ಓಂ ಓಂ ಓಂ

ಗಜಾನನಂ ಭೂತ ಗಣಾಧಿ ಸೇವಿತಂ

ಕಪಿಥ್ಥ ಜಂಭು ಫಲ ಸಾರ ಭಕ್ಷಿತಂ

ಉಮಾಸುತಂ ಶೋಕ ವಿನಾಶ ಕಾರಣಂ

ನಮಾಮಿ ವಿಘ್ನೇಶ್ವರ ಪಾದ ಪಂಕಜಂ

ಗುರುರ್ ಬ್ರಹ್ಮಾ ಗುರುರ್ ವಿಷ್ಣು:

ಗುರುರ್ ದೇವೋ ಮಹೇಶ್ವರಃ

ಗುರು ಸಾಕ್ಷಾತ್ ಪರ ಬ್ರಹ್ಮಾ

ತಸ್ಮೈ ಶ್ರೀ ಗುರುವೇ ನಮಃ

ಪಂಚಾನನ ಮುಖೋದ್ಭೂತಾನ್

ಪಂಚಾಕ್ಷರ ಮನೂಪಮಾನ್|

ಪಂಚಸೂತ್ರ ಕೃತೋ ವಂದೇ

ಪಂಚಾಚಾರ್ಯಾನ್ ಜಗದ್ಗುರೂನ್||

ಜೀಯಾತ್ ಶ್ರೀ ರೇಣುಕಾಚಾರ್ಯ:

ಶಿವಾಚಾರ್ಯ ಶಿಖಾಮಣಿ:

ಯೋ ವೀರಶೈವ ಸಿದ್ದಾಂತಮ್

ಸ್ಥಾಪಯಾ ಮಾಸ ಭೂತಲೇ|

ವಿಶ್ವೇಶ ಲಿಂಗ ಸಂಭೂತಂ

ವಿಶ್ವ ವಿದ್ಯಾ ವಿಬೋಧಕಮ್|

ವಿಶ್ವವಂದ್ಯಂ ಸದಾವಂದೇ

ವಿಶ್ವಾರಾಧ್ಯಂ ಜಗದ್ಗುರುಮ್||

ಉಳ್ಳವರು ಶಿವಾಲಯ ಮಾಡುವರಯ್ಯ

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬ,

ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ

ಕೂಡಲ ಸಂಗಮ ದೇವಾ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಅಥ ಶ್ರೀ ಸಿದ್ದಾಂತ ಶಿಖಾಮಣಿಃ ಪಾರಯಣಮ್

ಓಂ ಅಸ್ಯ ಶ್ರೀ ಸಿದ್ದಾಂತ ಶಿಖಾಮಣಿ

ಶಾಸ್ತ್ರ ಮಹಾ ಮಂತ್ರಸ್ಯ

ಭಗವಾನ್ ಶ್ರೀ ಶಿವಯೋಗಿ ಶಿವಾಚಾರ್ಯ ಋಷಿ:|

ಅನುಷ್ಟುಪ್ ಛಂದಃ |

ಶ್ರೀ ಸಚ್ಚಿದಾನಂದ ಸ್ವರೂಪ:

ಪರಶಿವೋ ದೇವತಾ||

ಸಚ್ಚಿದಾನಂದ ರೂಪಾಯ

ಶಿವಾಯ ಬ್ರಹ್ಮಣೇ ನಮಃ

ಇತಿ ಬೀಜಮ್||

ಅಮೃತಾರ್ಥಮ್ ಪ್ರಪನ್ನಾನಾಮ್

ಯಾ ಸುವಿದ್ಯಾ ಪ್ರದಾಯಿನೀ|

ಇತಿ ಶಕ್ತಿ:

ಶಿವ ಜ್ಞಾನ ಕರಂ ವಕ್ಷ್ಯೇ

ಸಿದ್ದಾಂತಮ್ ಶೃಣು ಸಾದರಮ್

ಇತಿ ಕೀಲಕಮ್ |

ಅಥಃ ಕರನ್ಯಾಸಃ |

ಏಕ ಏವ ಶಿವಸ್ಸಾಕ್ಷಾತ್

ಚಿದಾನಂದ ಮಯೋ ವಿಭು:|

ಇತಿ ಅಂಗುಷ್ಟಭ್ಯಾಮ್ ನಮಃ|

ನಿರ್ವಿಕಲ್ಪೋ ನಿರಾಕಾರೋ

ನಿರ್ಗುಣೋ ನಿಷ್ ಪ್ರಪಂಚಕಃ|

ಇತಿ ತರ್ಜನಿಭ್ಯಾಂ ನಮಃ|

ಅನಾದ್ಯ ವಿದ್ಯಾ ಸಂಭಂದಾತ್

ತದಂಶೋ ಜೀವ ನಾಮಕಃ|

ಇತಿ ಮಧ್ಯಮಾಭ್ಯಾಂ ನಮಃ|

ದೇವತೀರ್ ಯಮ್ ಮನುಷ್ಯಾದಿ

ಜಾತಿ ಭೇದೆ ವ್ಯವಸ್ಥಿತಃ|

ಇತಿ ಅನಾಮಿಕಾಭ್ಯಾಂ ನಮಃ|

ಮಾಯೀ ಮಹೇಶ್ವರ ಸ್ತೇಷಾಂ

ಪ್ರೇರಕೋ ಹೃದಿ ಸಂಸ್ಥಿತಃ|

ಇತಿ ಕನಿಷ್ಟಿಕಾಭ್ಯಾಂ ನಮಃ|

ಬೀಜೇ ಯಥಾಂsಕುರ: ಸಿದ್ದ:

ಸ್ತಥಾsತ್ಮನಿ ಶಿವಃ ಸ್ಥಿತಃ|

ಇತಿ ಕರತಲಕರ ಪೃಷ್ಠಾಂಭ್ಯಾಂನಮಃ|

ಅಥಃ ಹೃದಯಾದಿ ನ್ಯಾಸಃ |

ಏಕ ಏವ ಶಿವಸ್ಸಾಕ್ಷಾತ್

ಚಿದಾನಂದ ಮಯೋ ವಿಭು:|

ಇತಿ ಹೃದಯಾಯ ನಮಃ|

ನಿರ್ವಿಕಲ್ಪೋ ನಿರಾಕಾರೋ

ನಿರ್ಗುಣೋ ನಿಷ್ ಪ್ರಪಂಚಕಃ|

ಇತಿ ಶಿರಸೇ ಸ್ವಾಹಾ|

ಅನಾದ್ಯ ವಿದ್ಯಾ ಸಂಭಂದಾತ್

ತದಂಶೋ ಜೀವ ನಾಮಕಃ|

ಇತಿ ಶಿಖಾಯ್ಯೈ ವಷಟ್ |

ದೇವತೀರ್ ಯಮ್ ಮನುಷ್ಯಾದಿ

ಜಾತಿ ಭೇದೆ ವ್ಯವಸ್ಥಿತಃ|

ಇತಿ ಕವಚಾಯ ಹುಮ್|

ಮಾಯೀ ಮಹೇಶ್ವರ ಸ್ತೇಷಾಂ

ಪ್ರೇರಕೋ ಹೃದಿ ಸಂಸ್ಥಿತಃ|

ಇತಿ ನೇತ್ರತ್ರಯಾಯ ವೌಷಟ್ ||

ಬೀಜೇ ಯಥಾಂsಕುರ: ಸಿದ್ದ:

ಸ್ತಥಾsತ್ಮನಿ ಶಿವಃ ಸ್ಥಿತಃ|

ಇತಿ ಅಸ್ತ್ರಾಯ ಫಟ |

ಶ್ರೀ ಶಿವ ಪ್ರೀತ್ಯರ್ಥೆ

ಶ್ರೀ ಸಿದ್ದಾಂತ ಶಿಖಾಮಣಿ

ಪಾಠೇ ವಿನಿಯೋಗಃ||

ಅಥಃ ಧ್ಯಾನಮ್

ಸ್ವಸ್ತಿ ಶ್ರೀ ಗಣನಾಯಕೇನ ಮುನಯೇ

ಅಗಸ್ತ್ಯಾಯ ತತ್ವಾರ್ಥಿನೇ|

ಶಿಷ್ಯಾಯ ಪ್ರತಿಭೋಧಿತೇ ಭಗವತೇ

ಶ್ರೀ ರೇಣುಕೇನ ಸ್ವಯಮ್||

ತಾ ತತ್ವಮ್ ಶಿವಯೋಗಿ ವರ್ಯ

ಸುಕೃತಿರ್ ಮೇ ಮಾನಸೇ ಮಂದಿರೇ|

ಶ್ರೀ ಸಿದ್ದಾಂತ ಶಿಖಾಮಣೇ

ವಸಸದಾ ಜ್ಞಾನ ಪ್ರದೀಪೋ ಭವ||1

ಶರಣಾಗತ ದೀನಾರ್ಥ

ಪರಿತ್ರಾಣೈಕ ಹೇತವೇ|

ಶ್ರೀ ರೇಣುಕ ಗಣೇಶಾಯ

ಜ್ಞಾನ ಮುದ್ರಾಯ ತೇ ನಮಃ||2||

ಅಗಸ್ತ್ಯ ಸಂಶಯ ವ್ರಾತ

ಮಹಾಧ್ವಾಂತಾಂಶು ಮಾಲಿನಮ್|

ವಂದೇ ಶಿವಸುತಂ ದೇವಂ

ರೇಣುಕಾಖ್ಯಂ ಜಗದ್ಗುರುಮ್||3||

ನಮಃ ಶಿವಾಚಾರ್ಯ ವರಾಯ ತುಭ್ಯಂ

ಶ್ರೀ ವೀರಶೈವಾಗಮ ಸಾಗರಾಯ|

ವಿನಾಪಿ ತೈಲಂ ಭವತಾs ತ್ರಯೇನ

ಪ್ರಜ್ವಾಲಿತೋ ಜ್ಞಾನಮಣಿ ಪ್ರದೀಪ:

ಯಸ್ಮಿನ್ನಾಗಮ ಶಾಸ್ತ್ರತತ್ವ ಮಖಿಲಂ

ಸಮ್ಯಕ್ ಚ ಸಂಸೂಚಿತಮ್ |

ಭಕ್ತೈರ್ ವಾಂಛಿತ ಭುಕ್ತಿ ಮುಕ್ತಿ ಫಲದಂ

ಯತ್ಕಲ್ಪ ವೃಕ್ಷಾತ್ಮ ಕಂ |

ತಂ ಶೈವಾಗಮ ಸಮ್ಮತಂ

ನಿಗಮವಿದ್ ವಿದ್ವದ್ಭಿರಾ ಸೇವಿತಂ|

ಶ್ರೀಸಿದ್ದಾಂತ ಶಿಖಾಮಣಿಮ್ ಪ್ರತಿದಿನಂ

ಧ್ಯಾಯೇತ್ ಸದಾ ಸಾದರಮ್ ||5||

ಪೂಜ್ಯಶ್ರೀ ಶಿವಯೋಗಿವರ್ಯ ರಚಿತಂ

ಸಿದ್ದಾಂತ ರತ್ನಾಕರಂ |

ಸೂಕ್ಷ್ಮಮ್ ಧಾರ್ಮಿಕ ತಾತ್ವಿಕ ಸ್ಥಲಯುತಂ

ಚೈಕಾಧಿಕಂ ತತ್ ಶತಮ್ |

ತ್ರೈಲೋಕ್ಯಂ ಪದ ಮಾದಿ ಮಂ ಪರಪದಂ

ಸರ್ವಾಂತಿ ಮೇ ಯೋಜಿತಮ್

ಶ್ರೀ ಸಿದ್ದಾಂತ ಶಿಖಾಮಣಿಮ್ ದಿನ ದಿನಂ

ಧ್ಯಾಯೇತ್ ಸದಾ ಶಾಂತಿದಮ್||6||

ಅಥಃ ಶ್ರೀ ಸಿದ್ದಾಂತ ಶಿಖಾಮಣಿ ಮಾಹಾತ್ಮ್ಯಮ್

ಯಃ ಪಠೇತ್ ಪ್ರಯೋತೋ ನಿತ್ಯಂ

ಶ್ರೀ ಸಿದ್ದಾಂತ ಶಿಖಾಮಣಿಮ್|

ಶಿವಸಾಯುಜ್ಯ ಮಾಪ್ನೋತಿ

ಭಯ ಶೋಕಾಧಿ ವರ್ಜಿತಃ ||1||

ಸದಾsಧ್ಯಯನ ಶೀಲಸ್ಯ

ಶ್ರೀ ಸಿದ್ದಾಂತ ಶಿಖಾಮಣಿ:

ಕ್ಷೀಯಂತೆ ಸರ್ವ ಪಾಪಾನಿ

ಪೂರ್ವಜನ್ಮ ಕೃತಾನಿ ಚ||2||

ಜಲ ಸ್ನಾನಾದ್ ವರಂ ಪುಂಸಾ

ಶ್ರೀ ಸಿದ್ದಾಂತ ಶಿಖಾಮಣೌ |

ಜ್ಞಾನಾರ್ಣವೇ ಸದಾ ಸ್ನಾನಂ

ಸಂಸಾರ ಮಲ ನಾಶನಮ್||3||

ಶ್ರೀ ರೇಣುಕ ಗಣಾಧ್ಯಕ್ಷ:

ಮುಖ ಪದ್ಮಾದ್ವಿನಿ: ಸೃತಃ|

ಕಂಠಪೀಠೇ ಸದಾ ಧಾರ್ಯ:

ಶ್ರೀ ಸಿದ್ದಾಂತ ಶಿಖಾಮಣಿ: ||4||

ಶ್ರೀ ರೇಣುಕ ಗಣಾಧ್ಯಕ್ಷ

ವಚನಾಮೃತ ಸಾಗರಮ್ |

ಪಾಯಂ ಪಾಯಂ ಸದಾ ಪುಂಸಾಂ

ಪುನರ್ಜನ್ಮ ನ ವಿದ್ಯತೇ ||5||

ಸರ್ವಾಗಮ ವ್ರಜೋ ಗಾವ:

ತಾ ಸಾಂ ದೊಗ್ದಾ ಚ ರೇಣುಕಃ|

ವತ್ಸೋsಗಸ್ತ್ಯ: ಸುಧೀರ್ ಭೋಕ್ತಾ

ದುಗ್ದಂ ಶಿಖಾಮಣಿರ್ ಮಹಾನ್||6||

ಏಕಂ ಶಾಸ್ತ್ರಂ ಶ್ರೀ ಶಿವಾದ್ವೈತ ಸಂಜ್ಯಂ

ಏಕೋ ದೇವಃ ಶ್ರೀ ಮಹಾದೇವ ಏವ|

ಏಕೋ ಮಂತ್ರ: ಶೈವಪಂಚಾಕ್ಷರೋsಯಮ್

ಕರ್ಮಾಪ್ಯೇಕಮ್ ಇಷ್ಟಲಿಂಗಾರ್ಚನಂ ಹಿ ||7||

ಅಥ ಫಲ ಶ್ರುತಿ:

ಶ್ರೀ ವೇದಾಗಮ ವೀರಶೈವ ಸರಣಿಂ

ಶ್ರೀ ಷಟ್ ಸ್ಥಲೋಧ್ಯನ್ಮಣಿಮ್

ಶ್ರೀ ಜೀವೇಶ್ವರ ಯೋಗ ಪದ್ಮ ತರಣಿಂ

ಶ್ರೀ ಗೋಪ್ಯ ಚಿಂತಾಮಣಿಮ್ |

ಶ್ರೀ ಸಿದ್ದಾಂತ ಶಿಖಾಮಣಿಮ್

ಲಿಖಯಿತಯಸ್ತಂ ಲಿಖಿತ್ವಾ ಪರಾನ್ |

ಶ್ರುತ್ವಾ ಶ್ರಾವಯಿತಾ ಸಯಾತಿ ವಿಮಲಾಂ

ಭುಕ್ತಿಂ ಚ ಮುಕ್ತಿಂ ಪರಾಮ್||

ಶ್ರೀ ಜಗದ್ಗುರು ರೇಣುಕಾಚಾರ್ಯ: ಪ್ರಸೀದತು

ಶ್ರೀಶಿವಯೋಗಿ ಶಿವಾಚಾರ್ಯ ವಿರಚಿತ:

ಶ್ರೀ ಸಿದ್ದಾಂತ ಶಿಖಾಮಣಿಃ

ಪಾರಾಯಣ ಗ್ರಂಥ:

ಪ್ರಥಮ:ಪರಿಚ್ಛೇದಃ

ಮಂಗಳಾಚರಣಾನುಕ್ರಮ ಪ್ರಸಂಗಃ ಶಿವ-ಸ್ತುತಿ:

ತ್ರೈಲೋಕ್ಯ ಸಂಪಾದಾಲೇಖ್ಯ

ಸಮುಲ್ಲೇಖನ ಭಿತ್ತಯೇ

ಸಚ್ಚಿದಾನಂದ ರೂಪಾಯ

ಶಿವಾಯ ಬ್ರಹ್ಮಣೇ ನಮಃ||1-01

ಮೂರು ಲೋಕವೆಂಬ ಸಂಪದ್ರೂಪವಾದ ಚಿತ್ರದ ಬರವಣಿಗೆಗೆ ಆಧಾರವಾದ ಗೋಡೆಯಂತಿರುವ ಸತ್ತು, ಚಿತ್ತು, ಆನಂದರೂಪ ಶಿವನಾದ ಬ್ರಹ್ಮನಿಗೆ ನಮಸ್ಕಾರ

ಬ್ರಹ್ಮೇ ತಿ ವ್ಯಪ ದೇಶಸ್ಯ

ವಿಷಯಂ ಯಂ ಪ್ರಚಕ್ಷತೇ

ವೇದಾಂತಿನೋ ಜಗನ್ಮೂಲಂ

ತಂ ನಮಾಮಿ ಪರಂ ಶಿವಂ||1-02

ಬ್ರಹ್ಮನೆಂಬ ಶಬ್ದಕ್ಕೆ ವೇದಾಂತಿಗಳು ಯಾರನ್ನು ವಿಷಯವನ್ನಾಗಿ ತಿಳಿಯುವರೋ ಆ ಜಗದ ಮೂಲನಾದ ಪರನಾದ ಶಿವನಿಗೆ ನಮಿಸುತ್ತೇನೆ.

ಯಸ್ಯೋರ್ಮಿ ಬುದ್ಭುದಾಭಾಸಃ

ಷಟ್ತ್ರಿಂಶತ್ ತತ್ವ ಸಂಚಯಃ!

ನಿರ್ಮಲಂ ಶಿವಾನಾ ಮಾನಮ್

ತಂ ವಂದೇ ಚಿನ್ಮಹೋಧಧಿಮ್||1-03

ಮೂವತ್ತಾರು ತತ್ತ್ವಗಳ ಸಮೂಹವು ಯಾವ ಸಮುದ್ರದ ನೊರೆತೆರೆಯ ಸ್ವರೂಪವೋ ಆ ನಿರ್ಮಲವಾದ (ಮಲತ್ರಯಗಳಿಲ್ಲದ) ಶಿವನೆಂಬ ಚಿನ್ಮಯವಾದ ಸಾಗರ ಸ್ವರೂಪಿಗೆ ನಮಿಸುತ್ತೇನೆ (ಶಿವಾದಿ ಭೂಮಿ ಪರ್ಯಂತರವಾದ 36 ತತ್ತ್ವಗಳು).

ಯದ್ಭಾಸಾ ಭಾಸತೇ ವಿಶ್ವಂ

ಯೆತ್ಸುಖೇನಾನು ಮೋದತೇ

ನಮಸ್ತಸ್ಮೈ ಗುಣಾತೀತ

ವಿಭವಾಯ ಪರಾತ್ಮನೇ||1-04

ವಿಶ್ವವು ಯಾರ ಪ್ರಕಾಶದಿಂದ ಪ್ರಕಾಶಿಸುತ್ತದೆಯೋ, ಯಾರ ಆನಂದದಿಂದ ಆನಂದಿಸುತ್ತದೆಯೋ, ಗುಣಾತೀತವಾದ ಮತ್ತು ಜ್ಞಾನ, ಐಶ್ವರ್ಯಯುಕ್ತನಾದ ಆ ಪರಮಾತ್ಮನಿಗೆ ನಮಸ್ಕರಿಸುತ್ತೇನೆ.

ಸದಾಶಿವ ಮುಖಾಶೇಷ

ತತ್ತ್ವೋನ್ಮೇಷ ವಿಧಾಯಿನೇ

ನಿಷ್ಕಲಂಕ ಸ್ವಭಾವಾಯ

ನಮಃ ಶಾಂತಾಯ ಶಂಭವೇ||1-05

ಸದಾಶಿವತತ್ತ್ವವನ್ನೇ ಮೊದಲುಗೊಂಡು ಉಳಿದ ಸಮಸ್ತ ತತ್ತ್ವಗಳ ಅಭಿವ್ಯಕ್ತಿ ಯನ್ನುಂಟುಮಾಡುವ ನಿಷ್ಕಲಂಕ ಸ್ವಭಾವಿಯಾದ ಶಾಂತನಾದ ಶಂಭುವಿಗೆ ನಮಸ್ಕಾರವು.

ಸ್ವೇಚ್ಚಾ ವಿಗ್ರಹ ಯುಕ್ತಾಯ

ಸ್ವೇಚ್ಚಾ ವರ್ತನ ವರ್ತಿನೇ

ಸ್ವೆಚ್ಚಾ ಕೃತ ತ್ರಿಲೋಕಾಯ

ನಮಃ ಸಾಂಬಾಯ ಶಂಭವೇ||1-06

ಸ್ವೇಚ್ಛೆಯಿಂದ (ತನ್ನ ಇಚ್ಛಾಶಕ್ತಿಯಿಂದ) ದಿವ್ಯದೇಹವನ್ನು (ವಿಗ್ರಹ) ಧರಿಸಿದ, ಸ್ವೇಚ್ಛೆ (ಸ್ವ-ಇಚ್ಛೆ)ಯಿಂದ ಆಚರಣೆಯಲ್ಲಿರುವ, ಸ್ವೇಚ್ಛೆಯಿಂದಲೇ ಮೂರು ಲೋಕ ಗಳನ್ನು ಸೃಷ್ಟಿಸಿರುವ ಸಾಂಬನಾದ (ಉಮಾಸಹಿತನಾದ) ಶಂಭುವಿಗೆ ನಮಸ್ಕಾರವು

ಯತ್ರ ವಿಶ್ರಾಮ್ಯತಿ ಶತ್ಯಮ್

ಸ್ವಾಭಾವಿಕ ಮನುತ್ತಮಮ್

ನಮಸ್ತಸ್ಮೈ ಮಹೇಶಾಯ

ಮಹಾದೇವಾಯ ಶೂಲಿನೇ||1-07

ಸ್ವಾಭಾವಿಕವಾದ ಅತ್ಯಂತ ಶ್ರೇಷ್ಠವಾದ ಈಶತ್ವವು ಯಾರಲ್ಲಿ ವಿಶ್ರಮಿಸುವುದೋ, ಆ ಮಹೇಶ್ವರನೂ, ಶೂಲಿಯೂ ಆದ ಮಹಾದೇವನಿಗೆ ನಮಸ್ಕಾರವು.

ಇತಿ ಶಿವ-ಸ್ತುತಿ:

ಯಾಮಾಹು: ಸರ್ವ ಲೋಕಾSನಾಮ್

ಪ್ರಕೃತಿಂ ಶಾಸ್ತ್ರ ಪಾರಾಗಾಃ

ತಾಂ ಧರ್ಮ ಚಾರಿಣಿಂ ಶಂಭೋ:S

ಪ್ರಣಮಾಮಿ ಪರಾಂ ಶಿವಾಮ್||1-08

ಶಾಸ್ತ್ರಪಾರಂಗತರು ಯಾರನ್ನು ಸರ್ವಲೋಕಗಳ ಪ್ರಕೃತಿಯನ್ನಾಗಿ ಹೇಳುವರೋ, ಶಂಭುವಿಗೆ ಧರ್ಮಚಾರಿಣಿಯಾದ ಆ ಪರಶಿವೆಗೆ ಪ್ರಣಾಮವು.

ಯಯಾ ಮಹೇಶ್ವರಃ ಶಂಭುರ್

ನಾಮ ರೂಪಾದಿ ಸಂಯುತಃ

ತಸ್ಯೈ ಮಾಯಾ ಸ್ವರೂಪಾಯೈ

ನಮಃ ಪರಮ ಶಕ್ತಯೇ||1-09

ಯಾವ ಶಕ್ತಿಯಿಂದ ಮಹೇಶ್ವರನಾದ ಶಂಭುವು ನಾಮರೂಪಾದಿಗಳಿಂದ ಕೂಡಿರುವನೋ, ಆ ಮಾಯಾಸ್ವರೂಪಿಣಿಯಾದ ಪರಮಶಕ್ತಿಗೆ ನಮಸ್ಕಾರವು.

ಶಿವಾದ್ಯಾದಿ ಸಮುತ್ಪನ್ನ

ಶಾಂತ್ಯತೀತ ಪರೋತ್ತರಾಮ್|

ಮಾತರಂ ತಾಂ ಸಮಸ್ತಾನಾಮ್

ವಂದೇ ಶಿವಕರೀಂ ಶಿವಾಮ್||1-10

ಶಿವನಿಂದ ಯಾವಳು ಮೊದಲು ಆವಿರ್ಭವಿಸಿದ ಶಾಂತ್ಯತೀತೋತ್ತರ ಕಲಾರೂಪಳೂ, ಸಮಸ್ತರ ಮಾತೆಯೂ ಆದ ಆ ಶಿವಕರಿ (ಮಂಗಳವನ್ನುಂಟು ಮಾಡುವ) ಶಿವೆಯನ್ನು ವಂದಿಸುತ್ತೇನೆ.

ಇಚ್ಚಾ ಜ್ನಾನಾದಿ ರೂಪೇಣ

ಯಾ ಶಂಬೋರ್ವಿಶ್ವ ಭಾವಿನೀ|

ವಂದೇ ತಾಂ ಪರಮಾನಂದ

ಪ್ರಭೋದಲಹರೀಂ ಶಿವಾಮ್||1-11

ಶಂಭುವಿನ ಯಾವ ಶಕ್ತಿಯು ಇಚ್ಛಾಜ್ಞಾನಾದಿ ರೂಪಗಳಿಂದ ವಿಶ್ವವನ್ನು ಅಭಿವ್ಯಕ್ತಗೊಳಿಸುವಳೋ, ಅಂತಹ ಪರಮಾನಂದ ಪ್ರಬೋಧಲಹರಿ ರೂಪಳಾದ ಶಿವೆಯನ್ನು ವಂದಿಸುತ್ತೇನೆ.

ಅಮೃತಾರ್ಥಾಂ ಪ್ರಪನ್ನಾನಾಮ್

ಯಾ ಸುವಿದ್ಯಾ ಪ್ರದಾಯಿನೀ|

ಅಹರ್ನಿಶಮಹಂ ವಂದೇ

ತಾಮೀಶಾನ ಮನೋರಮಾಮ್||1-12

ಅಮೃತತ್ವದ (ಮುಕ್ತಿ) ಪ್ರಾಪ್ತಿಗಾಗಿ ಶರಣಾಗತರಾದವರಿಗೆ ಯಾವಳು ಸುವಿದ್ಯೆಯನ್ನು ಪ್ರದಾನ ಮಾಡುವಳೋ, ಆ ಈಶನ ಮನೋರಮೆಯಾದ ಶಿವೆಯನ್ನು ಅಹರ್ನಿಶಿ (ಹಗಲು ರಾತ್ರಿಗಳಲ್ಲಿ) ವಂದಿಸುತ್ತೇನೆ.

ಇತಿ ಶಕ್ತಿ ಸ್ತುತಿ: ಪರಿಸಮಾಪ್ತಂ

ಅಥ ಗ್ರಂಥಕಾರ ವಂಶ ವರ್ಣನಮ್

ಕಶ್ಚಿದಾಚಾರ ಸಿದ್ಧಾನಾಮ್

ಅಗ್ರಣೀಃ ಶಿವಯೋಗಿನಾಮ್ |

ಶಿವಯೋಗೀತಿ ವಿಖ್ಯಾತಃ

ಶಿವಜ್ಞಾನ ಮಹೋದಧಿಃ || 1-13

ಆಚಾರ ಸಿದ್ಧರಾದ ಶಿವಯೋಗಿಗಳಿಗೆ ಅಗ್ರಗಣ್ಯನಾದ, ಶಿವಜ್ಞಾನದ ಸಾಗರ ನಾದ, ಶಿವಯೋಗಿ ಎಂಬ ಹೆಸರಿನಿಂದ ಪ್ರಸಿದ್ಧನಾದ ಒಬ್ಬ ಮಹಾಮಹಿಮನು ಇದ್ದನು.

ಶಿವಭಕ್ತಿ ಸುಧಾ ಸಿಂಧು-

ಜೃಂಭಣಾಮಲ ಚಂದ್ರಿಕಾ |

ಭಾರತೀ ಯಸ್ಯ ವಿದಧೇ

ಪ್ರಾಯಃ ಕುವಲಯೋತ್ಸವಮ್ ||1-14

ಯಾವ ಶಿವಯೋಗಿಯ ಭಾರತಿ (ವಾಣಿ)ಯು ಶಿವಭಕ್ತಿಯೆಂಬ ಅಮೃತದ ಸಮುದ್ರವನ್ನು ಉಕ್ಕೇರಿಸುವಲ್ಲಿ ನಿರ್ಮಲ ಬೆಳದಿಂಗಳೋಪಾದಿಯಲ್ಲಿ ಇರುವುದೋ(ಮತ್ತು)ಭೂಮಂಡಲದ ಜನರ ಮನಸ್ಸೆಂಬ ಕನ್ನೈದಿಲೆ(ರಾತ್ರಿ ಅರಳುವ ಕಮಲ)ಯನ್ನು ಅರಳಿಸುವುದೋ (ಇಂತಹ ಶಿವಯೋಗಿಯು ಇದ್ದನು).

ತಸ್ಯ ವಂಶೇ ಸಮುತ್ಪನ್ನೋ

ಮುಕ್ತಾಮಣಿ ರಿವಾಮಲಃ |

ಮುದ್ದದೇವಾ ಭಿಧಾಚಾರ್ಯೋ

ಮೂರ್ಧನ್ಯಃ ಶಿವಯೋಗಿನಾಮ್ ||1-15

ಆ (ಶಿವಯೋಗಿಯ) ವಂಶದಲ್ಲಿ ಅಮಲವಾದ (ನಿರ್ಮಲವಾದ) ಮುತ್ತಿನ ಮಣಿಯಂತಿರುವ, ಶಿವಯೋಗಿಗಳಿಗೆ ಮೂರ್ಧನ್ಯ (ಶ್ರೇಷ್ಠ)ನಾದ ಮುದ್ದದೇವ ಎಂಬ ಹೆಸರಿನ ಆಚಾರ್ಯನು ಹುಟ್ಟಿದನು.

ಮುದ್ದಾನಾ0 ತ್ಸರ್ವಜಂತೂನಾಮ್

ಪ್ರಣತಾನಾಂ ಪ್ರಬೋಧತಃ |

ಮುದ್ದದೇವೇತಿ ವಿಖ್ಯಾತಾ

ಸಮಾಖ್ಯಾ ಯಸ್ಯ ವಿಶ್ರುತಾ||1-16

ಎಲ್ಲ ಜೀವಿಗಳಿಗೆ ಸಂತೋಷವನ್ನುಂಟುಮಾಡುವುದರಿಂದ (ಮತ್ತು) ಪ್ರಣಾಮ ಮಾಡಿದವರಿಗೆ ಜ್ಞಾನೋಪದೇಶವನ್ನು ಮಾಡುವುದರಿಂದ ಯಾರಿಗೆ ಮುದ್ದದೇವ ಎಂಬ ಹೆಸರು ಲೋಕ ಪ್ರಸಿದ್ಧವಾಯಿತೋ-

ತಸ್ಯಾಸೀನ್ನಂದನಃ ಶಾಂತಃ

ಸಿದ್ಧನಾಥಾಭಿಧಃಶುಚಿಃ |

ಶಿವಸಿದ್ಧಾಂತ ನಿರ್ನೇತಾ

ಶಿವಾಚಾರ್ಯಃ ಶಿವಾತ್ಮಕಃ||1-17

ಆ ಮುದ್ದದೇವನಿಗೆ ಶಾಂತನೂ, ಶುಚಿಯಾದವನೂ, ಶಿವಾತ್ಮಕನೂ (ಶಿವಸ್ವರೂಪಿಯೂ), ಶಿವಸಿದ್ಧಾಂತ ನಿರ್ಣಯವನ್ನು ಮಾಡುವವನೂ ಆದ ಸಿದ್ಧನಾಥ ಶಿವಾಚಾರ್ಯನೆಂಬ ಅಭಿಧಾನವುಳ್ಳ (ಹೆಸರಿನ) ನಂದನನು (ಮಗನು) ಇದ್ದನು.

ವೀರಶೈವ ಶಿಖಾ ರತ್ನಮ್

ವಿಶಿಷ್ಟಾಚಾರಸಂಪದಮ್ |

ಶಿವಜ್ಞಾನಮಹಾಸಿಂಧುಮ್

ಯಂ ಪ್ರಶಂಸಂತಿ ದೇಶಿಕಾಃ ||1-18

ದೇಶಿಕರು ಯಾರನ್ನು ವೀರಶೈವ ಶಿಖಾರತ್ನನನ್ನಾಗಿಯೂ, ವಿಶಿಷ್ಟವಾದ ಆಚಾರಸಂಪನ್ನನನ್ನಾಗಿಯೂ, ಶಿವಜ್ಞಾನ ಮಹಾಸಮುದ್ರವನ್ನಾಗಿಯೂ (ಸಿಂಧು) ಪ್ರಶಂಸೆ ಮಾಡುವರೋ-

ಯಸ್ಯಾಚಾರ್ಯಕುಲಾಜ್ಜಾತಾ

ಸತಾಮಾಚಾರಮಾತೃಕಾ |

ಶಿವಭಕ್ತಿಃ ಸ್ಥಿರಾ ಯಸ್ಮಿನ್

ಜಜ್ಞೇ ವಿಗತವಿಪ್ಲವಾ ||1-19

ಯಾವ (ಸಿದ್ಧನಾಥ) ಆಚಾರ್ಯನ ಕುಲದಲ್ಲಿ ಸತ್ಪುರುಷರ ಆಚರಣೆಯು ಉಗಮವಾಯಿತೋ (ಜಾತಃ), ಯಾರಲ್ಲಿ ದೋಷರಹಿತವಾದ ಶಿವಭಕ್ತಿಯು ಸುಸ್ಥಿರ ವಾಯಿತೋ-

ತಸ್ಯ ವೀರ ಶಿವಾಚಾರ್ಯ-

ಶಿಖಾರತ್ನಸ್ಯ ನಂದನಃ |

ಅಭವತ್ ಶಿವ ಯೋಗೀತಿ

ಸಿಂಧೋರಿವ ಸುಧಾಕರಃ ||1-20

ವೀರಶೈವ ಶಿವಾಚಾರ್ಯರಿಗೆ ಶಿಖಾರತ್ನ ದೋಪಾದಿಯಲ್ಲಿರುವ ಅವನಿಗೆ (ಸಿದ್ಧನಾಥ) ಶಿವಯೋಗಿ ಎಂಬ ನಂದನನು (ಮಗನು) ಸಮುದ್ರದಿಂದ ಸುಧಾಕರನು (ಚಂದ್ರನು) ಉದಯಿಸಿದಂತೆ ಉದಯಿಸಿದನು (ಅಭವತ್).

ಇತಿ ಕವಿ ವಂಶ ವರ್ಣನಮ್ ಪರಿಸಮಾಪ್ತಂ

ಕವಿ ಕಾವ್ಯಂ

ಚಿದಾನಂದಪರಾಕಾಶ-

ಶಿವಾನುಭವಯೋಗತಃ |

ಶಿವಯೋಗೀತಿ ನಾಮೋಕ್ತಿರ್

ಯಸ್ಯ ಯಾಥಾಥ್ರ್ಯಯೋಗಿನೀ||1-21

ಚಿದಾನಂದ ಪರಾಕಾಶ ರೂಪವಾದ ಶಿವಾನುಭವ ಯೋಗದಿಂದ ಯಾರಿಗೆ ಶಿವಯೋಗಿ ಎಂಬ ನಾಮವು ಯಥಾರ್ಥವಾಗಿ ಅನ್ವಯಿಸುತ್ತದೆಯೋ-

ಶಿವಾಗಮ ಪರಿಜ್ಞಾನ-

ಪರಿಪಾಕಸುಗಂಧಿನಾ |

ಯದೀಯಕೀರ್ತಿಪುಷ್ಪೇಣ

ವಾಸಿತಂ ಹರಿತಾಂ ಮುಖಮ್ ||1-22

ಶಿವಾಗಮಗಳ ಪರಿಪಾಕದಿಂದ ಸುಗಂಧಿತವಾದ ಯಾವ ಶಿವಯೋಗಿಯ ಕೀರ್ತಿಪುಷ್ಪದಿಂದ ದಿಕ್ಕುಗಳ ಮುಖವು ಸುವಾಸಿತವಾಯಿತೋ-

ಯೇನ ರಕ್ಷಾವತೀ ಜಾತಾ

ಶಿವಭಕ್ತಿಃ ಸನಾತನೀ |

ಬೌದ್ಧಾದಿ ಪ್ರತಿಸಿದ್ಧಾಂತ-

ಮಹಾಧ್ವಾಂತಾಂಶು ಮಾಲಿನಾ || 1-23

ಬೌದ್ಧಾದಿ ಪ್ರತಿಸಿದ್ಧಾಂತಗಳ ಕತ್ತಲೆಗೆ ಸೂರ್ಯನೋಪಾದಿಯಲ್ಲಿರುವ ಯಾರಿಂದ (ಶಿವಯೋಗಿ ಶಿವಾಚಾರ್ಯರಿಂದ) ಸನಾತನವಾದ ಶಿವಭಕ್ತಿಯು ರಕ್ಷಿಸಲ್ಪಟ್ಟಿತೋ-

ಸ ಮಹಾವೀರ ಶೈವಾನಾಮ್

ಧರ್ಮಮಾರ್ಗ ಪ್ರವರ್ತಕಃ |

ಶಿವತತ್ತ್ವ ಪರಿಜ್ಞಾನ-

ಚಂದ್ರಿಕಾ ವೃತ ಚಂದ್ರಮಾಃ || 1-24

ಶಿವತತ್ತ್ವ ಪರಿಜ್ಞಾನವೆಂಬ ಚಂದ್ರಿಕೆಯಿಂದ (ಬೆಳದಿಂಗಳಿನಿಂದ) ಆವರಿಸಲ್ಪಟ್ಟ ಚಂದ್ರನಂತೆ ಇರುವ ಅವನು (ಶಿವಯೋಗಿ ಶಿವಾಚಾರ್ಯನು) ಮಹಾವೀರಶೈವರಿಗೆ ಧರ್ಮಮಾರ್ಗ ಪ್ರವರ್ತಕನಾಗಿದ್ದನು.

ಆಲೋಕ್ಯ ಶೈವ ತಂತ್ರಾಣಿ

ಕಾಮಿಕಾದ್ಯಾನಿ ಸಾದರಮ್ |

ವಾತುಲಾಂತಾನಿ ಶೈವಾನಿ

ಪುರಾಣಾನ್ಯಖಿಲಾನಿ ತು || 1-25

ಆದರಪೂರ್ವಕವಾಗಿ (ಸಾದರಂ) ಕಾಮಿಕಾದಿ ವಾತುಲಾಂತವಾದ ಶೈವತಂತ್ರಗಳನ್ನು (ಆಗಮಗಳನ್ನು) ಮತ್ತು ಶಿವಸಂಬಂಧಿಯಾದ ಎಲ್ಲ ಪುರಾಣಗಳನ್ನು ಅವಲೋಕನ ಮಾಡಿ (ಪರಿಶೀಲಿಸಿ)-

ವೇದಮಾರ್ಗಾ ವಿರೋಧೇನ

ವಿಶಿಷ್ಟಾಚಾರ ಸಿದ್ಧಯೇ |

ಅಸನ್ಮಾರ್ಗ ನಿರಾಸಾಯ

ಪ್ರಮೋದಾಯ ವಿವೇಕಿನಾಮ್ || 1-26

ವೇದಮಾರ್ಗಗಳಿಗೆ ವಿರೋಧವಿಲ್ಲದ ಹಾಗೆ ವಿಶಿಷ್ಟವಾದ ಆಚಾರದ ಸಿದ್ಧಿಗಾಗಿ ಅಸನ್ಮಾರ್ಗಗಳ ನಿರಸನಕ್ಕೆ (ಬಿಡಲು) ವಿವೇಕಿಗಳ ಪ್ರಮೋದಕ್ಕಾಗಿ (ಸಂತೋಷಕ್ಕಾಗಿ)-

ಸರ್ವಸ್ವಂ ವೀರಶೈವಾನಾಮ್

ಸಕಲಾರ್ಥ ಪ್ರಕಾಶನಮ್ |

ಅಸ್ಪೃಷ್ಟ ಮಖಿಲೈರ್ ದೋಷೈರ್

ಆದೃತಂ ಶುದ್ಧಮಾನಸೈಃ || 1-27

ವೀರಶೈವರಿಗೆ ಸರ್ವಸ್ವವಾದ ಸಕಲಾರ್ಥಗಳನ್ನು ಪ್ರಕಾಶಗೊಳಿಸುವ ಅಖಿಲದೋಷಗಳು ಮುಟ್ಟದಿರುವ ಶುದ್ಧಮನಸ್ಸಿನಿಂದ ಸ್ವೀಕರಿಸಲ್ಪಟ್ಟ-

ತೇಷ್ವಾಗಮೇಷು ಸರ್ವೆಷು

ಪುರಾಣೇಷ್ವ ಅಖಿಲೇಷು ಚ |

ಪುರಾ ದೇವೇನ ಕಥಿತಮ್

ದೇವ್ಯೈ ತನ್ನಂದನಾಯ ಚ || 1-28

ಆ ಎಲ್ಲಾ ಇಪ್ಪತ್ತೆಂಟು ಆಗಮಗಳಲ್ಲಿ, ಅಖಿಲ ಪುರಾಣಗಳಲ್ಲಿ ಪೂರ್ವದಲ್ಲಿ ದೇವನಿಂದ ದೇವಿಗೆ ಮತ್ತು ಅವರ ಮಗನಿಗೆ ಹೇಳಲ್ಪಟ್ಟಿರುವಂತೆ (ಶಿವನಿಂದ ಪಾರ್ವತಿಗೆ ಮತ್ತು ಅವರ ಮಗನಾದ ಷಣ್ಮುಖನಿಗೆ ಹೇಳ್ಪಟ್ಟಿರುವ)-

ತತ್ಸಂಪ್ರದಾಯ ಸಿದ್ಧೇನ

ರೇಣುಕೇನ ಮಹಾತ್ಮನಾ |

ಗಣೇಶ್ವರೇಣ ಕಥಿತಮ್

ಅಗಸ್ತ್ಯಾಯ ಪುನಃಕ್ಷಿತೌ || 1-29

ಆ ಸಂಪ್ರದಾಯಸಿದ್ಧನಾದ (ಶಿವಸಂಪ್ರದಾಯದ) ಮಹಾತ್ಮನಾದ ರೇಣುಕ ಗಣೇಶ್ವರನಿಂದ ಪುನಃ ಕ್ಷಿತಿ (ಭೂಮಂಡಲದಲ್ಲಿ)ಯಲ್ಲಿ ಅಗಸ್ತ್ಯನಿಗೆ ಹೇಳಲ್ಪಟ್ಟಿತು.

ವೀರಶೈವ ಮಹಾ ತಂತ್ರಮ್

ಏಕೋತ್ತರ ಶತಸ್ಥಲಮ್ |

ಅನು-ಗ್ರಹಾಯ ಲೋಕಾನಾಮ್

ಅಭ್ಯಧಾತ್ ಸುಧಿಯಾಂವರಃ ||1-30

ನೂರೊಂದು ಸ್ಥಲಗಳಿಂದ ಕೂಡಿದ ವೀರಶೈವ ಮಹಾತಂತ್ರವನ್ನು (ಮಹಾ ಆಗಮವನ್ನು) ಬುದ್ಧಿವಂತರಲ್ಲಿ (ಸುಧಿಯಾಂ) ಶ್ರೇಷ್ಠನಾದ (ಶಿವಯೋಗಿ ಶಿವಾಚಾರ್ಯನು) ಲೋಕದ ಅನುಗ್ರಹಕ್ಕಾಗಿ ಹೇಳಿದನು.

ಸರ್ವೆಷಾಂ ಶೈವ ತಂತ್ರಾಣಾಮ್

ಉತ್ತರತ್ವಾನ್ ನಿರುತ್ತರಮ್ |

ನಾಮ್ನಾ ಪ್ರತೀಯತೇ ಲೋಕೇ

ಯತ್ಸಿದ್ಧಾಂತ ಶಿಖಾಮಣಿಃ || 1-31

ಸಮಸ್ತ ಶೈವತಂತ್ರಗಳ ಉತ್ತರಭಾಗದಲ್ಲಿರುವುದರಿಂದ ಮತ್ತು ಇದರ ಉತ್ತರದಲ್ಲಿ ಮತ್ತಾವುದೂ ಇಲ್ಲದಿರುವುದರಿಂದ ಇದು ಸಿದ್ಧಾಂತಶಿಖಾಮಣಿ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. (ಪ್ರತೀಯತೇ) (ತಂತ್ರವೆಂದರೆ ಆಗಮ, ಆಗಮವೆಂದರೆ ಸಿದ್ಧಾಂತವಾಗಿದೆ. ಇವು ಮೂರೂ ಸಹ ಒಂದೇ ಆಗಿವೆ).

ಅನುಗತ ಸಕಲಾರ್ಥೆ|

ಶೈವತಂತ್ರೈಃ ಸಮಸ್ತೈಃ |

ಪ್ರಕಟಿತ ಶಿವಬೋಧಾದ್ವೈತ |

ಭಾವ ಪ್ರಸಾದೇs ವಿದಧತು ಮತಿಮಸ್ಮಿನ್

ವೀರಶೈವಾ ವಿಶಿಷ್ಟಾಃ

ಪಂಡಿತ ಶ್ಲಾಘನೀಯೇ||32

ಸಮಸ್ತ ಶೈವತಂತ್ರಗಳ (ಆಗಮಗಳ, ಸಿದ್ಧಾಂತಗಳ)ನ್ನು ಅನುಸರಿಸಲ್ಪಟ್ಟ ಸಕಲ ಅರ್ಥಗಳನ್ನು ಒಳಗೊಂಡು ಪ್ರಕಟಿಸಲ್ಪಟ್ಟ, ಶಿವಜ್ಞಾನದಿಂದುಂಟಾದ ಅದ್ವೈತ ಭಾವ ಪ್ರಸಾದವುಳ್ಳ, ಪಂಡಿತರಿಂದ ಶ್ಲಾಘಿಸಲ್ಪಟ್ಟ, ಪಶುಪತಿಮತಸಾರವಾದ ಇದರಲ್ಲಿ (ಶ್ರೀಸಿದ್ಧಾಂತ ಶಿಖಾಮಣಿಯಲ್ಲಿ) ವಿಶಿಷ್ಟರಾದ ವೀರಶೈವರು ತಮ್ಮ ಬುದ್ಧಿಯನ್ನು ತೊಡಗಿಸಲಿ (ಮತಿಂ ವಿದಧತು).

ಇತಿ ಕವಿಕಾವ್ಯ ವರ್ಣನಂ ಪರಿಸಮಾಪ್ತಂ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು

ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ,

ಶ್ರೀ ರೇಣುಕಾಗಸ್ತ್ಯ ಸಂವಾದೇ

ಶ್ರೀವೀರಶೈವಧರ್ಮ ನಿರ್ಣಯೇ,

ಶ್ರೀಶಿವಯೋಗಿ ಶಿವಾಚಾರ್ಯ ವಿರಚಿತೇ

ಶ್ರೀಸಿದ್ಧಾಂತ ಶಿಖಾಮಣೌ ವಂಶ ವರ್ಣನಂ

ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ್ಟ ಶ್ರೀಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದ ರೂಪವೂ, ಶ್ರೀವೀರಶೈವಧರ್ಮನಿರ್ಣಯವೂ, ಶ್ರೀ ಶಿವಯೋಗಿಶಿವಾಚಾರ್ಯ ವಿರಚಿತವೂ ಆದ ಶ್ರೀಸಿದ್ಧಾಂತಶಿಖಾಮಣಿಯಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯ ವಂಶವರ್ಣನವೆಂಬ ಹೆಸರಿನ ಮೊದಲನೆಯ ಪರಿಚ್ಛೇದವು ಮುಗಿದುದು.

ಮಂಗಳಾಚರಣಾನುಕ್ರಮ ಪ್ರಸಂಗಃ ನಾಮ ಪ್ರಥಮಃ ಪರಿಚ್ಛೇದಃ