ರಾಯಚೋಟಿ ಪುರವಾಸ ಗುರುವೀರಭದ್ರ


ಶ್ರೀಗುರು ವೀರಭದ್ರ ಪರಶಿವನ ಸುಪುತ್ರ

ರಾಚೋಟಿ ಪುರವಾಸ ಪೊರೆಯೋ ರುದ್ರ


ದಕ್ಷಯಜ್ಞವ ತೊರದಿ ಭಗ್ನವಗೊಳಿಸಿ

ವೀರಶ್ರೀ ವಿಜಯಪತಾಕೆಯ ಹಾರಿಸಿ

ಮಾಂಡವ್ಯ ನದಿಯ ದಡದಲಿ ನೆಲೆಸಿ

ಭದ್ರಕಾಳಿಯ ಪತಿ ನೀನು ಶ್ರೀವೀರಭದ್ರ


ನಾನೆಂಬ ಮೂಢರಿಗೆ ಚಂಡ ಪ್ರಚಂಡ

ತನ್ನನು ನಂಬಿದ ಭಕ್ತರಿಗೆ ಪ್ರೀತಿಯಲಿ ಕಂಡ

ವರಗಳ ಕರುಣಿಸುವ ವರ ಕಾಮಧೇನು

ಶಾಂತಮೂರ್ತಿಯು ನೀನು ಶ್ರೀ ವೀರಭದ್ರ


ಮಾಘಮಾಸದಿ ಸೂರ್ಯನ ದರ್ಶನವ ಗೈದು

ಭಕ್ತರು ವೀರಾವೇಶದಿ ಅಗ್ನಿಯ ಹಾಯ್ದು

ಭದ್ರಕಾಳಿಯ ಸಹಿತ ವಿಸ್ಮಯ ರಥೋತ್ಸವವು

ಕಾಣುವ ಕಂಗಳಲಿ ನಿಜದಿ ಪಾವನವು


ಅನುದಿನವು ನಿನ್ನ ಸ್ತುತಿಯ ಗೈಯ್ಯುತಲಿ

ತತ್ವ ವಿಚಾರ ಜೀವನದಿ ಅಳವಡಿಸಿಕೊಂಡವಗೆ

ಕಾಲಕಾಲಕೆ ನೀನು ಕಾಯುತಲಿ ಸಲಹಯ್ಯಾ

ರಾಯಚೋಟಿ ಪುರವಾಸ ಗುರು ವೀರಭದ್ರ


ರಚನೆ:- ವೀರಭದ್ರಗೌಡ ಕಾರೇಕಲ್ಲು.


ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ


07-030522