ನಿನ್ನಾತ್ಮ ನಿಶ್ಚಲವಿರಲು
ನಿನ್ನಾತ್ಮ ನಿಶ್ಚಲವಿರಲು
ಪರಮಾತ್ಮ ನಿಶ್ಚಯವಿರುವ !
ರಂಗು ರಂಗಿನ ಹೂಗಳು ಇರಲು
ಪೂಜೆಗೆ ರಂಗು ಇದೆಯೇನು?
ರಂಗಿನ ಹೂಗಳೇ ನಿನ್ನಾತ್ಮ
ಪೂಜೆಯೆಂಬುದೆ ಪರಮಾತ್ಮ !
ನಿನ್ನಾತ್ಮ ನಿಶ್ಚಲವಿರಲು
ಪರಮಾತ್ಮ ನಿಶ್ಚಯವಿರುವ !
ಅಂಕು ಡೊಂಕುಗಳು ಕಬ್ಬಿಗೆ ಇರಲು
ಕಬ್ಬಿನ ಸಿಹಿಯು ಡೊಂಕೇನೂ ?
ಡೊಂಕಿನ ಕಬ್ಬೆ ನಿನ್ನಾತ್ಮ
ಸಮನಾದ ಸಿಹಿಯೇ ಪರಮಾತ್ಮ !
ನಿನ್ನಾತ್ಮ ನಿಶ್ಚಲವಿರಲು
ಪರಮಾತ್ಮ ನಿಶ್ಚಯವಿರುವ !
ಬಣ್ಣ ಬಣ್ಣದ ಹಸುಗಳು ಇರಲು
ಹಾಲಿಗೆ ಬಣ್ಣ ಇದೆಯೇನು ?
ಬಣ್ಣದ ಹಸುಗಳೇ ನಿನ್ನಾತ್ಮ
ಬಿಳಿನೂರೆ ಹಾಲೆ ಪರಮಾತ್ಮ !
ನಿನ್ನಾತ್ಮ ನಿಶ್ಚಲವಿರಲು
ಪರಮಾತ್ಮ ನಿಶ್ಚಯವಿರುವ !
ಭಜನೆಯು ನಾನಾ ರಾಗದಿ ಇರಲು
ಭಕ್ತಿಗೆ ರಾಗ ಇದೆಯೇನು ?
ವಿಧ ವಿಧ ರಾಗವೇ ನಿನ್ನಾತ್ಮ
ಭಕ್ತಿಯೆಂಬುದೆ ಪರಮಾತ್ಮ !
ನಿನ್ನಾತ್ಮ ನಿಶ್ಚಲವಿರಲು
ಪರಮಾತ್ಮ ನಿಶ್ಚಯವಿರುವ !
ನೋಟಕೆ ಕಮಾನು ಕಣ್ಣುಗಳು ಇರಲು
ದೃಷ್ಠಿಗೇ ಕಮಾನು ಇದೆಯೇನು ?
ಕಮಾನು ಕಣ್ಣುಗಳೇ ನಿನ್ನಾತ್ಮ
ನೇರ ದೃಷ್ಠಿಯೇ ಪರಮಾತ್ಮ !
ನಿನ್ನಾತ್ಮ ನಿಶ್ಚಲವಿರಲು
ಪರಮಾತ್ಮ ನಿಶ್ಚಯವಿರುವ !
ರಂಗು ರಂಗಿನ ಹೂಗಳು ಇರಲು
ಪೂಜೆಗೆ ರಂಗು ಇದೆಯೇನು?
ರಂಗಿನ ಹೂಗಳೇ ನಿನ್ನಾತ್ಮ
ಪೂಜೆಯೆಂಬುದೆ ಪರಮಾತ್ಮ
ಪೂಜೆಯೆಂಬುದೆ ಪರಮಾತ್ಮ !