ಷೋಡಶಃ ಪರಿಚ್ಛೇದಃ
ಮಾಹೇಶ್ವರ ಸ್ಥಲಾಂತರ್ಗತ ನವವಿಧಲಿಂಗಸ್ಥಲಪ್ರಸಂಗಃ
ಅಥ ಮಾಹೇಶ್ವರಸ್ಥಲಮ್
|| ಅಗಸ್ತ್ಯ ಉವಾಚ ||
!ಸ್ಥಲಾನಾಂ ನವಕಂ ಪ್ರೋಕ್ತಮ್
ಭಕ್ತಸ್ಥಲ ಸಮಾಶ್ರಯಮ್|
ಮಾಹೇಶ್ವರಸ್ಥಲೇ ಸಿದ್ಧಮ್
ಸ್ಥಲಭೇದಂ ವದಸ್ವ ಮೇ|| 16-1
ಭಕ್ಥಸ್ಥಲವನ್ನಾಶ್ರಯಿಸಿದ ಒಂಭತ್ತು ಸ್ಥಲಗಳು (ಲಿಂಗ ಸ್ಥಲಗಳು) ನಿನ್ನಿಂದ ಹೇಳಲ್ಪಟ್ಟವು.
ಇನ್ನು ಮಾಹೇಶ್ವರಸ್ಥಲದಲ್ಲಿರುವ ಸ್ಥಲಭೇದವನ್ನು ನನಗೆ ಹೇಳುವಂಥವನಾಗು.
|| ಶ್ರೀ ರೇಣುಕ ಉವಾಚ ||
#ಮಾಹೇಶ್ವರಸ್ಥಲೇ ಸಂತಿ
ಸ್ಥಲಾನಿ ನವ ತಾಪಸ |
ಕ್ರಿಯಾಗಮಸ್ಥಲಂ ಪೂರ್ವಮ್
ತತೋ ಭಾವಾಗಮ ಸ್ಥಲಮ್ || 16-2
ಹೇ ತಪಸ್ವಿಯಾದ ಅಗಸ್ತ್ಯನೇ, ಮಾಹೇಶ್ವರಸ್ಥಲದಲ್ಲಿ ಒಂಭತ್ತು ಸ್ಥಲಗಳು ಇರುತ್ತವೆ. ಅದರಲ್ಲಿ ಮೊದಲನೆಯದು ಕ್ರಿಯಾಗಮಸ್ಥಲವು. ಅನಂತರ ಭಾವಾಗಮ ಸ್ಥಲವು.
!ಜ್ಞಾನಾಗಮಸ್ಥಲಂ ಚಾಥ
ಸಕಾಯಸ್ಥಲಮೀರಿತಮ್ |
ತತೋಕಾಯಸ್ಥಲಂ ಪ್ರೋಕ್ತಮ್
ಪರಕಾಯ ಸ್ಥಲಂ ತತಃ || 16-3
ಅದಾದ ಮೇಲೆ ಜ್ಞಾನಾಗಮಸ್ಥಲವು. ನಂತರ ಸಕಾಯಸ್ಥಲವು. ಆಮೇಲೆ ಅಕಾಯಸ್ಥಲವು. ತರುವಾಯ ಪರಕಾಯಸ್ಥಲವು,.
#ಧರ್ಮಾಚಾರಸ್ಥಲಂ ಚಾಥ
ಭಾವಾಚಾರಸ್ಥಲಂ ತತಃ |
ಜ್ಞಾನಾಚಾರಸ್ಥಲಂ ಚೇತಿ
ಕ್ರಮಾದೇಷಾಂ ಭಿದೋಚ್ಯತೇ || 16-4
ಅದಾದ ಮೇಲೆ ಧರ್ಮಾಚಾರ ಸ್ಥಲವು. ನಂತರ ಭಾವಾಚಾರಸ್ಥಲವು ಮತ್ತು ಜ್ಞಾನಾಚಾರಸ್ಥಲವು. ಕ್ರಮವಾಗಿ ಇವುಗಳ ಭೇದವನ್ನು ಹೇಳುತ್ತೇನೆ
ಅಥ ಕ್ರಿಯಾಗಮ ಸ್ಥಲಮ್
---------------------
ಶಿವೋ ಹಿ ಪರಮಃ ಸಾಕ್ಷಾತ್
ಪೂಜಾ ತಸ್ಯ ಕ್ರಿಯೋಚ್ಯತೇ |
ತತ್ಪರಾ ಆಗಮಾ ಯಸ್ಮಾತ್
ತದುಕ್ತೋಯಂ ಕ್ರಿಯಾಗಮಃ || 16-5
ಪರಮನು (ಪರಸ್ಥಲಿಯಾದ ಶಿವಯೋಗಿಯು) ಸಾಕ್ಷಾತ್ ಶಿವನೇ ಆಗಿದ್ದಾನೆ. ಆ ಶಿವನ ಪೂಜೆಯೇ (ಆ ಶಿವಯೋಗಿಯಾದ ಪರಸ್ಥಲಿಯ ಪೂಜೆಯೇ) ಕ್ರಿಯೆ ಎನಿಸಿಕೊಳ್ಳುವುದು. ಅಂತಹ ಕ್ರಿಯೆಯನ್ನು ಹೇಳುವ ಆಗಮಗಳೇ ಕ್ರಿಯಾಗಮಗಳೆಂದು ಹೇಳಲ್ಪಟ್ಟಿರುವವು.
#ಪ್ರಕಾಶತೇ ಯಥಾ ನಾಗ್ನಿಃ
ಅರಣ್ಯಾಂ ಮಥನಂ ವಿನಾ |
ಕ್ರಿಯಾಂ ವಿನಾ ತಥಾಂತಸ್ಥೋ
ನ ಪ್ರಕಾಶೋ ಭವೇಚ್ಛಿವಃ || 16-6
ಅರಣಿಮಂಥನವನ್ನು ಮಾಡದೆ (ಕಟ್ಟಿಗೆಯ ಗುಳಿಯಲ್ಲಿ ಕೊರಡನಿಟ್ಟು ಮಂಥನ ಮಾಡದೆ) ಅಗ್ನಿಯು ಹೇಗೆ ಪ್ರಕಟವಾಗುವುದಿಲ್ಲವೋ ಅದರಂತೆ ಶಿವರೂಪವಾದ ಕ್ರಿಯೆಯನ್ನು ಮಾಡಲಾರದೆ ಅಂತರಂಗದಲ್ಲಿಯ ಶಿವನು ಪ್ರಕಾಶಿಸಲಾರನು.
ನ ಯಥಾ ವಿಧಿಲೋಪಃ ಸ್ಯಾತ್
ಯಥಾ ದೇವಃ ಪ್ರಸೀದತಿ |
ಯಥಾಗಮಃ ಪ್ರಮಾಣಂ ಸ್ಯಾತ್
ತಥಾ ಕರ್ಮ ಸಮಾಚರೇತ್ || 16-7
ವಿಧಿಯು ಲೋಪವಾಗದ ಹಾಗೆ, ಶಿವನು ಪ್ರಸನ್ನವಾಗುವ ಹಾಗೆ ಆಗಮಶಾಸ್ತ್ರದ ಪ್ರಮಾಣದಂತೆ ಶಿವಪೂಜಾರೂಪವಾದ ಕರ್ಮವನ್ನು ಆಚರಿಸಬೇಕು.
ವಿಧಿಃ ಶಿವನಿಯೋಗೋಯಮ್
ತಸ್ಮಾದ್ ವಿಹಿತಕರ್ಮಣಿ |
ಶಿವಾರಾಧನಬುದ್ಧ್ಯೈವ
ನಿರತಃ ಸ್ಯಾದ್ ವಿಚಕ್ಷಣಃ || 16-8
ವಿಧಿಯೆಂದರೆ ಶಿವನ ಶಾಸನವೆಂದರ್ಥ. ಆದ್ದರಿಂದ ವಿಚಕ್ಷಣನಾದವನು ಶಿವಾರಾಧನ ಬುದ್ಧಿಯಿಂದಲೇ ವಿಹಿತವಾದ ಕರ್ಮಗಳನ್ನು ಆಚರಿಸಬೇಕು.
ಗುರೋರಾದೇಶಮಾಸಾದ್ಯ
ಪೂಜಯೇತ್ ಪರಮೇಶ್ವರಮ್ |
ಪೂಜಿತೇ ಪರಮೇಶಾನೇ
ಪೂಜಿತಾಃ ಸರ್ವದೇವತಾಃ || 16-9(2 sal)
ಶ್ರೀಗುರುವಿನ ಆದೇಶವನ್ನು ಪಡೆದುಕೊಂಡೇ ಪರಮೇಶ್ವರನನ್ನು ಪೂಜಿಸಬೇಕು.
ಆ ಪರಮೇಶ್ವರನನ್ನು ಪೂಜಿಸಲು ಎಲ್ಲ ದೇವತೆಗಳನ್ನೂ ಪೂಜಿಸಿದಂತೆ ಆಗುತ್ತದೆ.
#ಸದಾ ಶಿವಾರ್ಚನೋಪಾಯ-
ಸಾಮಗ್ರೀವ್ಯಗ್ರಮಾನಸಃ |
ಶಿವಯೋಗರತೋ ಯೋಗೀ
ಮುಚ್ಯತೇ ನಾತ್ರ ಸಂಶಯಃ || 16-10
ಯಾವಾಗಲೂ ಶಿವಾರ್ಚನೆಗೆ ಸಾಧನಗಳಾದ ಸಾಮಗ್ರಿಗಳನ್ನು ಸಂಪಾದಿಸುವುದರಲ್ಲಿಯೇ ತೊಡಗಿದ ಮನಸ್ಸುಳ್ಳ ಮತ್ತು ಶಿವಯೋಗದಲ್ಲಿಯೇ ರತನಾದ ಯೋಗಿಯು ಮುಕ್ತನಾಗುತ್ತಾನೆ. ಇದರಲ್ಲಿ ಯಾವ ಸಂಶಯವೂ ಇರುವುದಿಲ್ಲ.
ಅಂಧಪಂಗುವದನ್ಯೋನ್ಯ-
ಸಾಪೇಕ್ಷೇ ಜ್ಞಾನಕರ್ಮಣೀ |
ಫಲೋತ್ಪತ್ತೌ ವಿರಕ್ತಸ್ತು
ತಸ್ಮಾತ್ ತದ್ದ್ವಯಮಾಚರೇತ್ 16-11
ಜ್ಞಾನ ಕರ್ಮಗಳು (ಶಿವಾದ್ವೈತ ಜ್ಞಾನ ಮತ್ತು ಶಿವಪೂಜಾರೂಪವಾದ ಕರ್ಮಗಳು) ಕುರುಡ ಮತ್ತು ಕುಂಟರಂತೆ ಪರಸ್ಪರ ಸಾಪೇಕ್ಷಗಳಾಗಿರುತ್ತವೆ. ಆದ್ದರಿಂದ ಫಲಗಳಲ್ಲಿ (ಪರಾ ಮತ್ತು ಅಪರಾ ಮುಕ್ತಿರೂಪವಾದ ಫಲಗಳಲ್ಲಿ) ವಿರಕ್ತನಾಗಿ ಸಾಧಕನು ಜ್ಞಾನ ಕರ್ಮಗಳೆರಡನ್ನೂ ಆಚರಿಸಬೇಕು.
#ಜ್ಞಾನೇ ಸಿದ್ಧೇಪಿ ವಿದುಷಾಮ್
ಕರ್ಮಾಪಿ ವಿನಿಯುಜ್ಯತೇ |
ಫಲಾಭಿಸಂಧಿ ರಹಿತಮ್
ತಸ್ಮಾತ್ ಕರ್ಮ ನ ಸಂತ್ಯಜೇತ್ || 16-12
ಜ್ಞಾನಿಗಳಿಗೆ ಶಿವಾದ್ವೈತ ಜ್ಞಾನವು ಸಿದ್ಧವಾದರೂ ಸಹ ಫಲಾಪೇಕ್ಷೆ ಇಲ್ಲದ ಶಿವಪೂಜಾರೂಪವಾದ ಕರ್ಮವೂ ಸಹ ವಿಧಿಸಲ್ಪಡುತ್ತದೆ. ಆದ್ದರಿಂದ ಶಿವಪೂಜಾ ರೂಪವಾದ ಕರ್ಮವನ್ನು ತ್ಯಜಿಸಕೂಡದು.
!ಆಚಾರ ಏವ ಸರ್ವೆಷಾಮ್
ಅಲಂಕಾರಾಯ ಕಲ್ಪ್ಯತೇ |
ಆಚಾರಹೀನಃ ಪುರುಷೋ
ಲೋಕೇ ಭವತಿ ನಿಂದಿತಃ || 16-13
ಎಲ್ಲರಿಗೂ ಆಚಾರವೇ ಅಲಂಕಾರವೆಂದು ಹೇಳಲ್ಪಟ್ಟಿದೆ. ಆದ್ದರಿಂದ ಈ ಲೋಕದಲ್ಲಿ ಆಚಾರಹೀನನಾದ ಮನುಷ್ಯನು ನಿಂದಿತನಾಗುತ್ತಾನೆ.
#ಜ್ಞಾನೇನಾಚಾರ ಯುಕ್ತೇನ
ಪ್ರಸೀದತಿ ಮಹೇಶ್ವರಃ |
ತಸ್ಮಾದಾಚಾರವಾನ್ ಜ್ಞಾನೀ
ಭವೇದಾದೇಹಪಾತನಮ್ || 16-14
ಸದಾಚಾರಯುಕ್ತವಾದ ಜ್ಞಾನದಿಂದಲೇ ಮಹೇಶ್ವರನಾದ ಶಿವನು ಪ್ರಸನ್ನನಾಗುತ್ತಾನೆ. ಆದ್ದರಿಂದ ಜ್ಞಾನಿಯಾದವನು ದೇಹ ಪತನವಾಗುವವರೆಗೆ (ಮರಣ ಪರ್ಯಂತರವಾಗಿ) ಆಚಾರವಂತನಾಗಿಯೇ ಇರಬೇಕು.
ಇತಿ ಕ್ರಿಯಾಗಮಸ್ಥಲಂ
---------------------
ಅಥ ಭಾವಾಗಮಸ್ಥಲಮ್
ಭಾವಚಿಹ್ನಾನಿ ವಿದುಷೋ
ಯಾನಿ ಸಂತಿ ವಿರಾಗಿಣಃ |
ತಾನಿ ಭಾವಾಗಮತ್ವೇನ
ವರ್ತಂತೇ ಸರ್ವದೇಹಿನಾಮ್ || 16-15
ವೈರಾಗ್ಯ ಸಂಪನ್ನನಾದ ಶಿವಯೋಗಿಗೆ ಯಾವ ಭಾವಚಿಹ್ನೆಗಳುಂಟೋ (ಪರಿಪೂರ್ಣ ಶಿವಸ್ವರೂಪವಾದ ಅವನ ಮನಸ್ಸಿನ ಲಕ್ಷಣಗಳುಂಟೋ) ಅವುಗಳೇ ಎಲ್ಲ ಜೀವಿಗಳಿಗೆ ಭಾವಾಗಮವೆಂದು ಹೇಳಲ್ಪಡುತ್ತದೆ.
#ಶಿವೋಹಮಿತಿ ಭಾವೋಪಿ
ಶಿವತಾಪತ್ತಿಕಾರಣಮ್ |
ನ ಜ್ಞಾನಮಾತ್ರಂ ನಾಚಾರೋ
ಭಾವಯುಕ್ತಃ ಶಿವೋ ಭವೇತ್|| 16-16
‘ಶಿವೋಹಂ’ (ಶಿವನೇ ನಾನು) ಎಂಬ ಭಾವವೇ ಶಿವತ್ವ ಪ್ರಾಪ್ತಿಗೆ ಕಾರಣವಾಗಿರುತ್ತದೆ. ಆದರೆ ಕೇವಲ ಶಿವಜ್ಞಾನವೇ ಆಗಲಿ, ಕೇವಲ ಶಿವಪೂಜಾರೂಪವಾದ ಆಚಾರವೇ ಆಗಲಿ ಶಿವತ್ವವನ್ನು ಪ್ರಾಪ್ತಿಮಾಡಿಕೊಡಲಾರವು. ಆದ್ದರಿಂದ ಭಾವಯುಕ್ತನಾಗಿಯೇ (ಧ್ಯಾನಯುಕ್ತನಾಗಿಯೇ) ಶಿವನಾಗಬೇಕು (ಜ್ಞಾನ ಮತ್ತು ಆಚಾರಗಳನ್ನು ಭಾವಯುಕ್ತನಾಗಿಯೇ ಮಾಡಬೇಕೆಂಬುದೇ ತಾತ್ಪರ್ಯ).
ಜ್ಞಾನಂ ವಸ್ತುಪರಿಚ್ಛೇದೋ
ಧ್ಯಾನಂ ತದ್ಭಾವಕಾರಣಮ್ |
ತಸ್ಮಾದ್ ಜ್ಞಾತೇ ಮಹಾದೇವೇ
ಧ್ಯಾನಯುಕ್ತೋ ಭವೇತ್ ಸುಧೀಃ ||16-17
ವಸ್ತುವಿನ ಸ್ವರೂಪವನ್ನು ನಿರ್ಣಯಿಸುವುದೇ ಜ್ಞಾನವು. ತದ್ಭಾವಕ್ಕೆ (ಅದೇ ಆಗಲಿಕ್ಕೆ) ಧ್ಯಾನವು ಕಾರಣ. ಆದ್ದರಿಂದ ಮಹಾದೇವನನ್ನು ತಿಳಿದುಕೊಂಡ ಜ್ಞಾನಿಯು ಧ್ಯಾನಯುಕ್ತನಾಗಬೇಕು.
#ಅಂತರ್ಬಹಿಶ್ಚ ಸರ್ವತ್ರ
ಪರಿಪೂರ್ಣಂ ಮಹೇಶ್ವರಮ್ |
ಭಾವಯೇತ್ ಪರಮಾನಂದ-
ಲಬ್ಧಯೇ ಪಂಡಿತೋತ್ತಮಃ || 16-18
ಪಂಡಿತೋತ್ತಮನು (ಶಿವಾಗಮಶಾಸ್ತ್ರ ಕುಶಲನಾದ ಶಿವಯೋಗಿಯು) ಪರಮಾನಂದದ ಪ್ರಾಪ್ತಿಗಾಗಿ ಮಹೇಶ್ವರನನ್ನು ತನ್ನ ಒಳಗೂ ಮತ್ತು ಹೊರಗೂ ಪರಿಪೂರ್ಣವಾಗಿರುವನೆಂದು ಭಾವಿಸಬೇಕು (ಧ್ಯಾನಿಸಬೇಕು).
ಅರ್ಥಹೀನಾ ಯಥಾ ವಾಣೀ
ಪತಿಹೀನಾ ಯಥಾ ಸತೀ |
ಶ್ರುತಿಹೀನಾ ಯಥಾ ಬುದ್ಧಿಃ
ಭಾವಹೀನಾ ತಥಾ ಕ್ರಿಯಾ || 16-19
ಅರ್ಥಹೀನವಾದ ವಾಣಿ (ಮಾತು), ಪತಿ ಇಲ್ಲದ ಸತಿ, ಶಾಸ್ತ್ರ ಸಮ್ಮತವಲ್ಲದ ಜ್ಞಾನ, ಇವೆಲ್ಲವುಗಳು ಹೇಗೆ ವ್ಯರ್ಥಗಳಾಗಿರುತ್ತವೆಯೋ ಅದರಂತೆ ಭಾವಹೀನವಾದ ಕ್ರಿಯೆಯೂ ಸಹ ವ್ಯರ್ಥವಾಗಿರುತ್ತದೆ.
#ಚಕ್ಷುರ್ಹಿನೋ ಯಥಾ ರೂಪಮ್
ನ ಕಿಂಚಿದ್ವೀಕ್ಷಿತುಂ ಕ್ಷಮಃ |
ಭಾವಹೀನಸ್ತಥಾ ಯೋಗೀ
ನ ಶಿವಂ ದ್ರಷ್ಟುಮೀಶ್ವರಃ || 16-20
ಕಣ್ಣಿಲ್ಲದ ವ್ಯಕ್ತಿಯು ರೂಪವನ್ನು ನೋಡುವುದಕ್ಕೆ ಹೇಗೆ ಸ್ವಲ್ಪವೂ ಸಮರ್ಥನಲ್ಲವೋ ಅದರಂತೆ ಭಾವಹೀನನಾದ ಯೋಗಿಯು ಶಿವನನ್ನು ಕಾಣಲು ಸ್ವಲ್ಪವೂ ಸಮರ್ಥನಾಗುವುದಿಲ್ಲ.
ಭಾವಶುದ್ಧೇನ ಮನಸಾ
ಪೂಜಯೇತ್ ಪರಮೇಷ್ಠಿನಮ್ |
ಭಾವಹೀನಾಂ ನ ಗೃಹ್ಣಾತಿ
ಪೂಜಾಂ ಸುಮಹತೀಮಪಿ || 16-21
ಆದ್ದರಿಂದ ಭಾವಶುದ್ಧವಾದ ಮನಸ್ಸಿನಿಂದಲೇ ಪರಮೇಷ್ಠಿಯನ್ನು (ಪರಶಿವನನ್ನು) ಪೂಜಿಸಬೇಕು. ಭಾವಹೀನವಾದ ಪೂಜೆಯು ಮಹತ್ತರವಾಗಿದ್ದರೂ ಶಿವನು ಅದನ್ನು ಸ್ವೀಕರಿಸುವುದಿಲ್ಲ.
ನೈರಂತರ್ಯೆಣ ಸಂಪನ್ನೇ
ಭಾವೇ ಧ್ಯಾತುಂ ಶಿವಂ ಪ್ರತಿ |
ತದ್ ಭಾವೋ ಜಾಯತೇ ಯದ್ವತ್
ಕ್ರಿಮೇಃ ಕೀಟಸ್ಯ ಚಿಂತನಾತ್ || 16-22
ಯಾವ ರೀತಿಯಾಗಿ ಭ್ರಮರದ ಚಿಂತನೆಯಿಂದ ಕೀಟಕ್ಕೆ ಭ್ರಮರ ಭಾವವು ಉಂಟಾಗುವುದೋ, ಅದರಂತೆ ಶಿವನನ್ನು ಕುರಿತು ನಿರಂತರವಾಗಿ ತನ್ನ ಭಾವನೆಯಲ್ಲಿ ಧ್ಯಾನವು ಸಂಪನ್ನವಾಗಲು ಅವನಿಗೆ ಶಿವತ್ವವೇ ಪ್ರಾಪ್ತವಾಗುವುದು.
ನಿಷ್ಕಲಂಕಂ ನಿರಾಕಾರಮ್
ಪರಬ್ರಹ್ಮ ಶಿವಾಭಿಧಮ್ |
ನಿರ್ಧ್ಯಾತುಮಸಮರ್ಥೊಪಿ
ತದ್ವಿಭೂತಿಂ ವಿಭಾವಯೇತ್ || 16-23
ನಿಷ್ಕಲಂಕನೂ (ನಿರ್ಮಲನೂ), ನಿರಾಕಾರನೂ ಆದ ಶಿವ ಎಂಬ ಹೆಸರಿನ ಪರಬ್ರಹ್ಮವನ್ನು ಧ್ಯಾನಿಸಲು ಅಸಮರ್ಥನಾಗಿದ್ದರೂ ಸಹ ಆ ಪರಶಿವನ ವಿಭೂತಿಯನ್ನು (ಸರ್ವಜ್ಞತ್ವ, ನಿತ್ಯತೃಪ್ತತ್ವ, ಅನಾದಿಬೋಧತ್ವ, ಸ್ವತಂತ್ರತ್ವ, ಅಲುಪ್ತಶಕ್ತಿತ್ವ ಮತ್ತು ಅನಂತ ಶಕ್ತಿತ್ವಗಳೆಂಬ ಷಡ್ಗುಣೈಶ್ವರ್ಯಗಳನ್ನು) ಭಾವಿಸಬೇಕು. ಇವು ಪರಮಾತ್ಮನ ಷಡ್ಗುಣೈಶ್ವರ್ಯಗಳಾಗಿವೆ.
ಇತಿ ಭಾವಾಗಮಸ್ಥಲಂ
---------------------
ಅಥ ಜ್ಞಾನಾಗಮಸ್ಥಲಮ್
ಪರಸ್ಯ ಜ್ಞಾನಚಿಹ್ನಾನಿ
ಯಾನಿ ಸಂತಿ ಶರೀರಿಣಾಮ್ |
ತಾನಿ ಜ್ಞಾನಾಗಮತ್ವೇನ
ಪ್ರವರ್ತಂತೇ ವಿಮುಕ್ತಯೇ || 16-24
ಭಾವಾಗಮಸ್ಥಲದ ಪರಮಯೋಗೀಶ್ವರನ ಯಾವ ಜ್ಞಾನ ಚಿಹ್ನೆಗಳಿವೆಯೋ ಅವುಗಳೇ ಶರೀರಗಳಿಗೆ (ಲೋಕದ ಜೀವಿಗಳಿಗೆ) ಮುಕ್ತಿಗೆ ಜ್ಞಾನಾಗಮಗಳಾಗಿ ಪ್ರವರ್ತಿಸುತ್ತವೆ.
ಭಾವೇನ ಕಿಂ ಫಲಂ ಪುಂಸಾಮ್
ಕರ್ಮಣಾ ವಾ ಕಿಮಿಷ್ಯತೇ |
ಭಾವಕರ್ಮಸಮಾಯುಕ್ತಮ್
ಜ್ಞಾನಮೇವ ವಿಮುಕ್ತಿದಮ್ || 16-25
ಪುರುಷರಿಗೆ (ಮನುಷ್ಯರಿಗೆ) ಕೇವಲ ಕರ್ಮದಿಂದಲೇ ಆಗಲಿ ಅಥವಾ ಕೇವಲ ಭಾವದಿಂದಲೇ ಆಗಲಿ ಏನು ಪ್ರಯೋಜನ? ಏಕೆಂದರೆ ಭಾವಕರ್ಮಗಳಿಂದ ಕೂಡಿದ ಜ್ಞಾನವೇ ಮುಕ್ತಿಯನ್ನು ಕೊಡುವುದು.
ಕೇವಲಂ ಕರ್ಮಮಾತ್ರೇಣ
ಜನ್ಮಕೋಟಿಶತೈರಪಿ |
ನಾತ್ಮನಾಂ ಜಾಯತೇ ಮುಕ್ತಿಃ
ಜ್ಞಾನಂ ಮುಕ್ತೇರ್ಹಿ ಕಾರಣಮ್ || 16-26
ಕೇವಲ ಕರ್ಮವೊಂದನ್ನೇ ಆಚರಿಸುತ್ತಾ ಒಂದು ನೂರು ಕೋಟಿ
ಜನ್ಮಗಳನ್ನು ಕಳೆದರೂ ಸಹ ಜೀವಿಗಳಿಗೆ ಮುಕ್ತಿಯು ದೊರೆಯುವುದಿಲ್ಲ.
ಮುಕ್ತಿಗೆ ಜ್ಞಾನವು ಕಾರಣವಾಗಿರುತ್ತದೆ.
ಜ್ಞಾನಹೀನಂ ಸದಾ ಕರ್ಮ
ಪುಂಸಾಂ ಸಂಸಾರಕಾರಣಮ್ |
ತದೇವ ಜ್ಞಾನಯೋಗೇನ
ಸಂಸಾರವಿನಿವರ್ತಕಮ್ || 16-27
ಜ್ಞಾನಹೀನನಾದ ಕೇವಲ ಕರ್ಮವನ್ನೇ ಆಚರಿಸುವುದರಿಂದ
ಅದು ಜೀವಿಗಳ ಸಂಸಾರಬಂಧನಕ್ಕೆ ಕಾರಣವಾಗುವುದು.
ಆ ಕರ್ಮವೇ ಜ್ಞಾನದಿಂದ ಕೂಡಿ ಆಚರಿಸಲ್ಪಟ್ಟಾಗ ಜೀವಿಗಳ
ಸಂಸಾರ ಬಂಧನವನ್ನು ನಿವೃತ್ತಿ ಗೊಳಿಸುವುದು.
ಫಲಂ ಕ್ರಿಯಾವತಾಂ ಪುಂಸಾಮ್
ಸ್ವರ್ಗಾದ್ಯಂ ನಶ್ವರಂ ಯತಃ |
ತಸ್ಮಾತ್ ಸ್ಥಾಯಿಫಲಪ್ರಾಪ್ತ್ಯೈ
ಜ್ಞಾನಮೇವ ಸಮಭ್ಯಸೇತ್ || 16-28
ಕೇವಲ ಕರ್ಮವನ್ನು ಆಚರಿಸುವ ಜೀವಿಗಳಿಗೆ ನಶ್ವರಗಳಾದ ಸ್ವರ್ಗಾದಿ ಫಲಗಳೇ
ದೊರೆಯುವುವು. ಆದ್ದರಿಂದ ಸ್ಥಿರವಾದ ಮುಕ್ತಿ ಫಲವನ್ನು ಪ್ರಾಪ್ತಿ
ಮಾಡಿಕೊಳ್ಳಲು ಜ್ಞಾನವನ್ನೇ ಚೆನ್ನಾಗಿ ಅಭ್ಯಾಸ ಮಾಡಬೇಕು.
ಶಾಸ್ತ್ರಾಭ್ಯಾಸಾದಿಯತ್ನೇನ
ಸದ್ಗುರೋರುಪದೇಶತಃ |
ಜ್ಞಾನಮೇವ ಸಮಭ್ಯಸ್ಯೇತ್
ಕಿಮನ್ಯೇನ ಪ್ರಯೋಜನಮ್ || 16-29
ಶಾಸ್ತ್ರಗಳ (ವೇದಾಗಮಗಳಲ್ಲಿ ಪ್ರಸಿದ್ಧವಾದ ವೀರಶೈವ ಶಾಸ್ತ್ರಗಳ)
ಅಭ್ಯಾಸವೇ ಮೊದಲಾದ ಪ್ರಯತ್ನಗಳಿಂದ ಮತ್ತು ಸದ್ಗುರುವಿನ
ಉಪದೇಶದಿಂದ ಜ್ಞಾನವನ್ನೇ ಅಭ್ಯಸಿಸಬೇಕು.
ಉಳಿದ ಶಾಸ್ತ್ರಗಳಿಂದ ಏನು ಪ್ರಯೋಜನ?
ಜ್ಞಾನಂ ಪರಶಿವಾದ್ವೈತ-
ಪರಿಪಾಕವಿನಿಶ್ಚಯಃ |
ಯೇನ ಸಂಸಾರಸಂಬಂಧ-
ವಿನಿವೃತ್ತಿರ್ಭವೇತ್ ಸತಾಮ್ || 16-30
ಪರಮ ಶಿವಾದ್ವೈತದಲ್ಲಿಯ ಪರಿಪಕ್ವವಾದ ನಿಶ್ಚಯವೇ ಜ್ಞಾನವು.
ಇಂತಹ ಜ್ಞಾನದಿಂದಲೇ ಸತ್ಪುರುಷರಿಗೆ ಸಂಸಾರಬಂಧನದ ನಿವೃತ್ತಿ
ಉಂಟಾಗುವುದು.
ಶಿವಾತ್ಮಕಮಿದಂ ಸರ್ವಮ್
ಶಿವಾದನ್ಯನ್ನ ವಿದ್ಯತೇ |
ಶಿವೋಹಮಿತಿ ಯಾ ಬುದ್ಧಿಃ
ತದೇವ ಜ್ಞಾನಮುತ್ತಮಮ್ || 16-31
ಈ ಕಾಣುವ ಜಗತ್ತೆಲ್ಲವೂ ಶಿವಾತ್ಮಕವೇ ಆಗಿದೆ.
ಇಲ್ಲಿ ಶಿವನಿಗೆ ಅನ್ಯವಾದದ್ದು ಬೇರಾವುದೂ ಇರುವುದಿಲ್ಲ.
ನಾನೂ ಸಹ ಶಿವನೇ ಆಗಿದ್ದೇನೆ ಎನ್ನುವಂತಹ ಬುದ್ಧಿಯೇ
(ತಿಳುವಳಿಕೆಯೇ) ಉತ್ತಮವಾದ ಜ್ಞಾನವೆಂದು ಕರೆಯಲ್ಪಡುವುದು.
ಅಂಧೋ ಯಥಾ ಪುರಸ್ಥಾನಿ
ವಸ್ತೂನಿ ಚ ನ ಪಶ್ಯತಿ |
ಜ್ಞಾನಹೀನಸ್ತಥಾ ದೇಹೀ
ನಾತ್ಮಸ್ಥಂ ವೀಕ್ಷತೇ ಶಿವಮ್ || 16-32
ಅಂಧನಾದ ಮನುಷ್ಯನು ತನ್ನ ಎದುರಿಗಿರುವ ವಸ್ತುಗಳನ್ನು ಹೇಗೆ ನೋಡಲಾರನೋ,
ಅದರಂತೆಯೇ ಜ್ಞಾನ ಹೀನನಾದ ಜೀವಿಯು ತನ್ನೊಳಗಿರುವ ಶಿವನನ್ನು ನೋಡಲಾರನು.
ಶಿವಸ್ಯ ದರ್ಶನಾತ್ ಪುಂಸಾಮ್
ಜನ್ಮರೋಗನಿವರ್ತನಮ್ |
ಶಿವದರ್ಶನಮಪ್ಯಾಹುಃ
ಸುಲಭಂ ಜ್ಞಾನಚಕ್ಷುಷಾಮ್ || 16-33
ಪುರುಷರಿಗೆ (ಜೀವಿಗಳಿಗೆ) ಶಿವ ದರ್ಶನದಿಂದಲೇ ಜನ್ಮರೋಗವು
(ಜನನ-ಮರಣರೂಪವಾದ ಸಂಸಾರ ಬಂಧನವು) ನಿವೃತ್ತಿಯಾಗುವುದು.
ಈ ಶಿವ ದರ್ಶನವು ಜ್ಞಾನ ಚಕ್ಷುಗಳಿಗೆ ಸುಲಭವಾದದ್ದೆಂದು ಜ್ಞಾನಿಗಳು ಹೇಳುತ್ತಾರೆ.
ದೀಪಂ ವಿನಾ ಯಥಾ ಗೇಹೇ
ನಾಂಧಕಾರೋ ನಿವರ್ತತೇ
ಜ್ಞಾನಂ ವಿನಾ ತಥಾ ಚಿತ್ತೇ
ಮೋಹೋಪಿ ನ ನಿವರ್ತತೇ || 16-34
ಮನೆಯಲ್ಲಿ ಅಂಧ ಕಾರವು ದೀಪವಿಲ್ಲದೆ ಹೇಗೆ ತೊಲಗುವುದಿಲ್ಲವೋ,
ಅದರಂತೆ ಚಿತ್ತದಲ್ಲಿಯ ಮೋಹವೂ ಸಹ ಶಿವಜ್ಞಾನವಿಲ್ಲದೆ ನಿವೃತ್ತಿಯಾಗದು.
ಇತಿ ಜ್ಞಾನಾಗಮಸ್ಥಲಂ
--------------------
ಅಥ ಸಕಾಯಸ್ಥಲಮ್
ಪರಸ್ಯ ಯಾ ತನುರ್ಜ್ಞೆಯಾ-
ದೇಹ ಕರ್ಮಾಭಿಮಾನಿನಃ |
ತಯಾ ಸಕಾಯೋ ಲೋಕೋಯಂ
ತದಾತ್ಮತ್ವನಿರೂಪಣಾತ್ || 16-35
ನಾನು ಸ್ಥೂಲನು, ನಾನು ಮಾಡುತ್ತಿದ್ದೇನೆ ಮುಂತಾದ ದೇಹ ಮತ್ತು
ಕರ್ಮಾದಿಗಳ ಅಭಿಮಾನವಿಲ್ಲದಿರುವ ಆ ಪರನ (ಶಿವಯೋಗಿಯ)
ಯಾವ ಶರೀರವಿದೆಯೋ ಅದರಿಂದಲೇ ಈ ಜಗತ್ತು ‘ಸಕಾಯ’ವೆಂದು ಕರೆಯಲ್ಪಡುತ್ತದೆ. ಏಕೆಂದರೆ ಆ ಪರನ ದೇಹವೇ ಜನರಿಗೆ ‘ಆತ್ಮ’ವೆಂಬುದಾಗಿ ನಿರೂಪಿಸಲ್ಪಟ್ಟಿದೆ.
ಕಾಯಂ ವಿನಾ ಸಮಸ್ತಾನಾಮ್
ನ ಕ್ರಿಯಾ ನ ಚ ಭಾವನಾ |
ನ ಜ್ಞಾನಂ ಯತ್ತತೋ ಯೋಗೀ
ಕಾಯವಾನೇವ ಸಂಚರೇತ್ || 16-36
ಎಲ್ಲರಿಗೂ ಕಾಯ ವಿಲ್ಲದೆ ಕ್ರಿಯೆಯಾಗಲಿ, ಭಾವನೆಯಾಗಲಿ ಮತ್ತು
ಜ್ಞಾನ ವಾಗಲಿ ಉಂಟಾಗುವುದಿಲ್ಲ. ಆದ್ದರಿಂದ ಯೋಗಿ ಯಾದವನು
ಕಾಯವುಳ್ಳವನಾಗಿಯೇ ಸಂಚರಿಸಬೇಕು.
ಶಿವೈಕಜ್ಞಾನಯುಕ್ತಸ್ಯ
ಯೋಗಿನೋಪಿ ಮಹಾತ್ಮನಃ |
ಕಾಯಯೋಗೇನ ಸಿದ್ಧ್ಯಂತಿ
ಭೋಗಮೋಕ್ಷಾದಯಃ ಸದಾ || 16-37
ಶಿವೈಕ್ಯ ಜ್ಞಾನವನ್ನು ಪಡೆದ ಯೋಗಿಗಳಾದ ಮಹಾತ್ಮರಿಗೂ ಸಹ
ಕಾಯ ಸಂಬಂಧದಿಂದಲೇ ಯಾವಾಗಲೂ ಭೋಗ ಮೋಕ್ಷಾದಿಗಳು
ಸಿದ್ಧಿಸುತ್ತವೆ.
ಕಾಷ್ಠಂ ವಿನಾ ಯಥಾ ವಹ್ನಿಃ
ಜಾಯತೇ ನ ಪ್ರಕಾಶವಾನ್ |
ಮೂರ್ತಿಂ ವಿನಾ ತಥಾ ಯೋಗೀ
ನಾತ್ಮತತ್ತ್ವಪ್ರಕಾಶವಾನ್ ||16-38
ಕಟ್ಟಿಗೆಯ ಹೊರತಾಗಿ ಅಗ್ನಿಯು ಹೇಗೆ ಪ್ರಕಾಶಮಾನವಾಗಿ ತೋರುವುದಿಲ್ಲವೋ
ಅದರಂತೆ ದೇಹವಿಲ್ಲದೆ ಯೋಗಿಯು ತನ್ನ ಆತ್ಮ ತತ್ತ್ವವನ್ನು ಪ್ರಕಾಶಪಡಿಸಿಕೊಳ್ಳಲು
ಆಗುವುದಿಲ್ಲ.
ಮೂರ್ತ್ಯಾತ್ಮನೈವ ದೇವಸ್ಯ
ಯಥಾ ಪೂಜ್ಯತ್ವಕಲ್ಪನಾ |
ತಥಾ ದೇಹಾತ್ಮನೈವಾಸ್ಯ
ಪೂಜ್ಯತ್ವಂ ಪರಯೋಗಿನಃ || 16-39
ಮೂರ್ತಿರೂಪವಾದ ವಿಗ್ರಹವಿಲ್ಲದೆ ದೇವರ ಪೂಜೆಯು ಹೇಗೆ ಉಂಟಾಗುವುದಿಲ್ಲವೋ,
ಅದರಂತೆ ದೇಹ ಸಂಬಂಧದಿಂದಲೇ ಪರ(ಶಿವ) ಯೋಗಿಗೂ
ಪೂಜ್ಯತ್ವವು ಉಂಟಾಗುತ್ತದೆ.
ನಿಷ್ಕಲೋ ಹಿ ಮಹಾದೇವಃ
ಪರಿಪೂರ್ಣಃ ಸದಾಶಿವಃ |
ಜಗತ್ಸೃಷ್ಟ್ಯಾದಿಸಂಸಿದ್ಧ್ಯೈ
ಮೂರ್ತಿಮಾನೇವ ಭಾಸತೇ || 16-40
ಪರಿಪೂರ್ಣನು, ಸರ್ವದಾ ಮಂಗಲಮಯನೂ, ಸದಾ ಶಿವತತ್ವವೂ
(ಪಂಚಸಾದಾಖ್ಯ, ಪಂಚಕಲೆ ಮತ್ತು ಪಂಚಶಕ್ತಿ ಮುಂತಾದವುಗಳ ಪ್ರಾಕ್ಯಟ್ಯ ಸ್ಥಾನವೇಸದಾಶಿವತತ್ವವು)
ಆದ ಆ ಮಹಾದೇವನು ನಿಷ್ಕಲನಾಗಿದ್ದಾನೆ (ನಿರಾಕಾರನಾಗಿದ್ದಾನೆ).
ಬ್ರಹ್ಮಾದ್ಯಾ ದೇವತಾಃ ಸರ್ವಾಃ
ಮುನಯೋಪಿ ಮುಮುಕ್ಷವಃ |
ಕಾಯವಂತೋ ಹಿ ಕುರ್ವಂತಿ
ತಪಃ ಸರ್ವಾರ್ಥಸಾಧಕಮ್ || 16-41
ಅವನು ಜಗತ್ತಿನ ಸೃಷ್ಟ್ಯಾದಿಗಳ ಸಿದ್ಧಿಗಾಗಿ ಮೂರ್ತಿಮಂತನಾಗಿ ತೋರುತ್ತಾನೆ.
ಬ್ರಹ್ಮಾದಿ ಎಲ್ಲ ದೇವತೆಗಳು, ಮುಮುಕ್ಷುಗಳಾದ ಎಲ್ಲಾ ಮುನಿಗಳು,
ಸರ್ವಾರ್ಥಸಾಧಕವಾದ (ಸಕಲ ಇಷ್ಟಾರ್ಥಗಳನ್ನು ಕೊಡುವ) ತಪಸ್ಸನ್ನು ದೇಹಧಾರಿಗಳಾಗಿಯೇ
ಮಾಡುತ್ತಾರೆ.
ತಪೋ ಹಿ ಮೂಲಂ ಸರ್ವಾಸಾಮ್
ಸಿದ್ಧೀನಾಂ ಯಜ್ಜಗತ್ತ್ರಯೇ |
ತಪಸ್ತತ್ಕಾಯಮೂಲಂ ಹಿ
ತಸ್ಮಾತ್ ಕಾಯಂ ನ ಸಂತ್ಯಜೇತ್ || 16-42
ಮೂರು ಲೋಕದಲ್ಲಿರುವ ಸಕಲ ಸಿದ್ಧಿಗಳಿಗೆ ತಪ್ಪಸ್ಸೇ ಮೂಲ ಸಾಧನವಾಗಿರುತ್ತದೆ.
ಆ ತಪಸ್ಸಿಗೆ ಕಾಯವೇ ಮುಖ್ಯವಾದುದು. ಆದ್ದರಿಂದ ಜ್ಞಾನಿಯಾದವನು ಶರೀರವನ್ನು
ಬಿಡಕೂಡದು.
ಇತಿ ಸಕಾಯಸ್ಥಲಂ
---------------------
ಅಥ ಅಕಾಯಸ್ಥಲಮ್
ಪರಸ್ಯ ದೇಹಯೋಗೇಪಿ
ನ ದೇಹಾಶ್ರಯವಿಕ್ರಿಯಾ |
ಶಿವಸ್ಯೇವ ಯತಸ್ತಸ್ಮಾತ್
ಅಕಾಯೋಯಂ ಪ್ರಕೀರ್ತಿತಃ || 16-44
ಆ ಸಕಾಯ ಸ್ಥಲದ ಪರಯೋಗಿಯು ಔಪಚಾರಿಕ ದೇಹವುಳ್ಳವನಾಗಿ
(ದೇಹಾಭಿಮಾನ ಇಲ್ಲದವನಾಗಿ) ಜಗವೆಲ್ಲವೂ ತನ್ನ ಆತ್ಮವೆಂದು ಭಾವಿಸಿ
ಮತ್ತು ಮಾಯಾ ಸಂಬಂಧವನ್ನು ಕಳೆದುಕೊಳ್ಳುವನೋ ಆಗ ಅವನು
ಅಕಾಯವೆಂದು ಹೇಳಲ್ಪಡುವನು.
ಪರಲಿಂಗೇ ವಿಲೀನಸ್ಯ
ಪರಮಾನಂದಚಿನ್ಮಯೇ |
ಕುತೋ ದೇಹೇನ ಸಂಬಂಧೋ
ದೇಹಿವದ್ಭಾಸನಂ ಭ್ರಮಃ || 16-45
ಪರಯೋಗಿಗೆ ದೇಹ ಸಂಬಂಧವಿದ್ದರೂ ಸಹ ಅವನಿಗೆ ಶಿವನಂತೆ
ದೇಹದಲ್ಲಿಯ ಕಾಯಾದಿ ವಿಕಾರಗಳು ಉಂಟಾಗುವುದಿಲ್ಲ.
ಆದ್ದರಿಂದ ಆ ಯೋಗಿಯು ಅಕಾಯವೆಂದು ಹೇಳಲ್ಪಡುತ್ತಾನೆ.
ದೇಹಾಭಿಮಾನಹೀನಸ್ಯ
ಶಿವಭಾವೇ ಸ್ಥಿತಾತ್ಮನಃ |
ಜಗದೇತಚ್ಛರೀರಂ ಸ್ಯಾತ್
ದೇಹೇನೈಕೇನ ಕಾ ವ್ಯಥಾ || 16-46
ಪರಮಾನಂದ ರೂಪವೂ, ಚಿನ್ಮಯವೂ ಆದ ಆ ಪರಲಿಂಗದಲ್ಲಿ ವಿಲೀನನಾದ
ಆ ಯೋಗಿಗೆ ದೇಹ ಸಂಬಂಧವು ಹೇಗೆ ತಾನೇ ಇರುತ್ತದೆ.
ಅವನು ದೇಹಿಯಂತೆ ತೋರುವುದು (ದೇಹಧಾರಿಯಂತೆ ತೋರುವುದು)
ಭ್ರಮೆಯೇ ಆಗಿದೆ.
ಶಿವಜ್ಞಾನೈಕನಿಷ್ಠಸ್ಯ
ನಾಹಂಕಾರಭವಭ್ರಮಃ |
ನ ಚೇಂದ್ರಿಯಭವಂ ದುಃಖಮ್
ತ್ಯಕ್ತದೇಹಾಭಿಮಾನಿನಃ || 16-47
ದೇಹಾಭಿಮಾನ ಹೀನನಾಗಿ ಶಿವೋಹಂ ಭಾವನೆಯಲ್ಲಿಯೇ ಸ್ಥಿತನಾಗಿರುವ
ಆ ಪರಯೋಗಿಗೆ ಈ ಸಮಸ್ತ ಜಗವೆಲ್ಲವೂ ಶರೀರವಾಗಿರುತ್ತದೆ ಎಂದ ಮೇಲೆ,
ಅವನಿಗಿರುವ ಈ ಒಂದು ದೇಹದಿಂದ ಯಾವ ವ್ಯಥೆಯು ತಾನೇ ಉಂಟಾದೀತು?
ನ ಮನುಷ್ಯೋ ನ ದೇವೋಹಮ್
ನ ಯಕ್ಷೊ ನೈವ ರಾಕ್ಷಸಃ |
ಶಿವೋಹಮಿತಿ ಯೋ ಬುದ್ಧ್ಯಾತ್
ತಸ್ಯ ಕಿಂ ದೇಹಕರ್ಮಣಾ || 16-48
ದೇಹಾಭಿಮಾನವನ್ನು ತ್ಯಾಗ ಮಾಡಿದ, ಶಿವಜ್ಞಾನವೊಂದರಲ್ಲಿಯೇ
ನಿಷ್ಠನಾದ ಆ ಪರಯೋಗಿಗೆ ಅಹಂಕಾರದಿಂದುಂಟಾದ ಭ್ರಮೆಯೇ
ಆಗಲಿ ಅಥವಾ ಇಂದ್ರಿಯಂಗಳಿಂದುಂಟಾದ ದುಃಖವೇ ಆಗಲಿ ಇರುವುದಿಲ್ಲ.
ಇತಿ ಅಕಾಯಸ್ಥಲಂ
---------------------
ಅಥ ಪರಕಾಯಸ್ಥಲಮ್
ವಶೀಕೃತತ್ವಾತ್ ಪ್ರಕೃತೇಃ
ಮಾಯಾಮಾರ್ಗಾತಿವರ್ತನಾತ್ |
ಪರಕಾಯೋಯಮಾಖ್ಯಾತಃ
ಸತ್ಯಜ್ಞಾನ ಸುಖಾತ್ಮಕಃ || 16-49
ಪ್ರಕೃತಿಯನ್ನು ತನ್ನ ವಶದಲ್ಲಿ ಇಟ್ಟುಕೊಂಡಿರುವ ಮತ್ತು ಮಾಯಾಮಾರ್ಗವನ್ನು ಮೀರಿ
ನಿಂತಿರುವ ಆ ಅಕಾಯವೇ ಸಚ್ಚಿದಾನಂದ ಸ್ವರೂಪಾತ್ಮಕನಾಗಿರುವುದರಿಂದ
ಅವನಿಗೆ ಪರಕಾಯನೆಂದು ಹೇಳಲಾಗುತ್ತದೆ.
ಪರಬ್ರಹ್ಮವಪುರ್ಯಸ್ಯ
ಪ್ರಬೋಧಾನಂದಭಾಸುರಮ್ |
ಪ್ರಾಕೃತೇನ ಶರೀರೇಣ
ಕಿಮೇತೇನಾಸ್ಯ ಜಾಯತೇ || 16-50
ಸಚ್ಚಿದಾನಂದ ಸ್ವರೂಪವಾದ ಪರಶಿವ ಬ್ರಹ್ಮವೇ ಯಾರಿಗೆ ಶರೀರವಾಗಿದೆಯೋ ಅಂತಹ
ಪರಕಾಯನಾದ ಯೋಗಿಗೆ ಈ ಪ್ರಾಕೃತವಾದ ಶರೀರದಿಂದ ಯಾವ ಹಾನಿಯೂ ಆಗುವುದಿಲ್ಲ.
ಸಮ್ಯಗ್ಜ್ಞಾನಾಗ್ನಿ ಸಂದಗ್ಧ|
ಜನ್ಮಬೀಜ ಕಲೇವರಃ |
ಶಿವತತ್ತ್ವ್ವಾವ ಲಂಬೀಯಃ|
ಪರಕಾಯಃ ಸ ಉಚ್ಯತೇ ||16-51||
ಸಮ್ಯಕ್ಜ್ಞಾನವೆಂಬ ಅಗ್ನಿಯಲ್ಲಿ (ಶಿವಾದ್ವೈತ ಜ್ಞಾನವೆಂಬ ಅಗ್ನಿಯಲ್ಲಿ)
ಜನ್ಮಬೀಜವನ್ನು ಸುಟ್ಟು ಹಾಕಿದ ಮತ್ತು ಶಿವತತ್ತ್ವವನ್ನು ಅವಲಂಬಿಸಿದ ಯೋಗಿಯೇ
ಪರಕಾಯನೆಂದು ಕರೆಸಿಕೊಳ್ಳುತ್ತಾನೆ.
ಇಂದ್ರಿಯಾಣಿ ಮನೋವೃತ್ತಿ-
ವಾಸನಾಃ ಕರ್ಮಸಂಭವಾಃ |
ಯತ್ರ ಯಾಂತಿ ಲಯಂ ತೇನ
ಸಕಾಯೋಯಂ ಪರಾತ್ಮನಾ || 16-52
ಕರ್ಮಪಾಶದಿಂದ ಹುಟ್ಟಿದ ಮತ್ತು ಮನೋಪ್ರವೃತ್ತಿಯ ವಾಸನೆಗಳು
ಮತ್ತು ದಶೇಂದ್ರಿಯ ವ್ಯಾಪಾರಗಳು ಯಾವ ಪರಬ್ರಹ್ಮದಲ್ಲಿ ಲಯವನ್ನು ಹೊಂದುತ್ತವೆಯೋ,
ಆ ಪರಬ್ರಹ್ಮ ಯಾರಿಗೆ ಕಾಯವಾಗಿದೆಯೋ ಅವನೇ ಪರಕಾಯನೆನಿಸಿಕೊಳ್ಳುವನು.
ಪರಾಹಂತಾಮನುಪ್ರಾಪ್ಯ
ಪಶ್ಯೇದ್ ವಿಶ್ವಂ ಚಿದಾತ್ಮಕಮ್ |
ಸದೇಹೋತಿಭ್ರಮಸ್ತಸ್ಯ
ನಿಶ್ಚಿತಾ ಹಿ ಶಿವಾತ್ಮತಾ || 16-53
ಪರಬ್ರಹ್ಮ ಪರಮಾತ್ಮನೇ ನಾನು ಎಂಬ ಪರಾಹಂತಾ ಸ್ವರೂಪವನ್ನು
ಪ್ರಾಪ್ತಿಮಾಡಿಕೊಂಡು, ವಿಶ್ವವೆಲ್ಲವನ್ನೂ ಚಿದಾತ್ಮಕವಾಗಿ ನೋಡುವ
ಈ ಪರಯೋಗಿಯು ಸದೇಹಿ ಎನ್ನುವುದು ಭ್ರಾಂತಿಯು.
ಏಕೆಂದರೆ ಅವನ ದೇಹವೂ ಸಹ ನಿಶ್ಚಿತವಾಗಿ ಶಿವಾತ್ಮರೂಪವೇ ಆಗಿರುತ್ತದೆ.
ಸ್ವಸ್ವರೂಪಂ ಚಿದಾಕಾರಮ್
ಜ್ಯೋತಿಃ ಸಾಕ್ಷಾದ್ವಿಚಿಂತಯನ್ |
ದೇಹವಾನಪಿ ನಿರ್ದೆಹೋ
ಜೀವನ್ಮುಕ್ತೋ ಹಿ ಸಾಧಕಃ || 16-54
ತನ್ನ ಸ್ವರೂಪವನ್ನು ಚಿದಾಕಾರವಾದ ಜ್ಯೋತಿಯೆಂದು ಸಾಕ್ಷಾತ್ ಚಿಂತಿಸುತ್ತಿರುವ
ಈ ಪರಕಾಯ ಸ್ಥಲದ ಸಾಧಕನು ದೇಹಧಾರಿಯಾಗಿದ್ದರೂ ಸಹ ನಿರ್ದೆಹಿಯೂ
(ದೇಹ ಭಾವನೆ ಇಲ್ಲದವನೂ ಮತ್ತು ಪುನಃ ದೇಹಾಂತರವನ್ನು ಪ್ರಾಪ್ತಿ ಮಾಡಿಕೊಳ್ಳದವನು),
ಜೀವನ್ಮುಕ್ತನೂ ಆಗಿರುತ್ತಾನೆ
ದೇಹಸ್ತಿಷ್ಠತು ವಾ ಯಾತು
ಯೋಗಿನಃ ಸ್ವಾತ್ಮಬೋಧಿನಃ |
ಜೀವನ್ಮುಕ್ತಿರ್ಭವೇತ್ ಸದ್ಯಃ
ಚಿದಾನಂದಪ್ರಕಾಶಿನೀ || 16-55
ಸ್ವಸ್ವರೂಪ ಜ್ಞಾನಸಂಪನ್ನನಾದ ಪರಕಾಯ ಯೋಗಿಯ ಸ್ಥೂಲದೇಹವು
ಇರಲಿ ಅಥವಾ ಇಲ್ಲದೆ ಇರಲಿ ಚಿದಾನಂದ ಪ್ರಕಾಶವಾದ ಜೀವನ್ಮುಕ್ತಿಯು
ತಕ್ಷಣದಲ್ಲೇ ಪ್ರಾಪ್ತವಾಗುತ್ತದೆ.
ಆತ್ಮಜ್ಞಾನಾವಸಾನಂ ಹಿ
ಸಂಸಾರಪರಿಪೀಡನಮ್ |
ಸೂಯರ್ೊದಯೇಪಿ ಕಿಂ ಲೋಕಃ
ತಿಮಿರೇಣೋಪರುದ್ಧ್ಯತೇ || 16-56
ಸಂಸಾರ ಪೀಡೆಯು (ಜನನ ಮರಣ ರೂಪವಾದ ಸಂಸಾರ ಬಾಧೆಯು)
ಆತ್ಮಜ್ಞಾನವಾಗುವವರೆವಿಗೆ ಮಾತ್ರ ಇರುತ್ತದೆ) ಸೂರ್ಯೊದಯವಾದ ಮೇಲೆಯೂ
ಲೋಕಕ್ಕೆ ಕತ್ತಲೆಯು ವ್ಯಾಪಿಸಿರುವುದುಂಟೇ?
(ಸೂರ್ಯೊದಯವಾದ ಮೇಲೆ ಕತ್ತಲೆಯು ಇಲ್ಲವಾಗುವಂತೆ ಆತ್ಮಜ್ಞಾನವಾದ ನಂತರ
ಸಂಸಾರ ಬಾಧೆ ಇರುವುದಿಲ್ಲ).
ದೇಹಾಭಿಮಾನನಿರ್ಮುಕ್ತಃ
ಕಲಾತೀತ ಪದಾಶ್ರಯಃ |
ಕಥಂ ಯಾತಿ ಪರಿಚ್ಛೇದಮ್
ಶರೀರೇಷು ಮಹಾಬುಧಃ || 16-57
ದೇಹಾಭಿಮಾನದಿಂದ ಮುಕ್ತನಾದ, ನಿವೃತ್ಯಾದಿ ಕಲೆಗಳಿಗೆ ಅತೀತವಾದ ಪರಬ್ರಹ್ಮ
ಪದವಿಯನ್ನು ಪಡೆದುಕೊಂಡ ಮಹಾಬುಧನಾದ (ಮಹಾಜ್ಞಾನಿಯಾದ) ಪರಕಾಯ
ಯೋಗಿಯು ಶರೀರಗಳಲ್ಲಿ ಹೇಗೆ ತಾನೇ ಪರಿಚ್ಛಿನ್ನನಾದಾನು?
ಇತಿ ಪರಕಾಯ ಸ್ಥಲಮ್
---------------------
ಅಥ ಧರ್ಮಾಚಾರ ಸ್ಥಲಮ್
ತಸ್ಯೈವ ಪರಕಾಯಸ್ಯ
ಸಮಾಚಾರೋ ಯ ಇಷ್ಯತೇ |
ಸ ಧರ್ಮಃ ಸರ್ವಲೋಕಾನಾಮ್
ಉಪಕಾರಾಯ ಕಲ್ಪ್ಯತೇ || 16-58
ಆ ಪರಕಾಯನಾದ ಯೋಗಿಗೆ ಯಾವ ಆಚಾರವು ಇಷ್ಟವಾಗುತ್ತದೆಯೋ
ಆ ಆಚಾರವೇ ಧರ್ಮವು. ಈ ಧರ್ಮವೇ ಜಗತ್ತಿನ ಎಲ್ಲ ಜನರ ಉಪಕಾರವಾಗಿ
ಸಂಭವಿಸುತ್ತದೆ.
ಅಹಿಂಸಾ ಸತ್ಯಮಸ್ತೇಯಮ್
ಬ್ರಹ್ಮಚರ್ಯಂ ದಯಾ ಕ್ಷಮಾ |
ದಾನಂ ಪೂಜಾ ಜಪೋ ಧ್ಯಾನಮ್
ಇತಿ ಧರ್ಮಸ್ಯ ಸಂಗ್ರಹಃ || 16-59
ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯ, ಕ್ಷಮೆ, ದಾನ, ಪೂಜೆ, ಜಪ ಮತ್ತು ಧ್ಯಾನ
– ಈ ಹತ್ತು ಧರ್ಮವನ್ನು ಸಂಗ್ರಹಿಸುವ ಸಾಧನಗಳಾಗಿರುತ್ತವೆ
(ಪ್ರಾಣಿಗಳನ್ನು ಹಿಂಸಿಸದೆ ಇರುವುದು, ಸತ್ಯವನ್ನು ನುಡಿಯುವುದು,
ಪರದ್ರವ್ಯವನ್ನು ಅಪರಿಹರಿಸದೇ ಇರುವುದು, ಬ್ರಹ್ಮಚರ್ಯವನ್ನು ಪಾಲಿಸುವುದು,
ಪ್ರಾಣಿದಯೆ, ಸೈರಣೆ, ದಾನ, ಶಿವಲಿಂಗ ಪೂಜೆ, ಶಿವಮಂತ್ರ್ರ, ಜಪ ಮತ್ತು ಶಿವಧ್ಯಾನ
– ಈ ಹತ್ತೂ ಆಚರಣೆಗಳು ಧರ್ಮಸಂಗ್ರಹದ ಕಾರಣಗಳಾಗಿರುತ್ತವೆ).
ಶಿವೇನ ವಿಹಿತೋ ಯಸ್ಮಾತ್
ಆಗಮೈರ್ಧರ್ಮಸಂಗ್ರಹಃ |
ತಸ್ಮಾತ್ತಮಾಚರನ್ ವಿದ್ವಾನ್
ತತ್ಪ್ರಸಾದಾಯ ಕಲ್ಪ್ಯತೇ || 16-60
ಈಗ ಹೇಳಿದ ಅಹಿಂಸಾದಿ ಧರ್ಮಸಂಗ್ರಹಗಳು ಆಗಮಗಳಲ್ಲಿ ಶಿವನಿಂದ
ವಿಹಿತಗಳಾಗಿವೆ (ವಿಧಿಸಲ್ಪಟ್ಟಿವೆ). ಆದ್ದರಿಂದ ಅವುಗಳನ್ನು ಆಚರಿಸುವ ವಿದ್ವಾಂಸನು
ಶಿವನ ಪ್ರಸಾದವನ್ನು (ಅನುಗ್ರಹವನ್ನು) ಪಡೆಯಲು ಸಮರ್ಥನಾಗುವನು.
ಅಧರ್ಮಂ ನ ಸ್ಪೃಶೇತ್ ಕಿಂಚಿದ್
ವಿಹಿತಂ ಧರ್ಮಮಾಚರೇತ್ |
ತಂ ಚ ಕಾಮವಿನಿರ್ಮುಕ್ತಮ್
ತಮಪಿ ಜ್ಞಾನಪೂರ್ವಕಮ್ || 16-61
ಸ್ವಲ್ಪವೂ ಕೂಡ ಅಧರ್ಮಾಚರಣೆಯನ್ನು ಮಾಡಕೂಡದು.
ಕೇವಲ ವಿಹಿತ ಧರ್ಮಗಳನ್ನೇ (ಅಹಿಂಸಾದಿ ಧರ್ಮಗಳನ್ನೇ) ಆಚರಿಸಬೇಕು.
ಅವುಗಳನ್ನು ಆಚರಿಸುವಾಗ ‘ಕಾಮವಿನಿರ್ಮುಕ್ತ’ವಾಗಿ (ಫಲಾಪೇಕ್ಷೆಯಿಲ್ಲದೆ)
ಮತ್ತು ಜ್ಞಾನಪೂರ್ವಕವಾಗಿ ಆಚರಿಸಬೇಕು.
ಆತ್ಮವತ್ ಸರ್ವಭೂತಾನಿ
ಸಂಪಶ್ಯೇದ್ ಯೋಗವಿತ್ತಮಃ |
ಜಗದೇಕಾತ್ಮತಾಭಾವಾತ್
ನಿಗ್ರಹಾದಿವಿರೋಧತಃ || 16-62
ಯೋಗವನ್ನು ಬಲ್ಲ ಈ ಯೋಗೀಶ್ವರನು ಜಗತ್ತೆಲ್ಲವನ್ನು ಏಕಾತ್ಮ ಭಾವದಿಂದ
(ಒಂದೇ ಆದ ಪರಬ್ರಹ್ಮ ಸ್ವರೂಪವೆಂಬ ಭಾವದಿಂದ ಕೂಡಿ ಕೊಂಡಿರುವ)
ನಿಗ್ರಹಾದಿಗಳಿಲ್ಲದೆ(ನಿಗ್ರಹ, ಅನುಗ್ರಹಾದಿ ಭಾವನೆಗಳಿಲ್ಲದೆ)ಎಲ್ಲಪ್ರಾಣಿಗಳನ್ನು
ತನ್ನಾತ್ಮಸ್ವರೂಪವಾಗಿಯೇ ಕಾಣುತ್ತಾನೆ
ಏಕ ಏವ ಶಿವಃ ಸಾಕ್ಷಾತ್
ಜಗದೇತದಿತಿ ಸ್ಫುಟಮ್ |
ಪಶ್ಯತಃ ಕಿಂ ನ ಜಾಯೇತ
ಮಮಕಾರೋ ಹಿ ವಿಭ್ರಮಃ || 16-63
ಈ ಜಗವೆಲ್ಲವೂ ಒಬ್ಬನೇ ಆದ ಸಾಕ್ಷಾತ್ ಶಿವನೇ ಆಗಿರುವನು.
ಇದು ನಿಶ್ಚಯವಾದುದು. ಹೀಗೆ ನೋಡುವ ಯೋಗಿಗೆ ಈ ಲೋಕದಲ್ಲಿ
ಏನು ತಾನೇ ಆಗುವುದಿಲ್ಲ (ಯಾವುದು ತಾನೇ ದುರ್ಲಭವು).
ಇನ್ನು ಇದು ನನ್ನದು ಮತ್ತು ಇದು ತನ್ನದೆಂಬ ಮಮಕಾರವಾದರೋ ವಿಶೇಷವಾದ ಭ್ರಮೆಯಾಗಿದೆ
(ಈ ಭ್ರಾಂತಿಯು ಯೋಗಿಯಲ್ಲಿರುವುದಿಲ್ಲ).
ಧರ್ಮ ಏವ ಸಮಸ್ತಾನಾಮ್
ಯತಃ ಸಂಸಿದ್ಧಿಕಾರಣಮ್ |
ನಿಃಸ್ಪೃಹೋಪಿ ಮಹಾಯೋಗೀ
ಧರ್ಮಮಾರ್ಗಂ ಚ ನ ತ್ಯಜೇತ್ || 16-64
ಸರ್ವರಿಗೂ ಸಂಸಿದ್ಧಿಗೆ ಕಾರಣವಾದುದು (ಭೋಗ ಮೋಕ್ಷಗಳ ಸಿದ್ಧಿಗೆ ಕಾರಣವಾದುದು)
ಧರ್ಮವೇ ಆಗಿರುತ್ತದೆ. ಆದ್ದರಿಂದ ಮಹಾಯೋಗಿಯು ನಿಸ್ಪೃಹನಾಗಿದ್ದರೂ
ಸಹ ಧರ್ಮಾಚರಣೆಯನ್ನು ಬಿಡಕೂಡದು.
ಜ್ಞಾನಾಮೃತೇನ ತೃಪ್ತೋಪಿ
ಯೋಗೀ ಧರ್ಮಂ ನ ಸಂತ್ಯಜೇತ್ |
ಆಚಾರಂ ಮಹತಾಂ ದೃಷ್ಟ್ವಾ
ಪ್ರವರ್ತಂತೇ ಹಿ ಲೌಕಿಕಾಃ || 16-65
ಯೋಗಿಯಾದವನು ಜ್ಞಾನಾಮೃತದಿಂದ (ಶಿವಜ್ಞಾನಾಮೃತದಿಂದ) ತೃಪ್ತನಾಗಿದ್ದರೂ
ಸಹ ಧರ್ಮವನ್ನು (ಅಹಿಂಸಾದಿ ಧರ್ಮಗಳನ್ನು) ಬಿಡಕೂಡದು.
ಏಕೆಂದರೆ ಮಹಾತ್ಮರ ಆಚಾರವನ್ನು ನೋಡಿಯೇ ಲೌಕಿಕರು
(ಸಾಮಾನ್ಯ ಜನರು) ವರ್ತಿಸುತ್ತಾರೆ (ಆದ್ದರಿಂದ ಲೋಕಸಂಗ್ರಹಕ್ಕಾಗಿ ಜ್ಞಾನಿಗಳು
ಧರ್ಮವನ್ನು ಆಚರಿಸಬೇಕು).
ಸದಾಚಾರಪ್ರಿಯಃ ಶಂಭುಃ
ಸದಾಚಾರೇಣ ಪೂಜ್ಯತೇ |
ಸದಾಚಾರಂ ವಿನಾ ತಸ್ಯ
ಪ್ರಸಾದೋ ನೈವ ಜಾಯತೇ || 16-66
ಶಂಭುವು ಸದಾಚಾರ ಪ್ರಿಯನಾಗಿರುತ್ತಾನೆ ಮತ್ತು ಅವನು ಸದಾಚಾರಗಳಿಂದಲೇ ಪೂಜಿಸಲ್ಪಡುತ್ತಾನೆ. ಸದಾಚಾರವಿಲ್ಲದಿದ್ದರೆ ಶಿವನ ಪ್ರಸಾದವು ಉಂಟಾಗುವುದಿಲ್ಲ.
ಇತಿ ಧರ್ಮಾಚಾರಸ್ಥಲಂ
----------
ಅಥ ಭಾವಾಚಾರಸ್ಥಲಮ್
ಭಾವ ಏವಾಸ್ಯ ಸರ್ವೆಷಾಮ್
ಭಾವಾಚಾರಃ ಪ್ರಕೀರ್ತಿತಃ |
ಭಾವೋ ಮಾನಸಚೇಷ್ಟಾತ್ಮಾ
ಪರಿಪೂರ್ಣಃ ಶಿವಾಶ್ರಯಃ || 16-67
ಪೂರ್ವದಲ್ಲಿ ಹೇಳಿದ ಧರ್ಮಾಚಾರ ಸಂಪನ್ನಯೋಗಿಯ ಭಾವವೇ ಲೋಕದ ಜನರಿಗೆಲ್ಲಾ
ಭಾವಾಚಾರವೆಂದು ಹೇಳಲ್ಪಡುವುದು (ಭಾವವೆಂದರೆ ಪರಿಪೂರ್ಣವಾಗಿ ಶಿವನನ್ನು
ಆಶ್ರಯಿಸಿದ ಮನೋವೃತ್ತಿ ರೂಪವೆಂದು ತಿಳಿದು ಕೊಳ್ಳಬೇಕು).
ಭಾವನಾವಿಹಿತಂ ಕರ್ಮ
ಪಾವನಾದಪಿ dಪಾವನಮ್ |
ತಸ್ಮಾದ್ಭಾವನಯಾ ಯುಕ್ತಮ್
ಪರಧರ್ಮಂ ಸಮಾಚರೇತ್ || 16-68
ಭಾವನೆಯಿಂದ ಮಾಡಲ್ಪಟ್ಟ ಕರ್ಮವೇ ಅತ್ಯಂತ ಪವಿತ್ರವಾದುದು.
ಆದ್ದರಿಂದ ಶ್ರೇಷ್ಠ(ಪರ)ವಾದ ಶಿವಧರ್ಮಾಚರಣೆಯನ್ನು ಭಾವಯುಕ್ತವಾಗಿಯೇ ಆಚರಿಸಬೇಕು.
ಭಾವೇನ ಹಿ ಮನಃಶುದ್ಧಿಃ
ಭಾವಶುದ್ಧಿಶ್ಚ ಕರ್ಮಣಾ |
ಇತಿ ಸಂಚಿಂತ್ಯ ಮನಸಾ
ಯೋಗೀ ಭಾವಂ ನ ಸಂತ್ಯಜೇತ್||16-69
ಭಾವದಿಂದಲೇ (ಶಿವಭಾವನೆಯಿಂದಲೇ) ಮನಸ್ಸಿನ ಶುದ್ಧಿಯಾಗುವುದು.
ಅದರಂತೆ ಆ ಶುದ್ಧವಾದ ಭಾವದಿಂದಲೇ ಕರ್ಮಗಳ ಫಲಸಿದ್ಧಿಯು ಆಗುವುದು.
ಈ ರೀತಿಯಾಗಿ ಮನಃ ಪೂರ್ವಕವಾಗಿ ಚಿಂತಿಸಿದ ಯೋಗಿಯು
ಭಾವವನ್ನು ಎಂದೂ ತ್ಯಜಿಸಬಾರದು.
ಶಿವಭಾವನಯಾ ಸರ್ವಮ್
ನಿತ್ಯನೈಮಿತ್ತಿಕಾದಿಕಮ್ |
ಕುರ್ವನ್ನಪಿ ಮಹಾಯೋಗೀ
ಗುಣದೋಷೈರ್ನ ಬಾಧ್ಯತೇ || 16-70
ಮಹಾಯೋಗಿಯು ಶಿವಭಾವನೆಯುಳ್ಳವನಾಗಿ ನಿತ್ಯನೈಮಿತ್ತಿಕಾದಿ ಎಲ್ಲ ಕರ್ಮಗಳನ್ನು ಮಾಡಿದರೂ
ಸಹ ಆ ಕರ್ಮ ಸಂಬಂಧಿಗಳಾದ ಗುಣದೋಷಗಳಿಂದ ಅವನಿಗೆ ಯಾವ ಬಾಧೆಯೂ
ಉಂಟಾಗುವುದಿಲ್ಲ.
ಅಂತಃ ಪ್ರಕಾಶಮಾನಸ್ಯ
ಸಂವಿತ್ಸೂರ್ಯಸ್ಯ ಸಂತತಮ್ |
ಭಾವೇನ ಯದುಪಸ್ಥಾನಮ್
ತತ್ಸಂಧ್ಯಾವಂದನಂ ವಿದುಃ || 16-71
ತನ್ನ ಅಂತರಂಗದಲ್ಲಿ (ತನ್ನ ಊಧ್ರ್ವ ಹೃತ್ಕಮಲದಲ್ಲಿ) ಯಾವಾಗಲೂ ಪ್ರಕಾಶಮಾನವಾಗಿರುವ
ಸಂವಿತ್ ಸೂರ್ಯನನ್ನು (ಜ್ಞಾನಸೂರ್ಯನನ್ನು) ಭಾವನೆಯಿಂದ ಮಾಡುವ
ಯಾವ ಉಪಸ್ಥಾನವಿದೆಯೋ (ಉಪಾಸನೆಯಿದೆಯೋ) ಅದನ್ನು
ಸಂಧ್ಯಾವಂದನೆಯನ್ನಾಗಿ ವಿಧರು (ವೀರಶೈವ ಆಚಾರ್ಯರು) ತಿಳಿದಿರುತ್ತಾರೆ.
ಆತ್ಮಜ್ಯೋತಿಷಿ ಸವರ್ೆಷಾಮ್
ವಿಷಯಾಣಾಂ ಸಮರ್ಪಣಮ್ |
ಅಂತರ್ಮುಖೇನ ಭಾವೇನ
ಹೋಮಕರ್ಮೆತಿ ಗೀಯತೇ || 16-72
ತನ್ನ ಆತ್ಮಜ್ಯೋತಿಯಲ್ಲಿ (ಚಿದಗ್ನಿಯಲ್ಲಿ) ಅಂತರ್ಮುಖವಾದ ಭಾವನೆಯಿಂದ ಎಲ್ಲ ವಿಷಯಗಳನ್ನು
ಸಮರ್ಪಣೆ ಮಾಡುವುದೇ (ಸಾಗರ ತರಂಗ ನ್ಯಾಯದಂತೆ ಲಯ ಚಿಂತನೆಯನ್ನು
ಮಾಡುವುದೇ) ಹೋಮಕರ್ಮವೆಂದು ಹೇಳಲ್ಪಡುತ್ತದೆ.
ಭಾವಯೇತ್ ಸರ್ವಕರ್ಮಾಣಿ
ನಿತ್ಯನೈಮಿತ್ತಿಕಾನಿ ಚ |
ಶಿವಪ್ರೀತಿಕರಾಣ್ಯೇವ
ಸಂಗರಾಹಿತ್ಯಸಿದ್ಧಯೇ || 16-73
ಶಿವೇ ನಿವೇಶ್ಯ ಸಕಲಮ್
ಕಾರ್ಯಾಕಾರ್ಯಂ ವಿವೇಕತಃ |
ವರ್ತತೇ ಯೋ ಮಹಾಭಾಗಃ
ಸ ಸಂಗರಹಿತೋ ಭವೇತ್ || 16-74
ಸಂಗರಾಹಿತ್ಯದ ಸಿದ್ಧಿಗಾಗಿ (ಸಂಸಾರ ಬಂಧನದ ನಿವೃತ್ತಿಗಾಗಿ) ತಾನು ಮಾಡುವ
ಸರ್ವ ನಿತ್ಯಕರ್ಮ ಮತ್ತು ನೈಮಿತ್ತಿಕ ಕರ್ಮಗಳು ಶಿವನಲ್ಲಿ ಪ್ರೀತಿಯನ್ನು ಉಂಟು
ಮಾಡುವುದಕ್ಕಾಗಿಯೇ ಇವೆ ಎಂದು ಭಾವಿಸಬೇಕು.
ಆತ್ಮಾನಮಖಿಲಂ ವಸ್ತು
ಶಿವಮಾನಂದಚಿನ್ಮಯಮ್ |
ಏಕಭಾವೇನ ಸತತಮ್
ಸಂಪಶ್ಯನ್ನೇವ ಪಶ್ಯತಿ || 16-75
ವಿವೇಕದಿಂದ (ಮಾಡುವವನೂ ನೀನೇ, ಮಾಡಿಸುವವನೂ ನೀನೆ ಮತ್ತು ಮಾಡಿದ ಕರ್ಮಫಲವೂ
ನೀನೆ ಎಂಬ ವಿವೇಕಬುದ್ಧಿಯಿಂದ) ಯಾವ ಮಹಾನುಭಾವನು ತನ್ನ ಕಾರ್ಯ ಅಕಾರ್ಯಗಳನ್ನು
(ಮಾಡಬೇಕಾದ ಮತ್ತು ಮಾಡಬಾರದ) ಎಲ್ಲ ಕರ್ಮಗಳನ್ನು ಶಿವನಿಗೆ ಸಮರ್ಪಿಸುವನೋ
ಅವನೇ ಸಂಗರಹಿತನಾಗುವನು.