕ್ಯಾಮೃತಾಸ್ವಾದಾತ್
ಪ್ರಾಪ್ತಬೋಧಮಹಾಫಲಃ |
ಶುಶ್ರೂಷುರೇವ ಸರ್ವೆಷಾಮ್
ಸೇವ್ಯತ್ವಾತ್ ಸೇವ್ಯ ಉಚ್ಯತೇ || 17-81
ಶ್ರೀಗುರುವಿನ ಉಪದೇಶ ವಾಕ್ಯರೂಪವಾದ ಅಮೃತದ ಆಸ್ವಾದನೆಯಿಂದ
ಶಿವಾದ್ವೈತ ಬೋಧರೂಪವಾದ ಮಹಾಫಲವನ್ನು ಪ್ರಾಪ್ತ ಮಾಡಿಕೊಂಡ
ಶುಶ್ರೂಷುಸ್ಥಲದ ಸಾಧಕನೇ ಎಲ್ಲರಿಂದ ಸೇವಿಸಲು ಯೋಗ್ಯನಾಗಿರುವುದರಿಂದ
ಅವನು ಸೇವ್ಯನೆಂದು ಕರೆಯಲ್ಪಡುತ್ತಾನೆ.
#ಗುರೂಪದಿಷ್ಟೇ ವಿಜ್ಞಾನೇ
ಚೇತಸಿ ಸ್ಥಿರತಾಂ ಗತೇ |
ಸಾಕ್ಷಾತ್ಕೃತಶಿವಃ ಶಿಷ್ಯೋ
ಗುರುವತ್ ಪೂಜ್ಯತೇ ಸದಾ || 17-82
ಶ್ರೀಗುರುವಿನಿಂದ ಉಪದೇಶಿಸಲ್ಪಟ್ಟ ಅನುಭವಾತ್ಮಕವಾದ ಶಿವಾದ್ವೈತ ವಿಜ್ಞಾನವು
ತನ್ನ ಮನಸ್ಸಿನಲ್ಲಿ ಸ್ಥಿರತೆಯನ್ನು ಹೊಂದಲು ಶಿವನನ್ನು ಸಾಕ್ಷಾತ್ಕರಿಸಿಕೊಂಡ
ಶಿಷ್ಯನು ಯಾವಾಗಲೂ ಗುರುವಿನಂತೆ ಪೂಜಿಸಲ್ಪಡುತ್ತಾನೆ.
ಜ್ಞಾನಾದಾಧಿಕ್ಯಸಂಪತ್ತಿಃ
ಗುರೋರ್ಯಸ್ಮಾದುಪಸ್ಥಿತಾ |
ತಸ್ಮಾಜ್ಜ್ಞಾನಾಗಮಾಚ್ಛಿಷ್ಯೋ
ಗುರುವತ್ ಪೂಜ್ಯತಾಂ ವ್ರಜೇತ್|17-83
ಯಾವ ಶ್ರೀಗುರುವಿನ ದೆಸೆಯಿಂದ (ಶಿಷ್ಯನಿಗೆ) ಶಿವಾದ್ವೈತ ಜ್ಞಾನವೆಂಬ ಉತ್ಕೃಷ್ಟವಾದ ಸಂಪತ್ತಿಯು ಪ್ರಾಪ್ತವಾಗುವುದೋ, ಆ ಜ್ಞಾನಪ್ರಾಪ್ತಿಯಿಂದಲೇ ಶಿಷ್ಯನೂ ಸಹ ಗುರುವಿನಂತೆ ಪೂಜ್ಯತ್ವವನ್ನು ಪಡೆಯುತ್ತಾನೆ.
#ಶಿವೋಹಮಿತಿ ಭಾವಸ್ಯ
ನೈರಂತರ್ಯಾದ್ ವಿಶೇಷತಃ |
ಶಿವಭಾವೇ ಸಮುತ್ಪ್ಪನ್ನೇ
ಶಿವವತ್ ಪೂಜ್ಯ ಏವ ಸಃ || 17-84
‘ಶಿವೋಹಂ’ ಎಂಬ (ಶಿವನೇ ನಾನು ಎಂಬ) ಭಾವನೆಯು ನಿರಂತರ ಅಭ್ಯಾಸದಿಂದ ಶಿವಭಾವವು ಉತ್ಪನ್ನವಾಗಲು ಆ ಸೇವ್ಯನು ಶಿವನಂತೆ ಪೂಜ್ಯನಾಗುತ್ತಾನೆ.
ವಿಷಯಾಸಕ್ತಚಿತ್ತೋಪಿ
ವಿಷಯಾಸಂಗವಜರ್ಿತಃ |
ಶಿವಭಾವಯುತೋ ಯೋಗೀ
ಸೇವ್ಯಃ ಶಿವ ಇವಾಪರಃ || 17-85
ಈ ಸೇವ್ಯನು, ವಿಷಯ ಸಂಗಿಯಂತೆ ತೋರಿದರೂ ಸಹ ಶಿವಭಾವದಿಂದ
ಕೂಡಿದ ಅವನು ವಿಷಯ ಸಂಗ ವರ್ಜಿತನಾಗಿರುತ್ತಾನೆ. ಆದ್ದರಿಂದ ಈ ಯೋಗಿಯು
ದ್ವಿತೀಯ ಶಿವನಂತೆ ಜನರಿಗೆ ಸೇವ್ಯನಾಗಿರುತ್ತಾನೆ (ಪೂಜ್ಯನಾಗಿರುತ್ತಾನೆ)
#ಮುಕ್ತಃ ಸಂಶಯಪಾಶತಃ
ಸ್ಥಿರಮನಾ ಬೋಧೇ ಚ ಮುಕ್ತಿಪ್ರದೇ
ಮೋಹಂ ದೇಹಭೃತಾಂ ದೃಶಾ
ವಿಘಟಯನ್ ಮೂಲಂ ಮಹಾಸಂಸೃತೇಃ|
ಸಂಶಯಪಾಶಗಳಿಂದ ಮುಕ್ತನಾದ ಮತ್ತು ಮುಕ್ತಿಪ್ರದಾಯಕನಾದ
ಶಿವಾದ್ವೈತ ಬೋಧೆಯಲ್ಲಿ ಸ್ಥಿರ ಮನಸ್ಕನಾದ ಜೀವಿಗಳ ಸಂಸಾರಕ್ಕೆ
ಮೂಲ ಕಾರಣವಾದ ಮೋಹವನ್ನು
ಸತ್ತಾನಂದಚಿದಾತ್ಮಕೇ ನಿರುಪಮೇ
ಶೈವೇ ಪರಸ್ಮಿನ್ ಪದೇ
ಲೀನಾತ್ಮಾ ಕ್ಷಯಿತಪ್ರಪಂಚವಿಭವೋ
ಯೋಗೀ ಜನೈಃ ಸೇವ್ಯತೇ||17-86
ತನ್ನ ಕೃಪಾದೃಷ್ಟಿಯಿಂದಲೇ ತೊಲಗಿಸುವ ಸಚ್ಚಿದಾನಂದ ಸ್ವರೂಪವೂ, ಉಪಮಾತೀತವೂ ಆದ ಪರಶಿವ ಪದದಲ್ಲಿ ಲೀನಾತ್ಮನಾದ ಹಾಗೂ ಪ್ರಪಂಚದ ವೈಭವವನ್ನು ಕ್ಷಯಿಸಿಕೊಂಡ ಸೇವ್ಯಸ್ಥಲದ ಯೋಗಿಯು ಲೋಕದ ಜನರಿಂದ ಸೇವಿಸಿಕೊಳ್ಳಲು ಯೋಗ್ಯನಾಗಿರುತ್ತಾನೆ.
ಇತಿ ಸೇವ್ಯಸ್ಥಲಂ ಪರಿಸಮಾಪ್ತಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು
ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ
ಶ್ರೀರೇಣುಕಾಗಸ್ತ್ಯಸಂವಾದೇ ವೀರಶೈವಧರ್ಮನಿರ್ಣಯೇ
ಶ್ರೀ ಶಿವಯೋಗಿಶಿವಾಚಾರ್ಯವಿರಚಿತೇ
ಶ್ರೀ ಸಿದ್ಧಾಂತಶಿಖಾಮಣೌ
ಲಿಂಗಸ್ಥಲಾಂತರ್ಗತ ಪ್ರಸಾದಿಸ್ಥಲೇ
ಕಾಯಾನುಗ್ರಹಾದಿನವವಿಧಸ್ಥಲಪ್ರಸಂಗೋ ನಾಮ
ಸಪ್ತದಶಃ ಪರಿಚ್ಛೇದಃ ||
ಇಲ್ಲಿಗೆ ಸೇವ್ಯಸ್ಥಲವು ಮುಗಿಯಿತು.
ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ
ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ,
ಶ್ರೀ ರೇಣುಕಾಗಸ್ತ್ಯಸಂವಾದರೂಪವೂ, ಶ್ರೀ ವೀರಶೈವ ಧರ್ಮನಿರ್ಣಯವೂ,
ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಲಿಂಗಸ್ಥಲಾಂತರ್ಗತವಾದ
ಪ್ರಸಾದಿಸ್ಥಲದಲ್ಲಿಯ ಕಾಯಾನುಗ್ರಹಾದಿ ಒಂಭತ್ತು ವಿಧ ಸ್ಥಲಪ್ರಸಂಗವೆಂಬ ಹೆಸರಿನ ಹದಿನೇಳನೆಯ ಪರಿಚ್ಛೇದವು ಮುಗಿದುದು.