ಮಂಗಳಾರತಿ ಬೆಳಗಿರೇ ಸರ್ವಾಂಗ

ಲಿಂಗಮಯ ಶಿವಯೋಗಿಗೇ

ಗಂಗೆ ಸರಸ್ವತಿ ಯಮುನೆ ನದಿ ಮಂತ್ರ ಮಯವಾದ

ಲಿಂಗ ಜಂಗಮ ರೂಪಗೇ ::ಪ::

ಶಿವಯೋಗ ನಿದ್ರೆಯೊಳಗೇ ತಾನಿದ್ರು

ಭವಜಾಡ್ಯಗಳ ಹರಿಪಗೇ

ಭುವಿ ಜನರ ಸಂಸಾರ ಗೋಷ್ಟಿಗಳನತಿಗಳೆದ

ಸವೆಯದಾನಂದ ಪರಗೇ ::೧::

ವೇದ ಶಾಸ್ತ್ರಕೆ ನಿಲುಕದಾ ಮಹಮಂತ್ರ

ಮೇದಿನಿಗೆ ಬೋಧಿಸುವಗೇ

ಸಾಧಿಸೀ ಪರಬ್ರಹ್ಮ ಚಿದ್ವಿಲಾಸವ ಕಂಡ

ಅನಾದಿ ಪರಶಿವ ಮೂರ್ತಿಗೇ ಹರಗೇ ::೨::

ಆನೆ ನುಂಗಿದ ಬೆಳವಲಾ ಫಲದಂತೆ

ತಾನೇ ತಾನಾಗಿರ್ಪಗೇ

ಜ್ಞಾನೀ ನಿರಾಲಿಂಬ ಚದುರ ಮಹಂತೇಶನಿಗೆ

ಜ್ಞಾನ ಶಕ್ತಿಯರು ಪೂಡಮಡುತ ಕೊಂಡಾಡುತಲಿ ::೩::

ಮಂಗಳಾರತಿ ಬೆಳಗಿರೇ ಸರ್ವಾಂಗ

ಲಿಂಗಮಯ ಶಿವಯೋಗಿ