ರೇಣುಕ ಜಯ ಮಂಗಳಂ

ಜಯ ಜಯ ಮಂಗಳ ಜಯ ಶುಭ ಮಂಗಳ

ಜಯ ಜಯ ಮಂಗಳ ಜಯ ಶುಭ ಮಂಗಳ

ಭವ ಹರಣ ಶಿವ ಪೂರ್ಣ ರೇಣುಕಗೆ ತ್ರಿಭುವನ ಪಾಲಕ ಭಕ್ತ ಸುಧಾರಕ

ಶುಭವನು ಕರುಣಿಸುವ ರೇಣುಕಗೆ

ಜಯ ಜಯ ಮಂಗಳ ಜಯ ಶುಭಮಂಗಳ ಭವ ಹರಣ

ಶಿವ ಪೂರ್ಣ ರೇಣುಕಗೆ


1)ವಿಶ್ವದಲೆಲ್ಲ ವೀರಶೈವ ಧರ್ಮವನು

ಪ್ರಥಮದಿ ಸ್ಥಾಪಿಸಿದ ಪ್ರಮತನಿಗೆ!2!

ಪರಮ ಗುರುವೆನಿಸಿ ಪೂಜ್ಯನೆಂದೆನಿಸಿ!2!

ಜಗದಲಿ ಮೆರೆಯುವ ಮಹಿಮನಿಗೆ

ಜಯ ಜಯ ಮಂಗಳ ಜಯ ಶುಭಮಂಗಳ ಭವ ಹರಣ

ಶಿವ ಪೂರ್ಣ ರೇಣುಕಗೆ


2)ಕೊಲ್ಲಿಪಾಕಿ ಪುರದ ತೀರ್ಥದ ನಾಯಕ

ಯೋಗಿಕುಲ ತಿಲಕ ಶುಭಹಸ್ತಗೆ

ಅಶ್ವಕ ದಂಡ ಕಂಮಂಡಲ ಧಾರಕ! 2!

ಸಕಲರ ಪೊರೆಯುವ ಸಾತ್ವಿಕಗೆ !2!

ಜಯ ಜಯ ಮಂಗಳ ಜಯ ಶುಭಮಂಗಳ ಭವ ಹರಣ

ಶಿವ ಪೂರ್ಣ ರೇಣುಕಗೆ


3) ಹಸಿರು ಭಾವುಟ ರುದ್ರಾಕ್ಷ ಹಾವುಗೆ

ಲಿಂಗ ಭಸ್ಮಧರ ಸಂಭುತಗೆ

ಲಂಕೆಯ ನಗರದಿ ಮೂಕೋಟಿ ಲಿಂಗವನ್ನು!2!

ಸ್ಥಾಪನೆ ಮಾಡಿದ ಲಂಗಾತ್ಮಗೆ!2!

ಜಯ ಜಯ ಮಂಗಳ ಜಯ ಶುಭಮಂಗಳ ಭವ ಹರಣ

ಶಿವ ಪೂರ್ಣ ರೇಣುಕಗೆ


4) ವಸುಧೆ ಸೂತ್ರದಿ ವೀರ ಗೋತ್ರದಿ

ಮುಕುಟ ಸ್ಪಟಿಕಧರ ಗುರುವರಗೆ

ದುಷ್ಪರ ನಾಶಕ ಶಿಷ್ಟರ ಪೋಷಕ !2!

ಮುನಿಗಳ ಪಾಲಕ ಸರ್ವೇಶಗೆ !2!

ಜಯ ಜಯ ಮಂಗಳ ಜಯ ಶುಭಮಂಗಳ ಭವ ಹರಣ

ಶಿವ ಪೂರ್ಣ ರೇಣುಕಗೆ

5) ಗುರು ರೇಣುಕರ ನಿಜ ಅವತಾರಿ

ಬಾಳೆಹೊನ್ನೂರಿನ ಮಹಾಸ್ವಾಮಿಗೆ

ಹಗಲಿರುಳೆನ್ನದೆ ಭಕ್ತರ ಹರಸುವ! 2!

ಜಗದ್ಗುರು ವೀರ ಸೋಮೇಶ್ವರಗೆ!2!

ಜಯ ಜಯ ಮಂಗಳ ಜಯ ಶುಭ ಮಂಗಳ


ಜಯ ಜಯ ಮಂಗಳ ಜಯ ಶುಭ ಮಂಗಳ ಭವ ಹರಣ

ಶಿವ ಪೂರ್ಣ ರೇಣುಕಗೆ ತ್ರಿಭುವನ ಪಾಲಕ ಭಕ್ತ ಸುಧಾರಕ

ಶುಭವನು ಕರುಣಿಸುವ ರೇಣುಕಗೆ


ಜಯ ಜಯ ಮಂಗಳ

ಜಯ ಶುಭಮಂಗಳ ಭವ ಹರಣ

ಶಿವ ಪೂರ್ಣ ರೇಣುಕಗೆ