ವೀರೇಶ ಚರಿತೆ


ಈ ಬಂದನೆ ಶಿವದೂಷಕ ಗಜಕಂಠೀರವ |

ನೀ ಬಂದನೆ ಶಿವದೂಷಕ ಕುಲ ಮದನರ್ದನ |

ನೀ ಬಂದನೆ ಶಿವದೂಷಕಸಂಕುಲ ವನಸಿಧಿಮಥಿತ

ಮಹಾಮಂದರನು ||


ಈ ಬಂದನೆ ಶಿವದೂಷಕ ತಿಮಿರದಿವಾಕರ

ನೀ ಬಂದನೆ ತೊಲತೊಲಗೆಂದುಲಿಯುತ್ತಿಹ ಕಹ

ಳಾಬಂಧುರಸಿನದಿಂ ನಡೆತಂದರಮನೆಯಂ

ಪುಗುತೆಂದಂ ಪಟುಭಟನು || ೫೩ ||

ರಾಘವಾಂಕ


ಭಾವಾರ್ಥ:- ಆಗ ಪಟುಭಟರು ವೀರಭದ್ರನ ಗುಣಗಾನ ಮಾಡುತ್ತಿದ್ದರು.

ವಿಜಯ ಸೂಚಕವಾದ ಕಹಳಾಧ್ವನಿಯಾಯಿತು. ಆಗ ವೀರಭದ್ರನು ಕೈಲಾಸದ ಅರಮನೆಯನ್ನು ಹೊಕ್ಕನು.

ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ