ಪ್ರಸಾದ

ಶುಧ್ದ ಸಿಧ್ದ ಪ್ರಸಿಧ್ದ ಪ್ರಸಾದ

ಲಿಂಗ ಜಂಗಮ ಗುರು ಪ್ರಸಾದ

ದೀಪವ ಹಚ್ಚಿಸಿ ಆಘ್ಯವ ಸಲ್ಲಿಸಿ

ಶೋಡಷ ಉಪಚಾರವ ಮಾಡಿ

ಪಂಚಾಕ್ಷರಿ ಜಪಿಸಿ ನೈವೇದ್ಯವ ಸಲ್ಲಿಸೆ

ಸೇವಿಸಳದುವೆ ಪ್ರಸಾದ

ಮನದಲಿ ನೆನೆಯುತ ಬಾಯಲಿ ಹಾಡುತ

ಶಿವ ಲಿಂಗಾರ್ಚನೆ ಮಾಡಿ

ಬಾವ ಶುದ್ದದಿ ನಿರ್ಮಾಲ್ಯವ ಮುಡಿಯಲು

ಅದುವೆ ದಿವ್ಯ ಪ್ರಸಾದ

ಬಾಣ ಲಿಂಗ ಲೋಹ ಲಿಂಗ

ರತ್ನ ಲಿಂಗ ಚರಲಿಂಗ

ಸ್ವಯಂಬುವೈದಕೆ ನಿವೇದಿತವಾದುದು

ಅದುವೆ ಪರಮ ಪ್ರಸಾದ