ಜೋಳವ ಬೀಸುತ್ತ

ಜೋಳವ ಬೀಸುತ್ತ ಯಾರ್ಯಾರ ನೆನೆಯಲಿ

ಶ್ರೀ ಶೈಲ ಗಿರಿಯ ಮಲ್ಲಯನ

ಶ್ರೀ ಶೈಲ ಗಿರಿಯ ಮಲ್ಲಯನ ನೆನೆದರೇ

ಸಂಸಾರ ಆನಂದ ಸಾಗರಾ

ಪರಶಿವನ ಮಡದಿ ಶ್ರೀ ಭ್ರಮರಾಂಬೆ ನೆಲೆಸ್ಯಾಳೆ

ಶಕ್ತಿಯ ಆರಂಬ ಮಾಡ್ಯಾಳೆ

ಸಿರಿದೇವಿ ಸರ್ವಲೋಕಕೆ ಸಿದ್ದಿಶುಬಕೋರಿ

ಪಾತಾಳ ಗಂಗವ್ವ ನಿನಗೆ ಕೈ ಮುಗಿದೋರ

ನಿನ್ನಲ್ಲಿ ಮಿಂದು ಮಡಿಯಾದೆ

ಸರ್ವ ಪಾಪಗಳಿಂದ ದೊರಾದೆ

ಮಲ್ಲಿಕಾರ್ಜುನನ ಮುಂದೆ ಇರುವ ಕಡಲೆ ಬಸವ

ಕಡಲೆ ಬೆಲ್ಲ ನಿನಗೆ ಎಡೆ ಮಾಡಿ ತಿಳಿಸಿದರೆ

ಕಲಿಯುಗ ಕರಿ ಮುನಿಸಿ ಬೇರೆತ್ಯಾಂಗ

ಶ್ರೀ ಶೈಲ ನೀ ಹೋಗು ಸ್ವಾಮಿ ಸಿದ್ದರಾಮ ನೋಡು

ಹುಟ್ಟು ಸಾವುಗಳಿಂದ ಪಾರಾಗೋ

ಈ ಜನ್ಮ ಸಾಥರ್ಕವು ಕೈಲಾಸ ನಿನ ಮುಂದೆ