ಜಗದ್ಗುರು ಪಂಚಾಚಾರ್ಯರಿಗೆ ::೩::

ಶ್ರೀ ಶಿವಾಚಾರ್ಯರಿಗೆ ವಂದನೆ

ಜಗದಾಚಾರ್ಯರಿಗೆ ಅಬಿವಂದನೆ

ಪಂಚ ಪೀಠ ಧೀಶ ಜಗದ್ಗುರುಗಲೈವರಿಗೆ

ಶಿರ ಸಾಷ್ಟಂಗ ಪ್ರಣಾಮದ ಅರ್ಪಣೆ ::ಪ::

ಹಿರಿಯಲ್ಲಿ ಹಿರಿತನವ ಕಾಣುವ

ಅರಿಯದನ್ನು ಅರಿವಾಗಿಸಿ ತೋರುವ

ತೋರಿದನ್ನು ಕುರುಹಾಗಿಸಿ ಕರಸ್ಥಲಕೆ ನೀಡುವ

ಕಸದಲ್ಲಿ ರಸವನ್ನು ಅರಸುವ ಗಿರಿಭಾವ

ಆ ರಸದಲ್ಲಿ ಸಮರಸವ ಬೆರೆಸುವ ಸಮಬಾವ

ಸಮರಸದಲ್ಲಿ ಶಿವ ಸಮತೆ ಕಾಣ್ವ ವೀರಶೈವರಿಗೆ ::೧::

ಜೀವಾತ್ಮ ಪರಮಾತ್ಮನ ಕಿರಣ ಎಂಬ ಸಾಕ್ಷಿ ಇಷ್ಟಲಿಂಗ ಧಾರಣ

ಅಂಥ ಶ್ರೀ ಲಿಂಗಿಗೆ ಜನನ ಮರಣ ಇಲ್ಲಿನ್ನುವ

ಜನನಕ್ಕೆ ಲಿಂಗೋದ್ಬವವೆನ್ನುವ

ಮರಣಕ್ಕೆ ಲಿಂಗೈಕ್ಯ ವೆಂದೆನ್ನುವ

ಸೃಷ್ಟಿ ಸ್ಥಿತಿ ಲಯ ಲಿಂಗ ಲೀಲೆಯೆನ್ನುವ ಶಿವ ಸುತರ ::೨::

ಜೀವಿಗೆ ಆ ದೇವ ಪಟ್ಟ ಕಟ್ಟುವ ಆ ದೇವಗೆ ಜೀವ ಪ್ರತಿಷ್ಠಾಪಿಸುವ

ಜೀವ ದೇವರಲ್ಲಿ ನಿಜದ ಅಬಿನ್ನತೆಯ ಸ್ಥಾಪಿಸುವ

ಮತ್ರ್ಯ ಲೋಕವನ್ನು ಸತ್ಯಲೋಕಗೈಯುವ

ಧರ್ಮಕ್ಕೆ ಧರ್ಮ ಸಂಸ್ಥಾಪಿಸುವ

ಬವಕೆಲ್ಲಕೆ ಶಿವ ದೀಕ್ಷೆಯ ಕೊಡುವ ವೀರಶೈವರ ::೩::