ಶಿವನ ಧ್ಯಾನ ಮಾಡು ಮನಕೆ ಶಾಂತಿ ನೀಡು||೨||

ಶಿವನನ್ನು ನಿನ್ನಲ್ಲೇ ನೀನು ನೋಡು ಆಆಆಆ

ಶಿವನನ್ನು ನಿನ್ನಲ್ಲಿ ನೀನು ನೋಡು.

ನಿಶ್ಚಲ ವೆಂಬ ಕೊಳದಿ ಮಿಂದು

ನಿರ್ಮಲ ವೆಂಬ ಮಡಿಯನ್ನುಟ್ಟು||೨||

ನಿರಾಕಾರ ಶಿವನಾ ಆಆಆಆ

ಓಂಕಾರ ಮಧ್ಯದಿ ನೋಡು||೨||

ಕಿತ್ತಳೆ ಎಂಬ ಹೊಂಬೆಳಕಲ್ಲಿ

ಚಿದಾನಂದನೋಡ ಗೋಡು

ತನ್ಮಯದಿ ಓಲಾಡು.

ಶಿವನ ಧ್ಯಾನ ಮಾಡು ಮನಕೆ ಶಾಂತಿ ನೀಡು

ಭೂತಂಗಳೈದನು ಕಟ್ಟಿ

ಇಂದ್ರಿಯಂಗಳದನು ಮೆಟ್ಟಿ||೨||

ಗುರು ಮಂತ್ರವನ್ನು ಪಠಿಸಿ

ಗಮ್ಯಸ್ಥಾನಕ್ಕೆ ಏರಿ

ಪರಮಪಾವನ ಸುಂದರ ಸ್ಪರ್ಶ

ದರ್ಶನ ಭವಹರಣ.

ಶಿವನ ಧ್ಯಾನ ಮಾಡು ಮನಕೆ ಶಾಂತಿ ನೀಡು

ದೃಷ್ಟಿ ಇಟ್ಟು ಮನದಿ ನೋಡು

ಗುರು ಕೊಟ್ಟ ಲಿಂಗದಿ ನೋಡು||೨||

ಲಿಂಗಾಂಗ ಸಮರಸವಾಗೆ

ಅಂಗಾಂಗ ಲಿಂಗವು ನೋಡು

ಭಕ್ತ ಮಾಹೇಶ ಪ್ರಸಾದಿ

ಶರಣ ಪ್ರಾಣಲಿಂಗಿ ಶರಣ ಐಕ್ಯನು ನೀನು.||೨||

ಶಿವನ ಧ್ಯಾನ ಮಾಡು ಮನಕೆ ಶಾಂತಿ ನೀಡು