ಪ್ರಸನ್ನ ರೇಣುಕ ಗುರುವರನ
ಪ್ರಸನ್ನ ರೇಣುಕ ಗುರುವರನ
ಚರಣಕೆ ಮಂಗಲ ಗೈಯುವೆ ನಾ ||ಪ||
ಶುಭ ದಿನದಲಿ ಗುರು ತಾ ಬಂದು
ಶುಭದಾಶೀವಾ೯ದವ ಕೊಡುತ
ಶೋಭೀಪ ಪ್ರಸನ್ನ ರೇಣುಕ
ಗುರುವಿಗೆ ಚರಣಕೆ ಮಂಗಲ
ಗೈಯುವೆ ನಾ ||೧||
ಅದ್ಭುತ ಎನ್ನುವ ತತ್ಚವ ತಾ
ಅಭ್ಯಂತರವಿಲ್ಲದೆ ತಿಳಿಹಿಸುತ
ಅಭಯವ ತೋರುವ ರೇಣುಕ ಗುರುವಿಗೆ
ಅಭಿನಯದಾರುತಿ ಬೆಳಗುವೆ ನಾ ||೨||
ಭವಹರ ಶಿವಯೋಗಿ ಯು ತಾನು
ನವಜೀವನ ದೊಳ್ ತಾ ಬಂದು
ಭವ ಪಾಶವ ಬಿಡಿಸುವ ರೇಣುಕ ರಿಗೆ
ಬೆಡಗಿನ ದಾರುತಿ ಬೆಳಗುವೆ ನಾ ||೩||
ಪೊಡವಿಯೊಳ್ ಮುಕ್ತಿಯ ಮಂದಿರದಲ್ಲಿ
ಬೆಡಗಿಲೆ ಮೆರೆಯುವ ರೇಣುಕ ಗುರು ವಿಗೆ
ಅಡಿದಾವರಗಳ ಬಿಡದೆ ನಾ ಪೂಜಿಸಿ
ತವಕದಿ ಆರುತಿ ಬೆಳಗುವೆ ನಾ ||೪||