ಅಂಬಾಗಾರುತಿ


ಅಂಬಾಗಾರುತಿಯನ್ನು ದೇವಿಗಾರುತಿಯನ್ನು

ರಂಬೇರು ಬೆಳಗಿರೆ

ಶುಂಬಾ ನಿಶುಂಭರ ಸಂಹಾರಿಗೇ ಶಂಭಾವಿಗೆ || ಪ ||


ಕುಂಬಕುಚಜಗದಂಬ ನಿನ್ನ ಪಾದ

ನಂಬಿದೆನು ನರಶರೀರದೀ |

ಅಂಬುಕೇಶನ ರಾಣಿ ಶರಣರ

ಬಿಂಬದೊಳ್ ನಲಿದಾಡು ಜನನೀ || ಅಂಬಾಗಾರತಿಯನ್ನು ||


ದುಷ್ಟ ರಕ್ಕಸರನ್ನು|

ಮೆಟ್ಟಿ ಕುತ್ತಗಿ ಕೊಯ್ದು ಸುಟ್ಟ

ತ್ರಿಪುರರಗೆದ್ದ ಶ್ರೀಕಾಂತೆಗೆ ಶಂಭಾವಿಗೆ ||


ಬ್ರಷ್ಟಮಹಿಷನ ಹೊಟ್ಟೆ ಬಗೆದು

ಬೆಟ್ಟ ಕೊಳ್ಳಕ ಇಳಿದ ರೇಣುಕೆ


ಸೃಷ್ಟಿಯೊಳು ಪಟ್ಟದ ಬ್ರಹ್ಮನ

ಶಿರವ ಹರಿಸಿದ ಪರಮ ಪಾರ್ವತೀ || 2 ||


ಹಿಂಡ ದೈತ್ಯರನ್ನೆಲ್ಲ ಚಂಡಾಡಿ ಕೊರಳೊಳು

ರುಂಡಮಾಲೆಯ ಧರಿಸಿದ ಚಾಮುಂಡಿಗೆ ಶಂಭಾವಿಗೆ ||

ಮಂಡಲದಿ ಮೆರೆವಂಥ ಭಂಡರ

ತುಂಡುಮಾಡಿದ ಅಖಂಡ ದೇವತೆs

ಪುಂಡ ಶಿಶುನಾಳಧೀಶನ

ಕಂಡೆ ನಿನ್ನಯ ಪಾದನೇತ್ರದಿ || ೨ ||