ವರವೊಂದ ನೀಡು


ಕರ ಮುಗಿದು ಬೇಡುವೆನು ತಂದೆ

ವರವೊಂದ ನೀಡು

ಶ್ರೀ ರೇಣುಕಾಯ೯

ಶ್ರೀ ರೇಣುಕಾಯ೯ ಶ್ರೀ ರೇಣುಕಾಯ೯||ಪ||


ಭವಪಾಶದಲ್ಲಿ ನಾ ಬೆಂದು ನೊಂದೆ

ಶಿವಸಿರಿಯ ನೀಡಿ ಹರಸು ನೀ ತಂದೆ

ಭಾವನೆಯ ಮಡಿಲಲ್ಲಿ ಮಲ್ಲಿಗೆ ಹೂವಾಗಿ

ಶಿವಸಿರಿಯ ಬೆಳಕನು ತೋರು ಬಾ ||೧||


ಜಗವೆಲ್ಲ ನಗುತಿರಲಿ ಜನರಲ್ಲಿ ಗೆಲುವಿರಲಿ

ಜಗ ತುಂಬಾ ಮನೆ ತುಂಬಾ ಜಯ ಜಯ

ನನ್ನಲ್ಲಿ ನಿನ್ನಲ್ಲಿ ಎಲ್ಲೆಲ್ಲೂ ನೀನಿರುವೆ ನಂಬಿದ ಭಕ್ತರ

ಸಲಹು ಬಾ ||೨||


ಮಲಯಾಚಲವಾಸಿ ಶ್ರೀ ರೇಣುಕಾಯ೯ ಭವರೋಗ

ಹಾರಕ ಭಕ್ತರುದ್ದಾರಕ

ಜಂಗಮ ಜಗದ್ಗುರು

ಜಗದೋದ್ಧಾರನ ರಂಭಾಪುರಿ

ಸೋಮೇಶ್ವರ ನೆನೆವ ||೩||


ಸಾಹಿತ್ಯ - ೧೦೦೮ ಪ್ರಸನ್ನ ರೇಣುಕ

ಶ್ರೀ ವೀರಸೋಮೇಶ್ವರ ಶಿವಾಚಾರ್ಯ

ಭಗವತ್ಪಾದರು ಬಾಳೆಹೊನ್ನೂರು.