ಪಂಚಾರತಿ


ಜಯ ಸಚ್ಚಿದಾನಂದ ನಿತ್ಯ ಪೂರ್ಣನಿಗೇ

ಜಯವೆಂದು ಬೆಳಗುವೇ ಸಕಲ ದೇವನಿಗೇ

ಜಯ ದೇವ ಜಯ ದೇವ



ಬಿಂದು ಕಳೆ ನಾದದಿ ಜನಿಯಿಲ್ಲದಂದೋ

ಇಂದೊ ಧರ ಮುಖ ಲೀಲೆ ಇಲ್ಲದಂದಂದೊ

ಒಂದೇ ಪರ ವಸ್ತು ತಾನಾಗಿರುತಿಹುದೆಂದೊ

ಒಂದಾರತಿಯನು ತಂದು ಬೆಳಗುವೆನೆಂದೊ , ತಾ ಬೆಳಗುವೇನೆಂದು ಜಯದೇವ



ಗುರು ಶಿಷ್ಯ ಶಿವ ಶಕ್ತಿ ಶಿವ ಜೀವರೆಂದೊ

ವರ ಪೂಜ್ಯ ಪೂಜ್ಯಕ ಗಣ ಮತ್ರ್ಯರೆಂದೊ

ಚರಲಿಂಗ ವಂಗವಾಯ್ತಿರಲೆ ಮತ್ತೊಂದೊ

ಎರಡಾರತಿಯನು ತಂದು ಬೆಳಗುವೆನೆಂದೊ , ತಾ ಬೆಳಗುವೇನೆಂದು ಜಯದೇವ



ಮೂರ್ ಲಿಂಗ ಮೂರ್ ಅಂಗ ಮೂರ್ ದೇವರೆಂದೊ

ಮೂರ್ ಲೋಕ ಮೂರ್ ತತ್ವ ಗಣಮಾತ್ಮರೆಂದು

ಲೀಲೆಯಿಂ ಮೂವರಣ ಕ್ಕೊಳಗಯಿತೆಂದು

ಲೋಲದಿಂದೆತ್ತುವೆ ಮೂರಾರತಿಯನು ತಂದು ತಾ ಬೆಳಗುವೇನೆಂದು ಜಯದೇವ



ನಾಲ್ಕು ತನುಲಿಂಗ ಕಳೆ ಚಿದಬಿಂದುನಾದಾ

ನಾಲ್ಕು ಘಟ್ಟಿತಮಾಗಿ ಘನಲಿಂಗವಾದಾ

ನಾಲ್ಕಾರಿಂ ಜಗದಾದಿ ಘನ ಕೃತ್ಯವಾಯತೆಂದೊ

ನಾಲ್ಕಾರತಿಯನು ತಂದು ಬೆಳಗುವೆನೆಂದೊ ತಾ ಬೆಳಗುವೇನೆಂದು ಜಯದೇವ



ಪಂಚ ಮುಖವನುತಳೆವ ಮಾತೃ ಬೊತಗಳು

ಪಂಚೀಕರಿಸಿ ಬ್ರಹ್ಮಾ ಅಂದ ರಚನೆಗಳು

ಪಂಚಾಂಗ ಲಿಂಗ ಶ್ರೀ ವಿರೋಪಾಕ್ಷಗೆಂದೊ

ಪಂಚರತಿಯನು ತಂದು ಬೆಳಗುವೆನೆಂದೊ ತಾ ಬೆಳಗುವೇನೆಂದು ಜಯದೇವ