ಬಿಲ್ವಪತ್ತರಿ ಅಗಬೇಕಮ್ಮಾ
ಬಿಲ್ವಪತ್ತರಿ ಅಗಬೇಕಮ್ಮಾ , ಶಿವನ ಪೂಜೆಗೆ
ಬಿಲ್ವಪತ್ತರಿ ಅಗಬೇಕಮ್ಮಾ
ಬಿಲ್ವ ಪತ್ತರಿ ಅಗಬೇಕು ಮಲ್ಲಿಕಾರ್ಜುನ ಪೂಜೆಗೆಂದು
ಅಲ್ಲಿ ನೋಡಲು ಸಲ್ಲು ಶಿವನ ಮೆಲ್ಲ ಮೆಲ್ಲಗೆ ಓಲಿಸ ಬೇಕೂ
ಮೂರು ದಳದ ಬಿಲ್ವ ಪತ್ತರೆ , ಅದನ್ನೆತ್ತಿ ನೋಡಲು
ಸುತ್ತ ಮುತ್ತ ಲ ಬೆಳಕ ತೋರುವುದು
ಸತ್ತ ಚಿತ್ತ ನಂದನಾಗಿ ಕತ್ತಲೆ ಕಾಣಿಸದಂತೆ
ಮತ್ರ್ಯ ಲೋಕದಿ ಪುಟ್ಟದೊಂದು ನಿತ್ಯ ನಿರ್ಮಲನಾಗಬೇಕು
ಧರೆಯ ಬೋಗವ ಬಯಸಬೇಡಮ್ಮ, ನೀ ಅರಿಯಬೇಕಮ್ಮ
ಗುರುವಿನಂಗ್ರಿಯೊಳ ಬಜನೆ ಮಾಡಮ್ಮ
ಹರನು ಪಾರ್ವತಿ ರಮಣನೆಂದು, ಚರಣ ಸೇವೆಯನ್ನು ಮಾಡಿ
ಕರುಣೆಯನ್ನೇ ಪಡೆಯಬೇಕೂ