ಪೊರೆಯೊ ನಿರಂತರ


ಪೊರೆಯೊ ನಿರಂತರ ಗುರುವರ ರೇಣುಕ

ಸೢರಿಸುವೆ ನಿನ್ನಯ ಚರಣ ಕಮಲಗಳ

>

ಅರಿಯದೆ ಕಡುತರ

ದುರಿತವ ನೆಸಗಿ

ಪರಿ ಪರಿಯಿಂದಲಿ

ನರಳುವೆ ಭವದೊಳು

>

ಗುರುವೆ ನಿನ್ನನು ಬಿಟ್ಟು

ಪೊರೆಯುವರಾರುಂಟು

ಪರಮ ದಯಾಳುವೆ

ಪರಶಿವ ರೂಪಿಯೆ


ಹರಿವಿಧಿ ಮೊದಲಾದ

ಸುರರಿಗೆ ಲಿಂಗವ

ಕರುಣಿಸಿ ಕಾಯುವ

ಕರುಣಿಯು ನೀನು


ನಿಗಮಾಗಮಗಳು

ನಿನ್ನ ಯ ಮಹಿಮೆಯ

ಬಗೆ ಬಗೆ ಯಿಂದಲಿ

ಹೊಗಳುತಲಿರುವವು