ವಿಬೂತಿ


ಹರನ ನೊಸಲ ವಿಬೂತಿ

ಶರಣರ ರೊಪ ವಿಬೂತಿ

ಶಿವನೈದು ಮುಖವೇ ವಿಬೂತಿ

ಧರೆಯೋಳಗೈದು ವಿಬೂತಿ


ಹಸಿತ ಭಸ್ಮ ಚಾರ ರಕ್ಷೆ ವಿಬೂತಿ ಧರಿಸಲು

ಸಿರಿಯ ನೀಡಿ ಅರಿವ ತೋರಿ

ಪಾಪ ಭೀತಿ ಹರಿವುದು

ಭಸ್ಮ ಸ್ನಾನ ಮಾಡಲು ದೇಹವೆಲ್ಲ ಲಿಂಗವು

ಸಪ್ತ ಜನ್ಮ ಪಾಪವು ಕ್ಲೇಶ ಮಾತ್ರ ಉಳಿಯದು


ವಿಬೂತಿ ಹಣೆಗೆ ಧರಿಸಲು ಗಂಗೆ ತುಂಗೆ ಸ್ನಾನವು

ಭಸ್ಮ ಲೇಪ ಮಾಡಲು ಸಕಲ ತೀಥ್ರ ಯಾತ್ರೆಯು

ಕ್ಷೌರ ರಕ್ಷೆ ಧರಿಸಲು ಸಕಲ ಪಾಪ ಹರಿವುದು

ಜ್ಞಾನ ದೀಪ ಬೆಳಗುತ ಅಂಧಕಾರ ತೊಡೆವುದು