ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ

ರುದ್ರ ಭದ್ರ ದರ್ಶನಂ


ಶರಣು ಶಂಕರಗೌರಿ ರಮಣಾ

ಶರಣು ಕಾಲಕ ಕಾಲ ತೀತನೆ

ಶರಣು ನಿರ್ಮಲ ನಿತ್ಯ ನಿರ್ಗುಣ ನಿರುಪಮ ನಿರವಯ

ಶರಣು ಪಂಚಮುಖ ದಶ ಭುಜನೇ

ಶರಣು ಗಂಗಾಧರನೆ ಹರನೇ

ಶರಣು ಶರಣಾರ್ಥಿಪೊರೆ ಪರಮೇಶ ಮೊರೆ ಕೇಳಯ್ಯಾ

ತಾಳಲಾರೆವು ಹಿರಣನುಪಟಳ

ಗೋಳು ಹೊಯ್ಯುತಕದ್ದ ಹಸುಗಳ

ಬಾಳಗೊಡನೆಮ್ಮ ಸಿರಿ ಸಂಪದಕೊಳ್ಳೆ ಹೊಡೆದಿಹನು ಭಾಳಲೋಚನನೆಗತಿ ರಕ್ಷಿಸು

ಕಾಳಿವಲ್ಲಭರುದ್ರ ಪುತ್ರನೆ

ಹಾಳು ಗೈದಿಹ ಪುರವ ಮರಳಿಸಿ ಕಂದಗಳ ಪೊರೆಯೋ

ಗಂಗಧರ ಕೇಳಿದನು ಕರುಣದಿ

ಭಂಗ ಪಡುವದು ಸಾಕು ಬೇಡಿರಿ

ತುಂಗವರ ಪಡೆದಿಹನಸುರ ಮರಣ ಬರದಾರಿಂದ

ಕಂಗೆಡಿಸುತಿಹನೆಲ್ಲರನ್ನವ

ಮಂಗನಂತಾಡಿಸುತ ರಕ್ಕಸ

ಸಂಗಳಿಸಿಹುದು ಕರ್ಮ, ಬಂದಿದೆ ಅಳಿವು ಶಾಂತರಿರಿ||

ಗಿರಿಜೆರಮಣನ ಮಾತು ನೆಮ್ಮದಿ-

ಗರಿಯ ಬಿಚ್ಚಿತು ದೇವ ಕೇಳಿದ

ಉರುಗ ಭೂಷಣ ಕೃಪೆಯ ತೋರಿದ ಸಾಕು ನಮಗೆಂದು

ಕರೆದು ಪೇಳಿದ ವೀರ ಭದ್ರಗೆ

ಧರೆಯೊಳು ಹಿರಣ್ಯನು ಪಟಳ ಮಿತಿ-

ಇರದೆ ಸಾಗಿದೆ ನನ್ನ ಮೆಚ್ಚಿನ ಶಿಷ್ಯ ಪೊರೆಯವರಾ

ಅಸುರ ಕಶ್ಯಪಗೆ ಮಗ ಜನಿಸಿದ

ಹೆಸರು ಪ್ರಲ್ಲಾದೆನುತ ವಿಷ್ಣುವೆ

ಅಸುರ ಗರ್ಭದಿ ಹುಟ್ಟಿ ಹಗಲಿರುಳು ಹರಿಯ ನೆನೆಯುತ

ಕಸಿವಿಸಿಪಡುತ ಕೋಪದಿ ಕುದಿವ-

ಅಸುರ ತಂದೆಯ ಕಂಡು ನಲಿಯುತ

ಶಿಶುವು ನಗುತಲೆ ಹಿಂಸೆ ಕೊಡುತ್ತಾ ಕಾಡುತ ಹಿಪೊರೆಯೋ

ರಚನೆ:- ಶ್ರೀಮತಿ ಶಿವಲಿಂಗಮ್ಮ ಕಟ್ಟಿ, ಹುಬ್ಬಳ್ಳಿ.

ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ