ಜ್ಞಾನಪೂರ್ಣಂ ಜಂಗಮಂಜ್ಯೋತಿ


ಜ್ಞಾನಪೂರ್ಣಂ ಜಂಗಮಂಜ್ಯೋತಿ

ನಿರ್ಮಲವಾದ ಮನವೇ ಕರ್ಪೂರದಾರತಿ |ಪ|


ಅನುದಿನ ಗುರುವಿನ ಅನುರಾಗ ಭಕ್ತಿಯಲಿ

ಜನನ ಮರಣ ರಹಿತ ಜಂಗಮಗೆ ಬೆಳಗಿರಿ |1|



ನಾನಾ ಜನ್ಮದ ಕತ್ತಲೆ ಕಳೆದುಳಿದಮೇಲೆ

ಮಾನವ ಜನುಮದ ಬೆಳಕಲಿ

ಸ್ವಾನುಭಾವದ ಸುಖ ತಾನೇ ಕೈ ಸೇರುವುದು

ಅನಭವಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ |2|



ನಾ ನೀ ನೆಂಬುದ ಬಿಡಿರಿ ನರಕವೇ ಪ್ರಾಪ್ತಿ

ಅಷ್ಟವರ್ಣದ ಸ್ಥೂಲವು ಮಾನವ ಜನ್ಮ

ಹುಟ್ಟಿ ಬರುವುದು ದುರ್ಲಭವು

ಕೊಟ್ಟಾನು ಗುರು

ಎಮಗೆ ಮಾಡಿದ ಫಲದಿಂದೆ

ಹುಟ್ಟಿದ ಮಗನ ಹೆಸರು ಶಿವನೆಂದು ಕರೆಯಿರಿ |3|