ದ್ವಿತೀಯಃ ಪರಿಚ್ಛೇದಃ ರೇಣುಕ-ದಾರುಕಾ-ವತರಣಮ್
ಸೃಷ್ಟಿ ವಿಚಾರಃ
ಸಚ್ಚಿದಾನಂದ ರೂಪಾಯ
ಸದಸದ್ ವ್ಯಕ್ತಿ ಹೇತವೇ|
ನಮಃ ಶಿವಾಯ ಸಾಂಬಾಯ
ಸ-ಗಣಾಯ ಸ್ವಯಂಭುವೇ||2-1
ಸದಸದ್ರೂಪವಾದ ಪ್ರಪಂಚದ ಅಭಿವ್ಯಕ್ತಿಗೆ ಕಾರಣವಾದ ಸಾಂಬನಾದ,
(ಉಮಾಸಹಿತನಾದ) ಗಣಸಹಿತನಾದ, ಸ್ವಯಂಭುವಾದ, ಸಚ್ಚಿದಾನಂದ
ಸ್ವರೂಪಿಯಾದ ಶಿವನಿಗೆ ನಮಸ್ಕಾರಗಳು (ನಮಃ ಶಿವಾಯ).
#ಸದಾಶಿವ ಮುಖಾಶೇಷ-
ತತ್ತ್ವ ಮೌಕ್ತಿಕ ಶುಕ್ತಿಕಾಮ್ |
ವಂದೇ ಮಾಹೇಶ್ವರೀಂ ಶಕ್ತಿಮ್
ಮಹಾ ಮಾಯಾದಿ ರೂಪಿಣೀಮ್ ||2-2
ಸದಾಶಿವ ಮುಖಶೇಷಾದಿಗಳಾದ ತತ್ತ್ವಗಳೆಂಬ ಮುತ್ತುಗಳಿಗೆ ಚಿಪ್ಪಿನಂತಿರುವ (ಶುಕ್ತಿಕಾಂ)
ಮಹಾ ಮಾಯಾದಿ ರೂಪವುಳ್ಳ ಮಹೇಶ್ವರಿಯಾದ ಶಕ್ತಿಯನ್ನು ನಮಿಸುವೆನು
(ಸದಾಶಿವಾದಿ ಭೂಮಿಪರ್ಯಂತವಾದ 34 ತತ್ತ್ವಗಳು).
ಇತಿ ಮಂಗಲಾಚರಣಮ್
(22 ಶ್ಲೋಕಗಳು)
ವಸ್ತುನಿರ್ದೇಶನಮ್
ಅಸ್ತಿ ಸಚ್ಚಿತ್-ಸುಖಾಕಾರಮ್
ಅಲಕ್ಷಣ ಪದಾಸ್ಪದಮ್ |
ನಿರ್ವಿಕಲ್ಪಂ ನಿರಾಕಾರಮ್ |
ನಿರಸ್ತಾಶೇಷ ವಿಪ್ಲವಮ್||2-3
ಯಾವುದೇ ಲಕ್ಷಣಗಳಿಂದ ತಿಳಿಯಲಶಕ್ಯವಾದ, ನಿರ್ವಿಕಲ್ಪವಾದ (ವಿಕಲ್ಪವೃತ್ತಿಗೆ ವಿಷಯವಾಗದ)
ನಿರಾಕಾರವಾದ ಯಾವ ಬಾಧೆಗಳೂ ಇಲ್ಲದಿರುವ ಇಂತಹ
ಸತ್ ಚಿತ್ ಆನಂದ ಸ್ವರೂಪವಾದ ಒಂದು ವಸ್ತುವು (ಸೃಷ್ಟಿ ಪೂರ್ವದಲ್ಲಿ) ಇತ್ತು.
#ಪರಿಚ್ಛೇದ ಕಥಾ ಶೂನ್ಯಮ್
ಪ್ರಪಂಚಾತೀತ ವೈಭವಮ್ |
ಪ್ರತ್ಯಕ್ಷಾದಿ ಪ್ರಮಾಣಾ-ನಾಮ್
ಅಗೋಚರ ಪದೇ ಸ್ಥಿತಮ್ ||2-4
ದೇಶ ಕಾಲ ವಸ್ತು ಪರಿಚ್ಛೇದಗಳಿಲ್ಲದ,
ಪ್ರಪಂಚಕ್ಕೆ ಅತೀತವಾದ ವೈಭವವುಳ್ಳ,
ಪ್ರತ್ಯಕ್ಷಾದಿ ಪ್ರಮಾಣಗಳಿಗೆ ಗೋಚರವಾಗದ ಸ್ಥಿತಿಯಲ್ಲಿರುವ-
ಸ್ವಪ್ರಕಾಶಮ್ ವಿರಾಜಂತ-ಮ್
ಅನಾಮಯಮ್ ಅನೌಪಮಮ್
ಸರ್ವಜ್ಞಂ ಸರ್ವಗಂ ಶಾಂತಮ್
ಸರ್ವಶಕ್ತಿ ನಿರಂಕುಶಮ್ || 2-5
ಸ್ವಪ್ರಕಾಶವಾಗಿ ವಿರಾಜಮಾನವಾಗಿರುವ, ನಿರಾಮಯವಾದ (ಜನನ, ಮರಣರೂಪ ಬಾಧೆಯಿಲ್ಲದಿರುವ),
ಉಪಮಾರಹಿತವಾಗಿರುವ ಸರ್ವಜ್ಞರೂಪವಾದ, ವ್ಯಾಪಕವಾದ (ಸರ್ವಗಂ),
ಶಾಂತವಾದ, ಸರ್ವಸಾಮಥ್ರ್ಯವುಳ್ಳ ಅಂಕುಶರಹಿತವಾದ-
#ಶಿವರುದ್ರ ಮಹಾದೇವ
ಭವಾದಿ ಪದ ಸಂಜ್ಞಿತಮ್ |
ಅದ್ವಿತೀಯಮ ನಿರ್ದೇಷ್ಯಮ್
ಪರಂಬ್ರಹ್ಮ ಸನಾತನಮ್ ||2-6
ಶಿವ ರುದ್ರ ಮಹಾದೇವ ಭವ ಮುಂತಾದ ಪದಗಳಿಂದ ಕರೆಯಿಸಿಕೊಳ್ಳುವ ಅದ್ವಿತೀಯವಾದ,
ನಿರ್ದೆಶಿಸಲು (ತೋರಿಸಲು) ಬಾರದಿರುವ ಸನಾತನವಾದ ಪರಬ್ರಹ್ಮ ವಸ್ತುವು ಇತ್ತು.
ತತ್ರ ಲೀನ ಮಭೂತ್ ಪೂರ್ವಮ್
ಚೇತನಾ ಚೇತನಂ ಜಗತ್ |
ಸ್ವಾತ್ಮಲೀನಂ ಜಗತ್ಕಾರ್ಯಮ್
ಸ್ವಪ್ರಕಾಶ್ಯಂ ತದದ್ಭುತಮ್ || 2-7
ಅಲ್ಲಿ (ಆ ಪರಬ್ರಹ್ಮದಲ್ಲಿ) ಚೇತನಾಚೇತನವಾದ ಜಗತ್ತು ಸೃಷ್ಟಿಯ ಪೂರ್ವದಲ್ಲಿ ಲೀನವಾಗಿತ್ತು.
ತನ್ನಲ್ಲಿ ಅಡಗಿರುವ ಜಗತ್ತೆಂಬ ಕಾರ್ಯವು ತನ್ನಿಂದಲೇ ಪ್ರಕಾಶಮಾನವಾಗಲು ಯೋಗ್ಯವಾಗಿದೆ.
ಶಿವಾಭಿಧಂ ಪರಂ ಬ್ರಹ್ಮ
ಜಗನ್ನಿರ್ಮಾತುಮ್ ಇಚ್ಛಯಾ |
ಸ್ವರೂಪಮ್ ಆದಧೇ ಕಿಂಚಿತ್
ಸುಖಸ್ಫೂರ್ತಿ ವಿಜೃಂಭಿತಮ್ || 2-8
ಶಿವನೆಂಬ ಅಭಿಧಾನವುಳ್ಳ (ಆ) ಪರಬ್ರಹ್ಮವು ಜಗತ್ತನ್ನು ನಿರ್ಮಾಣ ಮಾಡುವ
ಇಚ್ಛೆಯಿಂದ ಸುಖಸ್ಫೂರ್ತಿಯಿಂದ ಕೂಡಿದ ಕಿಂಚಿತ್ (ಸ್ವಲ್ಪ)
ಸ್ವರೂಪವನ್ನು ಹೊಂದಿತು (ಆದಧೇ) (ಈಶತ್ ಚಲನ).
ನಿರಸ್ತ ದೋಷ ಸಂಬಂಧಮ್
ನಿರುಪಾಧಿಕ ಮ-ವ್ಯಯಮ್ |
ದಿವ್ಯಮ್ ಪ್ರಾಕೃತಂ ನಿತ್ಯಮ್
ನೀಲಕಂಠಂ ತ್ರಿಲೋಚನಮ್ || 2-9
ದೋಷಗಳ (ಹುಟ್ಟು-ಸಾವುಗಳ) ಸಂಬಂಧವಿಲ್ಲದಿರುವ, ಉಪಾಧಿ ರಹಿತವಾದ, ಅವ್ಯಯವಾದ,
ಅಪ್ರಾಕೃತವಾದ (ಪ್ರಕೃತಿ ಸಂಬಂಧವಿಲ್ಲದ), ನಿತ್ಯವಾದ,
ದಿವ್ಯವಾದ (ಆ ವಸ್ತುವು) ನೀಲಕಂಠ (ಮತ್ತು) ತ್ರಿಲೋಚನ (ಮುಕ್ಕಣ್ಣ) ಎಂದೆನಿಸಿಕೊಂಡಿತು.
ಚಂದ್ರಾರ್ಧ ಶೇಖರಂ ಶುದ್ಧಮ್
ಶುದ್ಧ ಸ್ಫಟಿಕ ಸನ್ನಿಭಮ್ |
ಶುದ್ಧ ಮುಕ್ತಾ ಫಲಾಭಾಸಮ್
ಉಪಾಸ್ಯಂ ಗುಣಮೂರ್ತಿಭಿಃ || 2-10
ಅರ್ಧಚಂದ್ರನನ್ನು ಅಲಂಕರಿಸಿಕೊಂಡ, ಶುದ್ಧನಾದ,
ಶುದ್ಧವಾದ ಸ್ಫಟಿಕದಂತೆ ಇರುವ, ಪರಿಶುದ್ಧ ಮುತ್ತಿನ ಕಾಂತಿಯಂತೆ
ಕಾಂತಿಯುಳ್ಳ ಗುಣಮೂರ್ತಿ (ಬ್ರಹ್ಮಾದಿ)ಗಳಿಂದ ಉಪಾಸಿಸಲು ಯೋಗ್ಯನಾದ-
ವಿಶುದ್ಧ ಜ್ಞಾನ ಕರಣಮ್
ವಿಷಯಂ ಸರ್ವಯೋಗೀ-ನಾಮ್ |
ಕೋಟಿ ಸೂರ್ಯ ಪ್ರತೀಕಾಶಮ್
ಚಂದ್ರಕೋಟಿ ಸಮಪ್ರಭಮ್
ಅಪ್ರಾಕೃತ ಗುಣಾ ಧಾರಮ್
ಅನಂತ ಮಹಿಮಾಸ್ಪದಮ್ || 2-11
ವಿಶುದ್ಧ ಜ್ಞಾನಕ್ಕೆ ಅಸಾಧಾರಣ ಕಾರಣವಾದ, ಸಮಸ್ತ ಯೋಗಿಗಳಿಗೆ ವಿಷಯವಾದ
(ಅನುಭವಕ್ಕೆ ವಿಷಯವಾದ), ಕೋಟಿ ಸೂರ್ಯರ ಪ್ರಕಾಶಕ್ಕೆ ಸಮವಾದ ಪ್ರಕಾಶವುಳ್ಳ (ಬೆಳಕು),
ಕೋಟಿ ಚಂದ್ರರ ಕಾಂತಿಗೆ ಸಮವಾದ ಕಾಂತಿಯುಳ್ಳ (ತಂಪು), ಅಪ್ರಾಕೃತ ಗುಣಗಳಿಗೆ ಆಧಾರವಾದ
(ಸತ್ವಾದಿ ಪ್ರಾಕೃತ ಗುಣಗಳಿಗಿಂತಲೂ ಭಿನ್ನವಾದ ಸರ್ವಜ್ಞತ್ವಾದಿ ಅನಂತ ಕಲ್ಯಾಣ ಗುಣಗಳಿಗೆ ಆಧಾರವಾದ),
ಅನಂತ ಮಹಿಮೆಗಳಿಗೆ ಆಧಾರವಾದ (ಶಿವನೆಂಬ ಬ್ರಹ್ಮವು ಸುಖಸ್ಫೂರ್ತಿಯಿಂದ ಕೂಡಿದ), ಕಿಂಚಿತ್ ಸ್ವರೂಪವನ್ನು ಹೊಂದಿತು.
ಅನಂತ ಮಹಿಮೆಗಳಿಗೆ ಆಧಾರವಾದ (ಶಿವನೆಂಬ ಬ್ರಹ್ಮವು ಸುಖಸ್ಫೂರ್ತಿಯಿಂದ ಕೂಡಿದ), ಕಿಂಚಿತ್ ಸ್ವರೂಪವನ್ನು ಹೊಂದಿತು.
ತದೀಯಾ ಪರಮಾ ಶಕ್ತಿಃ
ಸಚ್ಚಿದಾನಂದ ಲಕ್ಷಣಾ |
ಸಮಸ್ತ ಲೋಕನಿರ್ಮಾಣ-
ಸಮವಾಯ ಸ್ವರೂಪಿಣೀ || 2-12
ಸಕಲ ಲೋಕಗಳ ನಿರ್ಮಾಣ ಕಾರ್ಯದಲ್ಲಿ ಸಮವಾಯ
(ಉಪಾದಾನ) ಕಾರಣರೂಪಳಾಗಿರುವ ಆ ಪರಶಿವನ ಸಂಬಂಧಿನಿಯಾದ ಪರಮಾಶಕ್ತಿಯು
(ಪರಾಶಕ್ತಿ, ವಿಮರ್ಶಾಶಕ್ತಿ) ಸಚ್ಚಿದಾನಂದ ಲಕ್ಷಣವುಳ್ಳವಳಾಗಿರುತ್ತಾಳೆ.
ತದಿಚ್ಛಯಾ ಭವತ್ ಸಾಕ್ಷಾತ್
ತತ್ತ್ ಸ್ವರೂಪಾನು ಸಾರಿಣೀ |
ಸ ಶಂಭು ರ್ಭಗವಾನ್ ದೇವಃ |
ಸರ್ವಜ್ಞಃ ಸರ್ವಶಕ್ತಿಮಾನ್ || 2-13
ಜಗತ್ಸಿ-ಸೃಕ್ಷುಃ ಪ್ರಥಮಮ್
ಬ್ರಹ್ಮಾಣಂ ಸರ್ವ ದೇಹಿನಾಮ್ |
ಕರ್ತಾರಂ ಸರ್ವ ಲೋಕಾನಾಮ್
ವಿದಧೇ ವಿಶ್ವನಾಯಕಃ || 2-14
ಆ ಶಕ್ತಿಯು ಪರಶಿವನ ಇಚ್ಛೆಯಿಂದ ಸಾಕ್ಷಾತ್ ಅವನ ಸ್ವರೂಪದಂತಹ ಸ್ವರೂಪವನ್ನೇ ಧರಿಸಿದಳು.
ಸರ್ವಜ್ಞನೂ, ಸರ್ವಶಕ್ತಿಯುತನೂ, ದೇವನೂ (ಮತ್ತು) ಭಗವಂತನೂ, ವಿಶ್ವನಾಯಕನೂ ಆದ
ಆ ಶಂಭುವು ಜಗತ್ತನ್ನು ಸೃಷ್ಟಿಸುವ ಇಚ್ಛೆಯುಳ್ಳವನಾಗಿ ಎಲ್ಲ ಜೀವಿಗಳ (ಮತ್ತು)
ಎಲ್ಲ ಲೋಕಗಳ ಕರ್ತಾರನಾದ ಬ್ರಹ್ಮನನ್ನು ಮೊದಲು ಸೃಷ್ಟಿಸಿದನು.
ತಸ್ಮೈ ಪ್ರಥಮ ಪುತ್ರಾಯ
ಶಂಕರಃ ಶಕ್ತಿಮಾನ್ ವಿಭುಃ|
ಸರ್ವಜ್ಞಃ ಸಕಲಾ ವಿದ್ಯಾಃ|
ಸಾನುಗ್ರಹ ಪಾದಿಶತ್|
ಪ್ರಾಪ್ತವಿದ್ಯೋ ಮಹಾದೇವಾತ್ |
ಬ್ರಹ್ಮಾ ವಿಶ್ವ ನಿಯಾಮಕಾತ್ || 2-15
ಶಕ್ತಿ ಸಮನ್ವಿತನಾದ, ವಿಭುವಾದ, ಸರ್ವಜ್ಞನಾದ ಶಂಕರನು ಆ ಪ್ರಥಮ ಪುತ್ರನಿಗೆ (ಬ್ರಹ್ಮನಿಗೆ)
ಅನುಗ್ರಹಪೂರ್ವಕವಾಗಿ ಸಕಲ ವಿದ್ಯೆಗಳನ್ನು ಉಪದೇಶಿಸಿದನು. ವಿಶ್ವನಿಯಾಮಕನಾದ
ಮಹಾದೇವನಿಂದ ವಿದ್ಯೆಯನ್ನು ಪಡೆದುಕೊಂಡ ಬ್ರಹ್ಮನು-
ಸಮಸ್ತ ಲೋಕಾನ್ ನಿರ್ಮಾ ತುಮ್
ಸಮುದ್ಯಮ ಪರೋಭವತ್ |
ಕೃತೋದ್ಯೋ ಗೋಪಿ ನಿರ್ಮಾಣೇ
ಜಗತಾಂ ಶಂಕರಾ ಜ್ಞಯಾ|
ಅಜ್ಞಾತೋ ಪಾಯ ಸಂಪತ್ತೇ-
ರಭವನ್ಮಾಯಯಾವೃತಃ ||16
ಸಮಸ್ತ ಲೋಕಗಳನ್ನು ನಿರ್ಮಿಸುವ ಉದ್ಯಮದಲ್ಲಿ ತೊಡಗಿಕೊಂಡನು. ಶಂಕರನ ಆಜ್ಞೆಯಂತೆ
ಲೋಕಗಳ ನಿರ್ಮಾಣದಲ್ಲಿ ಕೃತೋದ್ಯೋಗಿಯಾದರೂ (ಬ್ರಹ್ಮನ) ಮಾಯೆಯಿಂದ
ಆವೃತನಾದ್ದರಿಂದ ಉಪಾಯವನ್ನು ತಿಳಿಯದವನಾದನು.
ವಿಧಾತು ಮಖಿಲಾನ್ ಲೋಕಾನ್
ಉಪಾಯಂ ಪ್ರಾಪ್ತುಮಿಚ್ಛಯಾ |
ಪುನಸ್ತಂ ಪ್ರಾರ್ಥಯಾಮಾಸ
ದೇವ ದೇವಂ ತ್ರಿಯಂಬಕಮ್ ||17
ಅಖಿಲ ಲೋಕಗಳನ್ನು ಸೃಷ್ಟಿಸುವುದಕ್ಕಾಗಿ (ವಿಧಾತುಂ) ಉಪಾಯವನ್ನು
ಪಡೆಯುವ ಇಚ್ಛೆಯಿಂದ ದೇವದೇವನಾದ ತ್ರಿಯಂಬಕನನ್ನು
(ಮುಕ್ಕಣ್ಣನನ್ನು) ಪುನಃ ಪ್ರಾರ್ಥಿಸಿದನು.
ನಮಸ್ತೇ ದೇವ ದೇವೇಶ
ನಮಸ್ತೇ ಕರುಣಾಕರ |
ಅಸ್ಮದಾದಿ ಜಗತ್ಸರ್ವಮ್
ನಿರ್ಮಾಣ ನ ವಿಧಿಕ್ಷಮ ||18
ದೇವದೇವನಾದವನೇ, ಕರುಣಾಕರನೇ, ನನ್ನನ್ನು ಮೊದಲುಗೊಂಡು
ಸಮಸ್ತ ಜಗತ್ತನ್ನು ನಿರ್ಮಿಸುವ ವಿಧಾನದಲ್ಲಿ ಸಮರ್ಥನಾದವನೇ, ನಿನಗೆ ನಮಸ್ಕಾರವು.
ಉಪಾಯಂ ವದ ಮೇ ಶಂಭೋ
ಜಗತ್ಸ್ರಷ್ಟಃ! ಜಗತ್ಪತೇ |
ಸರ್ವಜ್ಞಃ ಸರ್ವ ಶಕ್ತಿ ಸ್ತ್ವಮ್
ಸರ್ವಕರ್ತಾ ಸನಾತನಃ |19
ನೀನು ಸರ್ವಜ್ಞನೂ, ಸರ್ವಶಕ್ತಿ ಸಮನ್ವಿತನೂ, ಸರ್ವಕರ್ತನೂ, ಸನಾತನನೂ (ಮೊದಲಿನಿಂದ ಇರುವವನು),
ಜಗತ್ಪತಿಯೂ (ಮತ್ತು) ಜಗತ್ಸೃಷ್ಟಿಕರ್ತನಾದ ಹೇ ಶಂಭುವೇ,
ನನಗೆ ಉಪಾಯವನ್ನು ಹೇಳು (ಸೃಷ್ಟಿ ಮಾಡುವ ಉಪಾಯವನ್ನು ಹೇಳು).
ಇತಿ ಸಂಪ್ರಾರ್ತಿಥ: ಶಂಭುಃ
ಬ್ರಹ್ಮಣಾ ವಿಶ್ವನಾಯಕಃ |
ಉಪಾಯಮವದತ್ ತಸ್ಮೈ
ಲೋಕ ಸೃಷ್ಟಿ ಪ್ರವರ್ತನಮ್ ||20
ಈ ರೀತಿಯಾಗಿ ಬ್ರಹ್ಮನಿಂದ ಪ್ರಾರ್ಥಿಸಲ್ಪಟ್ಟ ವಿಶ್ವನಾಯಕನಾದ
ಶಂಭುವು ಅವನಿಗೆ (ಬ್ರಹ್ಮನಿಗೆ) ಲೋಕಸೃಷ್ಟಿಯ ಪ್ರವರ್ತನೆಯ
ಉಪಾಯವನ್ನು ಹೇಳಿದನು (ಅವದತ್).
ಉಪಾಯಮ್ ಈಶ್ವರೇಣೋಕ್ತಮ್
ಲಬ್ಧ್ವಾಪಿ ಚತುರಾನನಃ |
ನ ಸಮರ್ಥೊ ಭವತ್ ಕರ್ತುಮ್
ನಾನಾ ರೂಪಮ್ ಇದ ಜಗತ್ ||21
ಪುನಸ್ತಂ ಪ್ರಾರ್ಥಯಾಮಾಸ
ಬ್ರಹ್ಮಾ ವಿಹ್ವಲ ಮಾನಸಃ |
ದೇವದೇವ ಮಹಾದೇವ
ಜಗತ್ ಪ್ರಥಮಕಾರಣ|
ನಮಸ್ತೇ ಸಚ್ಚಿದಾನಂದ
ಸ್ವೇಚ್ಛಾ ವಿಗ್ರಹ ರಾಜಿತ ||22
ಭವ ಶರ್ವ ಮಹೇಶಾನ
ಸರ್ವ ಕಾರಣ ಕಾರಣ |
ಭವದುಕ್ತೋ ಶ್ಯುಪಾಯೋ ಮೇ
ನ ಕಿಂಚಿಜ್ಜ್ಞಾಯತೇಧುನಾ ||23
ಸೃಷ್ಟಿಂ ವಿಧೇಹಿ ಭಗವನ್
ಪ್ರಥಮಂ ಪರಮೇಶ್ವರ |
ಜ್ಞಾತೋಪಾಯ ಸ್ತತಃ ಕುರ್ಯಾಮ್
ಜಗತ್ಸೃಷ್ಟಿಮ್ ಉಮಾಪತೇ ||24
ಚತುಮರ್ಮುುಖನಾದ ಬ್ರಹ್ಮನು ಪರಮೇಶ್ವರನಿಂದ ಉಪದೇಶಿಸಿ ಹೇಳಲ್ಪಟ್ಟ ಉಪಾಯವನ್ನು (ಸೃಷ್ಟಿಸುವ ಉಪಾಯವನ್ನು) ಪಡೆದನಾದರೂ ಹಲವು ರೂಪದ ಈ ಜಗತ್ತನ್ನು ಸೃಷ್ಟಿ ಮಾಡಲು ಸಮರ್ಥನಾಗಲಿಲ್ಲ.
ವಿಹ್ವಲ (ಭಯಯುಕ್ತವಾದ) ಮನಸ್ಸಿನ ಬ್ರಹ್ಮನು ಮತ್ತೆ ಪ್ರಾರ್ಥಿಸಿದನು. ಹೇ ದೇವ ದೇವನಾದ ಮಹಾದೇವನೇ, ಜಗದ ಆದಿಕಾರಣನೇ, ಸಚ್ಚಿದಾನಂದನೇ, ಸ್ವೇಚ್ಛೆಯಿಂದ ಅನಂತ ಮೂರ್ತಿಗಳನ್ನು ಧರಿಸಿದವನೇ,
ಭವನೇ (ಸರ್ವ ಸಂಹಾರಕ) (ಸರ್ವಲೋಕೋತ್ಪಾದಕನೇ), ಶರ್ವನೇ, ಸರ್ವಕಾರಣಗಳಿಗೂ ಕಾರಣನಾದ ಮಹೇಶನೇ, ನಿನಗೆ ನಮಸ್ಕಾರವು. ಹೇ ಭಗವಂತನಾದ ಪರಮೇಶ್ವರನೇ, ಉಮಾಪತಿಯೇ, ನೀನು ಹೇಳಿದ ಉಪಾಯವು ನನಗೆ ಈಗ ಸ್ವಲ್ಪವೂ ಅರ್ಥವಾಗುತ್ತಿಲ್ಲ. (ಆದ್ದರಿಂದ) ಈಗ ನೀನೇ ಮೊದಲು ಸೃಷ್ಟಿ ಯನ್ನು ಮಾಡು. ಅನಂತರ ಉಪಾಯವನ್ನು ತಿಳಿದ ನಾನು ಜಗತ್ಸೃಷ್ಟಿಯನ್ನು ಮಾಡುವೆನು.
ಭವನೇ (ಸರ್ವ ಸಂಹಾರಕ) (ಸರ್ವಲೋಕೋತ್ಪಾದಕನೇ), ಶರ್ವನೇ, ಸರ್ವಕಾರಣಗಳಿಗೂ ಕಾರಣನಾದ ಮಹೇಶನೇ, ನಿನಗೆ ನಮಸ್ಕಾರವು. ಹೇ ಭಗವಂತನಾದ ಪರಮೇಶ್ವರನೇ, ಉಮಾಪತಿಯೇ, ನೀನು ಹೇಳಿದ ಉಪಾಯವು ನನಗೆ ಈಗ ಸ್ವಲ್ಪವೂ ಅರ್ಥವಾಗುತ್ತಿಲ್ಲ. (ಆದ್ದರಿಂದ) ಈಗ ನೀನೇ ಮೊದಲು ಸೃಷ್ಟಿ ಯನ್ನು ಮಾಡು. ಅನಂತರ ಉಪಾಯವನ್ನು ತಿಳಿದ ನಾನು ಜಗತ್ಸೃಷ್ಟಿಯನ್ನು ಮಾಡುವೆನು.
ಇತಿ ವಸ್ತು ನಿರ್ದೆಶನಂ
ಪ್ರಮಥಾನಾಂ ಸೃಷ್ಟಿಃ
ಇತ್ಯೇವಂ ಪ್ರಾರ್ಥಿತಃ ಶಂಭುಃ
ಬ್ರಹ್ಮಣಾ ವಿಶ್ವ ಯೋನಿನಾ |
ಸಸರ್ಜಾತ್ಮ ಸಮಪ್ರಖ್ಯಾನ್
ಸರ್ವಗಾನ್ ಸರ್ವ ಶಕ್ತಿಕಾನ್ || 25
ಪ್ರಬೋಧ ಪರಮಾನಂದ-
ಪರಿವಾಹಿತ ಮಾನಸಾನ್
ಪ್ರಮಥಾನ್ ವಿಶ್ವನಿರ್ಮಾಣ
ಪ್ರಲಯಾ ಪಾದ ಉಕ್ಷಮಾನ್ ||2-26
ಈ ಪ್ರಕಾರವಾಗಿ ವಿಶ್ವಯೋನಿಯಾದ ಬ್ರಹ್ಮನಿಂದ ಪ್ರಾರ್ಥಿಸಲ್ಪಟ್ಟ
ಶಂಭುವು ತನಗೆ ಸಮಾನ ತೇಜಸ್ಸುಳ್ಳ, ಸರ್ವಜ್ಞರಾದ, ಸಕಲ ಸಾಮಥ್ರ್ಯವುಳ್ಳ,
ಪ್ರಬೋಧ (ಸರ್ವೊತ್ಕೃಷ್ಟವಾದ ಸಾಮರಸ್ಯಾತ್ಮಕ ಜ್ಞಾನ)ದಿಂದ ಉಂಟಾದ ಪರಮಾನಂದದ
ಪ್ರವಾಹದಿಂದ ಉಲ್ಲಸಿತವಾದ ಮನಸ್ಸುಳ್ಳ, ವಿಶ್ವದ ನಿರ್ಮಾಣ ಮತ್ತು ಪ್ರಳಯ ಮಾಡುವುದರಲ್ಲಿ ಸಮರ್ಥರಾದ ಪ್ರಮಥಗಣರನ್ನು ನಿರ್ಮಿಸಿದನು.
ಸೃಷ್ಟ ಪ್ರಮಥವರ್ಗೆಷು
ವರ್ಣಾಶ್ರಮ ಪರಿಕ್ರಮಾನ್ |
ಅಪ್ರಾಕೃತ ಸದಾಚಾರಾನ್
ಉಪಾದಿ ಶ ದಥ ಪ್ರಭುಃ || 2-27
ತನ್ನಿಂದ ಸೃಷ್ಟಿಸಲ್ಪಟ್ಟ ಪ್ರಮಥಗಣರಲ್ಲಿ ಅತಿವರ್ಣಾಶ್ರಮ ಧರ್ಮವನ್ನು ಪರಿಪಾಲಿಸುವ,
ಅಪ್ರಾಕೃತಗಳಾದ ಸದಾಚಾರ ಸಂಪನ್ನರಾದ,
ಆ ಪ್ರಮಥಗಣರಿಗೆ ಪ್ರಭುವಾದ ಪರಮಾತ್ಮನು ಅನಂತರ ಉಪದೇಶವನ್ನು ಮಾಡಿದನು.
ತೇಷು ಪ್ರಮಥ ವರ್ಗೆಷು
ಸೃಷ್ಟೇಷು ಪರಮಾತ್ಮನಾ |
ರೇಣುಕೋ ದಾರುಕಶ್ಚೇತಿ
ದ್ವಾವಭೂತಾಂ ಶಿವಪ್ರಿಯೌ||2-28
ಪರಮಾತ್ಮನಿಂದ ಸೃಜಿಸಲ್ಪಟ್ಟ ಆ ಪ್ರಮಥ ಸಮೂಹದಲ್ಲಿ ರೇಣುಕರು ಹಾಗೂ ದಾರುಕರು ಇಬ್ಬರೂ ಶಿವನಿಗೆ ಪ್ರೀತಿಪಾತ್ರರಾದರು.
ಸರ್ವವಿದ್ಯಾ ವಿಶೇಷಜ್ಞೌ
ಸರ್ವಕಾರ್ಯ ವಿಚಕ್ಷಣೌ|
ಮಾಯಾಮಲ ವಿನಿರ್ ಮುಕ್ತೌ
ಮಹಿಮಾತಿಶಯೋ ಜ್ವಲೌ||2-29
ಆತ್ಮಾನಂದಪರಿಸ್ಫೂರ್ತಿ-
ರಸಾಸ್ವಾದನಲಂಪಟೌ |
ಶಿವತತ್ತ್ವಪರಿಜ್ಞಾನ-
ತಿರಸ್ಕೃತಭವಾಮಯೌ ||2-30
(ಅವರು) ಸರ್ವವಿದ್ಯೆಗಳ ವಿಶೇಷಾರ್ಥವನ್ನು ಬಲ್ಲವರೂ, ಸರ್ವಕಾರ್ಯ ಗಳಲ್ಲಿ ವಿಚಕ್ಷಣರೂ (ಕುಶಲರು),
ಮಾಯಾಶಕ್ತಿಯಿಂದ ಪರಿಕಲ್ಪಿತಗಳಾದ ಆಣವಾದಿ ಮಲತ್ರಯಗಳ ಸಂಬಂಧರಹಿತರೂ, ಉತ್ಕೃಷ್ಟ ಮಹಿಮಾ ಸಿದ್ಧಿಯಿಂದ ಪ್ರಕಾಶಿಸುತ್ತಿದ್ದ
ಆತ್ಮಾನಂದ ಪರಿಪೂರ್ಣವಾದ ಅಮೃತ ರಸವನ್ನು ಆಸ್ವಾದಿಸುವುದರಲ್ಲಿ ಆಸಕ್ತರೂ,
ಶಿವತತ್ತ್ವಜ್ಞಾನದಿಂದ ಜನನ-ಮರಣವೆಂಬ ಭವರೋಗವನ್ನು ತಿರಸ್ಕರಿಸಿಕೊಂಡವರೂ-
ನಾನಾಪಥಮಹಾಶೈವ-
ತಂತ್ರನಿರ್ವಾಹತತ್ಪರೌ
ವೇದಾಂತ ಸಾರ ಸರ್ವಸ್ವ-
ವಿವೇಚನ ವಿಚಕ್ಷಣೌ ||2-31
ನಿತ್ಯಸಿದ್ಧೌ ನಿರಾತಂಕೌ
ನಿರಂಕುಶ ಪರಾಕ್ರಮೌ |
ತಾದೃಶೌ ತೌ ಮಹಾಭಾಗೌ
ಸಂವೀಕ್ಷ್ಯ ಪರಮೇಶ್ವರಃ ||2-32
ಸಮರ್ಥೌ ಸರ್ವ ಕಾರ್ಯೆಷು
ವಿಶ್ವಾಸ ಪರ ಮಾಶ್ರಿತೌ |
ಅಂತಃಪುರ ದ್ವಾರಪಾಲೌ
ನಿರ್ಮಮೇ ನಿಯತೌ ವಿಭುಃ||2-33
ಅನೇಕ ಶಾಖೆಗಳುಳ್ಳ ಮಹಾಶೈವತಂತ್ರವನ್ನು ನಿರ್ವಹಿಸುವುದರಲ್ಲಿ (ಪರಿಪಾಲಿಸುವುದರಲ್ಲಿ) ತತ್ಪರರಾದ,
ವೇದಾಂತಗಳ (ಉಪನಿಷತ್ತುಗಳ) ಸಾರಸರ್ವಸ್ವವನ್ನು ವಿವೇಚಿಸುವುದರಲ್ಲಿ ವಿಚಕ್ಷಣರಾದ (ಕುಶಲರಾದ), ನಿತ್ಯವಾದ ಸಿದ್ಧಿಗಳುಳ್ಳ, ನಿರಾತಂಕರಾದ,
ತಡೆಯಿಲ್ಲದ ಪರಾಕ್ರಮಿಗಳಾದ ಇಂತಹ ಶ್ರೇಷ್ಠರಾದ, ಪ್ರೀತಿಪಾತ್ರರಾದ, ನೇಮಬದ್ಧರಾದ ಆ ಇಬ್ಬರು ರೇಣುಕ-ದಾರುಕ
ಗಣೇಶ್ವರರನ್ನು ಸರ್ವತಂತ್ರ ಸ್ವತಂತ್ರನಾದ ಪರಮೇಶ್ವರನು (ವಿಭುಃ) ಅಂತಃಪುರದ ದ್ವಾರಪಾಲಕರನ್ನಾಗಿ ನೇಮಿಸಿದನು.
ಗಣೇಶ್ವರೌ ರೇಣುಕದಾರುಕಾವುಭೌ
ವಿಶ್ವಾಸಭೂತೌ ನವಚಂದ್ರಮೌಲೇಃ |
ಅಂತಃಪುರ ದ್ವಾರಗತೌ ಸದಾ ತೌ
ವಿತೇನ-ತುರ್ ವಿಶ್ವ-ಪ-ತೇಸ್ತು ಸೇವಾಮ್||2-34
ಬಾಲಚಂದ್ರನನ್ನು ಧರಿಸಿದವನ(ಶಿವ) ವಿಶ್ವಾಸಕ್ಕೆ ಪಾತ್ರರಾದ ಆ ಇಬ್ಬರು ರೇಣುಕ-ದಾರುಕರೆಂಬ ಗಣೇಶ್ವರರು
ವಿಶ್ವಪತಿಯ ಅಂತಃಪುರದ ದ್ವಾರಪಾಲಕರಾಗಿ ಅವನ (ಶಿವನ) ಸೇವೆಯನ್ನು ಸದಾ ಮಾಡಿದರು.
ಇತಿ - ಪ್ರಮಥಾನಾಂ ಸೃಷ್ಟಿಃ ಪರಿ ಸಮಪ್ತೌ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು – ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ,
ಶ್ರೀ ರೇಣುಕಾಗಸ್ತ್ಯ ಸಂವಾದೇ ಶ್ರೀ ವೀರಶೈವ ಧರ್ಮ ನಿರ್ಣಯೇ,
ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತೇ ಶ್ರೀಸಿದ್ಧಾಂತ ಶಿಖಾಮಣೌ
ಜಗತ್ಸೃಷ್ಟಿ ವಿಚಾರೋ ನಾಮ ದ್ವಿತೀಯಃ ಪರಿಚ್ಛೇದಃ
ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತ ವಿದ್ಯಾರೂಪವೂ,
ಶಿವಯೋಗಶಾಸ್ತ್ರವೂ, ಶ್ರೀರೇಣುಕಾಗಸ್ತ್ಯ ಸಂವಾದರೂಪವೂ, ಶ್ರೀ ವೀರಶೈವಧರ್ಮನಿರ್ಣಯವೂ,
ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀಸಿದ್ಧಾಂತಶಿಖಾಮಣಿಯಲ್ಲಿ
ಜಗತ್ಸೃಷ್ಟಿ ವಿಚಾರವೆಂಬ ಹೆಸರಿನ ಎರಡನೆಯ ಪರಿಚ್ಛೇದವು ಮುಗಿದುದು