ಜಗದ್ಗುರು ಪಂಚಾಚಾರ್ಯ ಆರತಿ

ಎತ್ತುವೆನಾರತಿ ಪರಮ ಜಗದ್ಗುರು ಪಂಚಾಚಾರ್ಯರಿಗೆ

ಜಗದ್ಗುರು ಪಂಚಾಚಾರ್ಯರಿಗೆ ::ಪ::

ಪರ ಶಿವ ಪಂಚಾಸ್ಯಗಳಿನ್ದುದಯಿಸಿ

ಪರಮತವನು ಜಯಿಸಿ |

ಉದಯಿಸಿ ಪರಮತವನು ಜಯಿಸಿ |

ಪರಿಪೂರ್ಣವೆನಿಸಿದ ಶಿವಮತವನು

ನೆಲೆಗೊಳಿಸಿದ ಪೂಜ್ಯರಿಗೆ |

ಜಗದ್ಗುರು ಪಂಚಾಚಾರ್ಯರಿಗೆ ::೧::

ಅಂಗ ಲಿಂಗಗಳ ತತ್ತ್ವಂ ಬೋಧಿಸಿ

ವಿರತಿ ಸಮೂಹಕ್ಕೆ |

ಬೋಧಿಸಿ ವಿರತಿ ಸಮೂಹಕ್ಕೆ

ಲಿಂಗಾನಂದದಿ ಲಿಂಗದೊಳಡಗಿದ

ಮಹಿಮಾ ಶೀಲರಿಗೆ |

ಜಗದ್ಗುರು ಪಂಚಾಚಾರ್ಯರಿಗೆ ::೨::

ಪಾವನ ಪರತರ ಜಂಗಮರಿಗೆ

ಗುರು ಸಾರ್ವಬೌಮರಾಗಿ

ಗುರು ಸಾರ್ವಬೌಮರಾಗಿ

ಕವಿ ಶ್ರೀ ಹರೀಶ್ವರ ಹೃದಯ ಕಮಲದೊಳು

ನೆಲೆಸಿದ ಪೂಜ್ಯರಿಗೆ

ಜಗದ್ಗುರು ಪಂಚಾಚಾರ್ಯರಿಗೆ ::೩::