ಶುಕ್ಲಾಂಬರಧರಂ ವಿಷ್ಣುಂ | ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ | ಸರ್ವ ವಿಘ್ನೋಪಶಾಂತಯೆ ||
ಗಜಮುಖನೇ ಗಣಪತಿಯೇ ನಿನಗೆ ವಂದನೆ |
ನಂಬಿದವರ ಪಾಲಿನ ಕಲ್ಪತರು ನೀನೆ || ಪ ||
ಭಾದ್ರಪದ ಶುಕ್ಲದ ಚೌತಿಯಂದು |
ನೀ ಮನೆಮನೆಗೂ ದಯಮಾಡಿ ಹರಸು ಎಂದು |
ನಿನ್ನ ಸನ್ನಿಧಾನದಿ ತಲೆಬಾಗಿ ಕೈಯ ಮುಗಿವೆ |
ಬೇಡುವಾ ಭಕ್ತರಿಗೆ ನೀ ದಯಾಸಿಂಧು || ಪ ||
ಈರೇಳು ಲೋಕದ ಅಣುಅಣುವಿನ |
ಇಹಪರದ ಸಾಧನಕೆ ನೀನೆ ಕಾರಣ |
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ |
ನೀಡಿದರೆ ಸಾಕಯ್ಯ ಜನ್ಮ ಪಾವನ || ಪ ||
ಪಾರ್ವತೀ ಪರಶಿವನ ಪ್ರೇಮಪುತ್ರನೇ |
ಪಾಲಿಸುವ ಪರದೈವ ಬೇರೆ ಕಾಣೆ |
ಪಾಪದ ಪಂಕದಲಿ ಪದುಮ ಎನಿಸು ಎನ್ನ |
ಪಾದಸೇವೆಯೊಂದೇ ಧರ್ಮ ಸಾಧನೆ || ಪ ||