ಇದೇ ಶಿವಲಿಂಗ

ಇದೇ ಶಿವಲಿಂಗ ಎನ್ನ ಇಷ್ಟ ಲಿಂಗ

ಗುರುರೇಣುಕರು ಧರೆಗೆ ತಂದ ಲಿಂಗ :: ಪ::

ಆದಿಯಲ್ಲಿ ಪಂಚಮುಖದಿ ಪಂಚಾಚಾರ್ರುರು ಜನಿಸಿ

ಸಾಧು ಸತತ ನಿರತರೊಡನೆ ಬಿತ್ತಿ ಬಿತ್ತಿ ಬೆಳೆದ ಲಿಂಗ

ಆದಿ ಗಾದಿ ನಾದದಿಂದ ವೇದ ಆಗಮ ಸಾರುವ ಲಿಂಗ ::೧::

ಇಂದ್ರ ದೇವ ಪೂಜಿಪ ಲಿಂಗ ವಿಷ್ಹು ದೇವ ಪೂಜಿಪ ಲಿಂಗ

ಬ್ರಹ್ಮ ದೇವ ಸರಸ್ವತಿಯೊಡನೆ ವೀಣೆ ನುಡಿಸಿ ಬಜಿಸಿದ ಲಿಂಗ

ಬ್ರಹ್ಮ ಋಷಿಗಳಾದಿಯಾಗಿ ಪಂಚ ಸೂತ್ರದಿ ಪಡೆದ ಲಿಂಗ ::೨::

ಆತ್ಮ ಲಿಂಗ ಪಡೆಯಲು ಶಿವನ ರಾವಣನು ಪೂಜಿಪ ಲಿಂಗ

ಬ್ರಹ್ಮ ಹತ್ಯೆ ದೋಷಕೆ ರಾಮ ಪೂಜೆ ಮಾಡಿದ ಲಿಂಗ

ರಾಜ್ಯ ಭ್ರಷ್ಟ ಪಾಂಡವರುಪೂಜೆ ಮಾಡಿ ಜಯಿಸಿದ ಲಿಂಗ ::೩::

ಆದಿಯಲ್ಲಿ ಶಂಕರಾಚಾರ್ಯ ರೇಣುಕರಲಿ ಪಡೆದ ಲಿಂಗ

ವೇದ ಜ್ಞಾನಿ ಅಲ್ಲಮ ದೇವ ಗುಹೇಶ್ವರನಲಿ ಪಡೆದ ಲಿಂಗ

ಸಾಧು ಬಸವ ಧರ್ಮ ಕ್ರಾಂತಿ ಪಂಚಸೂತ್ರದಿ ಗುರುವಿನ ಲಿಂಗ ::೪::

ಸಿದ್ದರಾಮ ಕೊರಳೊಳು ಧರಿಸಿ ಸಿದ್ದ ಪುರುಷನಾದ ಲಿಂಗ

ಸಿದ್ಹಲಿಂಗ ಕೊರಳೊಳು ಧರಿಸಿ ಸಿದ್ದೇಶನಾದ ಲಿಂಗ

ಮರುಳ ಸಿದ್ದ ಕೊರಳೊಳು ಧರಿಸಿ ಮಹಾದೇವ ತಾನಾದ ಲಿಂಗ ::೫::