ಮಂಗಲಮಯ ಮಹಾ ಲಿಂಗೊದ್ಬವರಿಗೆ
ಮಂಗಲಮಯ ಮಹಾ ಲಿಂಗೊದ್ಬವರಿಗೆ ಮಂಗಲವೆನ್ನಿರಿ ಸಾಂಗದಲಿ
ಅಂಗಜ ಬಂಗ ಶಿವಾಂಗ ಸಂಗ ಗುರು ಲಿಂಗ ಜನ್ಗಮಾಚರ್ಯರಿಗೆ
ಕ್ಷೋಣಿಯೊಳುರುತರ ಲೀಲಾ ವಿಸರದಿ ಕ್ಷೋಣಿಯ ಪಾವನಗೈದವಗೆ
ಅಣು ತೃಣ ಕಾಷ್ಟದೊಳನುದಿನ ನೆಲೆಸಿಹ ಗಣ ಕುಲ ನಾಯಕ ರೇಣುಕಗೆ
ಬೊರಿ ಮಹಿಮ ಬವ ದೊರ ನಿಗಮ ಸುವಿಚಾರ ಕಲುಷಸಂಹಾರಕಗೆ
ವೀರಶೈವ ಸಮಯಂಬುಧಿ ಶಶಿಧರ ಸಾರ ಕರುಣಿ ಗುರು ದಾರುಕಗೆ
ಲೋಕದೊಳುತ್ತಮ ಖ್ಯಾತಿಯ ಧರಿಸುತ ಕಾಕುಮತಂಗಳ ಜಯಿಸಿದಗೆ
ನಾಕ ಬಾವರ್ಚಿತ ನಾಕಗಮನಯುತ ಶೋಕ ಹರೈಕೋರಾಮನಿಗೆ
ಚಂಡ ಮತಂಗಳ ಖಂಡಿಸಿಬ್ರಹ್ಮಾ ಖಂಡ ತತ್ತ್ವವನ್ ಬೋಧಿಪಗೆ
ಖಂಡ ಪರಶುವಿನ ತುಂಡ ಜನಿತ ಚಿದಖಂಡ ಪಂಡಿತಾರಾಧ್ಯರಿಗೆ
ಈಶ್ವರ ಬಕ್ಥಿಯ ಶಾಶ್ವತಗೊಳಿಸುತ ವಿಶ್ವಕೆ ಗುರುವಾಗಿಪ್ರರಿಗೆ
ವಿಶ್ವನಾಥನೊಳಗುದ್ಬವಿಸಿದ ಮಹಾ ವಿಶ್ರುತ ವಿಶ್ವಾರಾಧ್ಯರಿಗೆ
ನಿರುತರ ನಿಜದಲಿ ನೀತಿಯ ಅರುಹುತ ಶಿವಕುಲ ಮೆರೆಸಿದ ಅದ್ಯರಿಗೆ
ಪರತರ ತತ್ತವದಿ ಪರಮತ ಹರಿಸಿದ ಪರಶಿವ ಪಂಚಾರ್ಚರ್ಯರಿಗೆ